ಸಮಾಜದಲ್ಲಿ ಶಿಕ್ಷಕರ ಪಾತ್ರ ಮುಖ್ಯ: ನಾಗಮ್ಮ ಕುಂಬಾರ

ಚಿತ್ತಾಪೂರ: ಸೆ.6:ಒಂದು ದೇಶದ ನಿರ್ಮಾಣ ಮತ್ತು ವಿನಾಶ ಮಾಡುವ ಎರಡೂ ಶಕ್ತಿ ಶಿಕ್ಷಕರಿಗೆ ಇದೆ. ವಿದ್ಯಾರ್ಥಿಗಳನ್ನು ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನಾಗಿ ರೂಪುಗೊಳಿಸುವ ಹೊಣೆ ಶಿಕ್ಷಕರಿಗೆ ಇದೆ ಎಂದು ಶಿಕ್ಷಕಿ ನಾಗಮ್ಮ ಕುಂಬಾರ ತಿಳಿಸಿದರು.

ತಾಲ್ಲೂಕಿನ ಕದ್ದರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಸ್ಮರಣಾರ್ಥವಾಗಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಶಿಕ್ಷಕ, ಫೇನ್ನು, ವಿದ್ಯಾರ್ಥಿ ಈ ಮೂರು ಒಂದಾಗಿದ್ದರೆ ಮಾತ್ರ ಸಮಾಜದ ಸರಿಯಾಗಿ ಇರಲು ಸಾಧ್ಯ ಎಂದರು.

ಡಾಕ್ಟರ್ ತಪ್ಪು ಮಾಡಿದರೆ ಒಬ್ಬ ರೋಗಿ ಸಾಯಬಹುದು, ಇಂಜಿನಿಯರ್ ತಪ್ಪು ಮಾಡಿದರೆ ಕಟ್ಟಡ ಬೀಳಬಹುದು. ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಶಾಲೆಯಲ್ಲಿನ ನೂರಾರು ಮಕ್ಕಳು ಭವಿಷ್ಯ ಹಾಳಾಗಬಹುದು ಹೀಗಾಗಿ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ತನ್ನದೇ ಸ್ಥಾನವಿದೆ ಎಂದರು.

ಶಾಲೆಯ ಮುಖ್ಯ ಗುರುಗಳಾದ ಚಂದ್ರಕಾಂತ್ ಐನಾಪುರ್ ಮಾತನಾಡಿ
ಕನಸುಗಳು ಬಾಳಿನ ಭರವಸೆಗಳನ್ನು ಈಡೇರಿಸುತ್ತವೆ. ಮಕ್ಕಳು ನಾನು ಮುಂದೆ ಏನಾಗಬೇಕು ಎಂದು ಕನಸುಗಳನ್ನು ಕಾಣಬೇಕು. ಪೆÇೀಷಕರು ತಮ್ಮ ಮಕ್ಕಳಲ್ಲಿ ಒಂದೆರಡು ಕನಸುಗಳನ್ನು ಕಾಣುತ್ತಾರೆ. ಆದರೆ, ಶಿಕ್ಷಕರು ಮಕ್ಕಳಲ್ಲಿ ನೂರಾರು ಕನಸುಗಳನ್ನು ಕಾಣುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಮಹಾದೇವಪ್ಪ, ಅತಿಥಿ ಶಿಕ್ಷಕ ಜಗದೇವ ಕುಂಬಾರ್, ಅಡುಗೆ ಸಿಬ್ಬಂದಿಗಳಾದ ಬೀಮಬಾಯಿ ಗುಡ್ಡಾಪುರ್, ನಾಗಮ್ಮ ಕುಂಬಾರ, ಸೇರಿದಂತೆ ಇತರರಿದ್ದರು.
ಪ್ರಾರ್ಥನ ಗೀತೆ ಪ್ರೇಮ, ಸಾಕ್ಷಿ, ಅಂಬಿಕಾ, ಮಧು ಹಾಡಿದರು. ನಿರೂಪಣೆ ಭಾಗ್ಯಶ್ರೀ ಮಾಡಿದರು.