ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬಹಳ ಮುಖ್ಯಃ ಭರತೇಶ ಕಲಗೊಂಡ

ವಿಜಯಪುರ, ಡಿ.1-ನಗರದ ಸದ್ಭಾವನಾ ಮಂಚದ ಮಾಸಿಕ ಸಭೆ, ಸದ್ಭಾವನಾ ಸಭಾಭವನ ವಿಜಯಪುರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ, ಭರತೇಶ. ಕಲಗೊಂಡ ಗೌರವಾದ್ಯಕ್ಷರು ಲಯನ್ಸ್ ಹಿರಿಯ ನಾಗರಿಕರ ವೇದಿಕೆ ವಿಜಯಪುರ ಅವರು, ಸದ್ಭಾವನಾ ಮಂಚದ ಸದಸ್ಯತ್ವದ ಸಂಖ್ಯೆಯನ್ನು ಹೆಚ್ಚಿಸಬೇಕು, ಮತ್ತು ಯುವಕರನ್ನು ಈ ಮಂಚಗೆ ಆವ್ಹಾನಿಸಬೇಕು. ಇದರ ಕಾರ್ಯಕ್ರಮಗಳನ್ನು ಶಾಲೆ, ಕಾಲೇಜುಗಳಲ್ಲಿ ಯುವ ಜನತೆಗೆ ತಿಳಿಯುವ ಹಾಗೆ ಮಾಡಬೇಕು ಎಂದು ಹೇಳಿದರು.
ಇನ್ನೊರ್ವ್ ಅತಿಥಿಗಳಾದ, ಫ್ರೊ.ಎಂ.ಡಿ.ಬಳಗಾನುರ ನಿವೃತ್ ಪ್ರಾಂಶುಪಾಲರು, ಅಂಜುಮನ ಕಾಲೇಜ್ ಸಿಂದಗಿ ಅವರು, ವಿವಿಧತೆಯಲ್ಲಿ ಅದ್ಭುತ ಐಕ್ಯತೆಗೆ ವಿಶ್ವದಲ್ಲಿಯೆ ಹೆಸರುವಾಸಿಯಾದ ದೇಶ ನಮ್ಮದು. ಸದರಿ ಪುರಾತನ ಕೀರ್ತಿಯನ್ನು ಇಂದು ಎತ್ತಿಹಿ ಡಿದು ಸಂರಕ್ಷಿಸುವದು ಆತೀ ಅವಶ್ಯಕವಿದೆ ಎಂದು ಹೇಳಿದರು.
ಸಭೆಯ ಅದ್ಯಕ್ಷ ಸ್ಥಾನ ವಹಿಸಿದ ಕೆ.ಎಫ್.ಅಂಕಲಗಿ ವಕೀಲರು, ಸಮಾಜದಲ್ಲಿ ಸೌಹಾರ್ದತೆ ಬೆಳೆಸುವ ಮಹದುದ್ದೆಶವನ್ನು ಹೊಂದಿರುವ, ಸದ್ಭಾವನಾ ಮಂಚ್, ಇದರ ವ್ಯಾಪಕ ಪರಿಚಯವನ್ನು ಸಮಾಜ ಹಾಗೂ ದೇಶದ ಹಿತ ಚಿಂತಕರಿಗೆ ತಲುಪಿಸಲು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಬೆಕು, ಹಾಗೂ ಸದರಿ ಮಹದುದ್ದೆಶದ ಸಾಧನೆಗಾಗಿ,ಶಾಲಾ, ಕಾಲೇಜುಗಳಲ್ಲಿ ಉಪನ್ಯಾಸ ಹಮ್ಮಿಕೊಳ್ಳಬೆಕೆ0ದು ಹೇಳಿದರು.
ಐ.ಎನ್.ಹುಲಿಕ ಟ್ಟಿ ಕಾರ್ಯದರ್ಶಿ ಕಾರ್ಯಕ್ರಮದ ಸ್ವಾಗತ, ನಿರೂಪಣೆ ಮಾಡಿದರು. ಸಭೆಯಲ್ಲಿ, ಶ್ರೀಮತಿ ವಿದ್ಯಾವತಿ.ಅಂಕಲಗಿ ವಕೀಲರು, ವ್ಹಿ.ಎಸ್. ಖಾಡೆ ವಕೀಲರು, ಸಹ ಸ0ಚಾಲಕರು, ಎ.ಎಸ್.ಕೋರಿ, ಅದ್ಯಕ್ಷರು ಲಯನ್ಸ್ ಹಿರಿಯ ನಾಗರಿಕರ ವೇದಿಕೆ ವಿಜಯಪುರ, ಅಗಸಬಾಳ. ಜಂಟಿ ಕಾರ್ಯದರ್ಶಿ ಮೆಹಮೂದ.ಕಾಜಿ, ಎಸ್.ಎಂ.ಕಾಜಿ, ಎ.ಆರ್.ನಾಸಿರ, ಇಬ್ರಾಹಿಮ್.ಭಕ್ಷಿ, ಎಸ್. ಎಸ್.ಬನಜಿಗೆರ, ರೆಬಿನಾಳ,ಮನಿಯಾರ, ಮುಂತಾದವರು ಹಾಜರಿದ್ದರು.