ಸಮಾಜದಲ್ಲಿ ಶಾಂತಿ ನೆಮ್ಮದಿ ಮೂಡಿಸಲು ಶರಣರ ಆದರ್ಶಗಳು ಬಹಳ ಮುಖ್ಯ: ಕಣಬೂರ

ವಿಜಯಪುರÀ, ಮಾ.30-ನಗರದ ಶ್ರೀ.ಪವಾಡ ಬಸವೇಶ್ವರ ದೇವಾಲಯದಲ್ಲಿ ಪೆÇ್ರಬಸ್ ಕ್ಲಬ್ ರೋಟರಿ ವಿಜಯಪುರದ ಮಾಸಿಕ ಸಭೆ ದಿನಾಂಕ 27 ರಂದು ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪೆÇ್ರೀ.ಎಸ್.ಎಂ.ಕಣಬೂರ ನಿವೃತ್ತ ಪ್ರಾಚಾರ್ಯರು, ಇಂದಿನ ಸಮಾಜದಲ್ಲಿ ಶಾಂತಿ ನೆಮ್ಮದಿ, ಸುಖ ಜೀವನ ಕಾಣಬೇಕೆಂದರೆ ಶರಣರ ಆದರ್ಶಗಳು ಬಹಳ ಮುಖ್ಯವಾಗಿವೆ ಎಂದು ಹೇಳಿದರು.
ಅದ್ಯಕ್ಷರಾದ ಆಯ್.ಎಂ.ಶೆಟಗಾರ ಅವರು ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳನ್ನು ಹೇಳುತ್ತಾ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಶ್ಯರು ಸಭೆಗೆ ಬರಬೇಕೆಂದು ಹೇಳಿದರು. ಎಸ್.ಎನ್.ಬಿರಾದಾರ ಪ್ರಾರ್ಥಿಸಿದರು, ಬಿ.ಎಸ್.ಅಂಗಡಿ ಸ್ವಾಗತಿಸಿದರು, ಭರತೇಶ.ಕಲಗೊಂಡ ವಂದನಾರ್ಪಣೆ ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡಿದರು.