ಸಮಾಜದಲ್ಲಿ ಶಾಂತಿ ಕದಡಿದರೆ ಕಾನೂನು ಕ್ರಮ

ಮಸ್ಕಿ,ಸೆ.೧೦- ಯುವಕರ ನಡೆಯುವ ಸಣ್ಣ ಪುಟ್ಟ ಘಟನೆಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಶಿವು ಕುಮಾರ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದ ಯುವಕರ ಗುಂಪು ಘರ್ಷಣೆ ನಿಮಿತ್ತ ಇಲ್ಲಿಯ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು. ಯುವಕರಲ್ಲಿ ನಡೆಯುವ ಚಿಕ್ಕ ಪುಟ್ಟ ಗಲಾಟೆಗಳಿಗೆ ಜಾತಿ ಲೇಪನ ಹಚ್ಚ ಬಾರದು ಸಮಾಜದ ಶಾಂತಿ ಕದಡುವ ಕಿಡಿಗೇಡಿಗಳಿಗೆ ಆಯಾ ಸಮಾಜಗಳ ಮುಖಂಡರು ಕಿವಿ ಹಿಂಡಿ ಬುದ್ದಿ ಹೇಳಬೇಕು ಹಿರಿಯರ ಮಾತು ಕೇಳದವರಿಗೆ ಪೊಲೀಸರು ಬುದ್ಧಿ ಕಲಿಸುತ್ತಾg. ಸಮಾಜದಲ್ಲಿ ಶಾಂತಿ ಕಾಪಾಡಲು ಪ್ರತಿ ಯೊಬ್ಬರು ಪೊಲೀಸ್ ಇಲಾಖೆ ಜತೆ ಕೈ ಜೋಡಿಸಬೇಕು ಎಂದರು.
ಪಟ್ಟಣದಲ್ಲಿ ಕಳೆದ ಎರಡು ದಿನ ಗಳ ಹಿಂದೆ ಯುವಕರ ಮಧ್ಯೆ ಗಲಾಟೆ ನಡೆದಿದೆ ಪೊಲೀಸರ ಸಮ್ಮುಖದಲ್ಲಿ ಸಮಾಜದ ಮುಖಂಡರು ಸಂಧಾನ ನಡೆಸಿದ್ದರೂ ಗುರುವಾರ ರಾತ್ರಿ ಯುವಕರ ನಡುವೆ ಘರ್ಷಣೆ ನಡೆದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಅಶೋಕನ ನಾಡಿನಲ್ಲಿ ಶಾಂತಿ ಕದಡುವ ಕೆಲಸ ಯಾರೂ ಮಾಡಕೂಡದು ಕ್ಷುಲಕ ಕಾರಣಕ್ಕೆ ಇಬ್ಬರು ಯುವಕರ ನಡುವೆ ನಡೆದ ಜಗಳಕ್ಕೆ ಜಾತಿ ಜಗಳ ಎಂದು ಹರಡಿ ಜನರನ್ನು ಎತ್ತಿ ಕಟ್ಟುವರ ವಿರುದ್ದ ಕಾನೂನು ಕ್ರಮ ಅನಿವಾರ್ಯ ನಡೆದ ಕಹಿ ಘಟನೆ ಮರೆತು ಎಲ್ಲ ವರ್ಗದ ಜನರು ಕೋಮು ಸಾಮರಸ್ಯ ಕಾಪಾಡ ಬೇಕು ಎಂದು ಹೇಳಿದರು. ಸಣ್ಣ ಪುಟ್ಟ ಜಗಳ ಗಳು ಯುವಕ ರಿಂದ ಆರಂಭ ಗೊಳ್ಳುತ್ತಿವೆ ಯುವ ಸಮುದಾಯ ಆವೇಶಕ್ಕೆ ಒಳಗಾಗ ಬಾರದು ಹಿರಿಯ ಮಾತಿಗೆ ಗೌರವ ಕೊಡ ಬೇಕ ಒಳ್ಳೆಯ ಶಿಕ್ಷಣ ಪಡೆದು ಕೊಂಡು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಎಡಿಷನಲ್ ಎಸ್ಪಿ ಶಿವು ಕುಮಾರ್ ಯುವಕರಿಗೆ ಕಿವಿ ಮಾತು ಹೇಳಿದರು.
ಮುಖಂಡರಾದ ಮಹಾದೇವಪ್ಪ ಗೌಡ, ದೊಡ್ಡಪ್ಪ ಮುರಾರಿ, ದಾನಪ್ಪ ನಿಲೂಗಲ್, ಬಸನಗೌಡ ಪಾಟೀಲ್, ಎಚ್ ಬಿ. ಮುರಾರಿ, ನೀಲ ಕಂಠಪ್ಪ ಭಜಂತ್ರಿ, ಚೇತನ್ ಪಾಟೀಲ್, ಅಭಿಜಿತ್ ಸಿಂ ಗ್ ಮಾಲಿ ಪಾಟೀಲ್, ಸಾರಪ್ಪ ಬಂಗಾಲಿ,ಪತ್ರ ಕರ್ತ ಅಬ್ದುಲ್ ಅಜೀಜ್ ಮಾತನಾಡಿದರು. ಲಿಂಗಸುಗೂರು ಡಿವೈಎಸ್ಪಿ ಮಂಜುನಾಥ, ಸಿಪಿಏ ಸಂಜೀವ ಬಳಿಗಾರ, ಪಿಎಸ್‌ಐ ಸಿದ್ರಾಮ ಬಿದ್ರಾಣಿ, ಗಬ್ಬೂರು ಠಾಣೆ ಪಿಎಸ್‌ಐ ಸಣ್ಣ ವಿರೇಶ ಇನ್ನಿತರರು ಇದ್ದರು.