ಸಮಾಜದಲ್ಲಿ ಮಹಿಳೆ ಸಬಲೆಯಾಗಿ ಬದುಕಬೇಕು:ಡಾ.ಅಂಬುಜಾ

ತಾಳಿಕೋಟೆ:ಮಾ.15: ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದ್ದು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆ ಅಬಲೆಯಾಗಿ ಬಧುಕದೇ ಸಬಲೆಯಾಗಿ ಬಧುಕಬೇಕೆಂದು ಬಳಗಾನೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಅಂಬುಜಾ ಜಿ ಚವ್ಹಾಣ ಅವರು ಹೇಳಿದರು.

ಪಟ್ಟಣದ ಶ್ರೀ ನಿಮಿಷಾಂಭಾ ಶಿಕ್ಷಣ ಸಂಸ್ಥೆಯ ಬಾಪೂಜಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಮಹಿಳೆ ಗೃಹಿಣಿಯಾಗಿ ಮನೆಯಲ್ಲಿ ಕುಳಿತುಕೊಳ್ಳುವಂತಹ ಕಾಲ ಬದಲಾಗಿದೆ ಸಮಾಜದಲ್ಲಿ ಬೆರೆತು ತನ್ನ ಹಕ್ಕುಗಳನ್ನು ಪಡೆದುಕೊಳ್ಳುವಂತಹ ಕಾಲಬಂದಿದೆ ಮಹಿಳೆಯರು ತಾವು ಕೂಡಾ ಮೋಬೈಲ್ ಮತ್ತು ಟಿವಿಯಲ್ಲಿಯ ದಾರವಾಹಿಗಳಿಗೆ ಅಂಟಿಕೊಳ್ಳುವದರ ಜೊತೆಗೆ ಮಕ್ಕಳಿಗೂ ಮೋಬೈಲ್ ಸಂಸ್ಕøತಿಯನ್ನು ಕಲಿಸುತ್ತಿರುವದು ಸಮಾಜಕ್ಕೆ ಕಂಠಕವಾಗಿತ್ತದೆ ಸಮಾಜದಲ್ಲಿ ಸಾಧನೆ ಮಾಡಬೇಕೆಂದರೆ ಮೋಬೈಲ್ ಸಂಸ್ಕøತಿಯಿಂದ ಹೊರಬಂದು ಸಮಾಜದಲ್ಲಿರುವ ಲಿಂಗ ತಾರತಮ್ಯವನ್ನು ಹೋಗಲಾಡಿಸುವಂತಹ ಕಾರ್ಯವಾಗಬೇಕು ನಮ್ಮ ದೇಶದ ಸಂಸ್ಕøತಿಯನ್ನು ಬೆಳೆಸುವಂತಹ ಕೆಲಸ ಮಾಡಬೇಕೆಂದರು.

ಇನ್ನೋರ್ವ ಅತಿಥಿ ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರದ ನಿವೃತ್ತ ವೈಧ್ಯಾಧಿಕಾರಿ ಸಿದ್ದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಕಮಲಾ ಸಜ್ಜನ ಅವರು ಮಾತನಾಡಿ ಮಹಿಳೆಯರಿಗೆ ತಾಯಿ ಎಂಬ ಸ್ಥಾನದಲ್ಲಿ ದೊಡ್ಡ ಗೌರವವಿದೆ ಮನೆಗೆ ಮೊದಲ ದಾರಿ ದೀಪವಾಗುವದರ ಜೊತೆಗೆ ಸಮಾಜಕ್ಕೆ ಬೆಳಕನ್ನು ನೀಡುವ ಕಣ್ಣಾಗಿದ್ದಾಳೆ ಇಂದಿನ ಸಾಮಾಜಿಕ ಯುಗದಲ್ಲಿ ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸುವ ದಿನವೇ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದೆ ಮಹಿಳೆ ಎಲ್ಲ ರಂಗಗಳಲ್ಲಿಯೂ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದ್ದು ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತಗೊಳ್ಳದೇ ಸಮಾಜದ ಮೊದಲನೆಯ ಹೆಜ್ಜೆಯಾಗಿ ಬೆಳೆಯಬೇಕೆಂದರು.

ಇನ್ನೋರ್ವ ಅತಿಥಿ ವೈಧ್ಯಾಧಿಕಾರಿ ಡಾ.ಪುನಿತ ಸಜ್ಜನ ಅವರು ಮಾತನಾಡಿ ಮಹಿಳೆಗೆ ಸಮಾಜದಲ್ಲಿ ಸಮಾನವಾದ ಹಕ್ಕು ಕಲ್ಪಿಸಲು ಸಮಾನತೆಯ ಹರಿಕಾರ ಬಸವಣ್ಣನವರು ಯಶಸ್ವಿಯಾಗಿದ್ದಾರೆ ಅಂದು ಬಸವಣ್ಣನವರು ಕಂದಾಚಾರ ಅಪನಂಬಿಕೆ ಹೋಗಲಾಡಿಸುವದರ ಜೊತೆಗೆ ಮಹಿಳೆಗೆ ಹಕ್ಕನ್ನು ಕಲ್ಪಿಸಿಕೊಟ್ಟ ಪರಿಣಾಮ ಇಂದು ಮಹಿಳೆ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯ ವರೆಗೂ ಬೆಳೆದು ನಿಂತಿರುವದು ನಿದರ್ಶನವಾಗಿದೆ ಎಂದರು.

ಶ್ರೀ ನಿಮಿಷಾಂಭಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸೀಮಾ ಜಿ ಚವ್ಹಾಣ ಅವರು ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಾಯಿಯಾಗಿ, ಹೆಂಡತಿಯಾಗಿ ಸಹೋದರಿಯಾಗಿ ಮಗಳಾಗಿ ಹುಟ್ಟಿ ಬರುತ್ತಾಳೆ ಮಹಿಳೆ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಮಾಡುತ್ತಾ ಬಂದಿದ್ದಾಳೆ ಈ ಮಹಿಳಾ ದಿನಾಚರಣೆ ದಿನವನ್ನು ಅತ್ಯಂತ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಮಹಿಳೆಯರ ಸಮಾನ ಹಕ್ಕುಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆ ತಡೆಯುವದರ ಜೊತೆಗೆ ಸಮಾಜಕ್ಕೆ ಬೆಳಕಾಗುವಂತಹ ಸಂದೇಶ ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು.

ಶಾಲಾ ಮುಖ್ಯಗುರುಗಳಾದ ಶಿವಾನಂದ ಹಿರೇಮಠ ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಘನಶಾಮ ಚವ್ಹಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಮಯದಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಆಟ, ಪಾಠ,ದ ಜೊತೆಗೆ ನಮ್ಮ ದೇಶದ ಸಂಸ್ಕøತಿ ಕಲಿಸಿ ಸ್ಪೂರ್ತಿಯಾದ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳಿಗೆ ಅಭಿನಂದಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಡಾ.ಶ್ರೀಮತಿ ಅಮೃತಾ ಪಿ ಸಜ್ಜನ, ಚಿದಾನಂದ ಕಟ್ಟಿಮನಿ, ಮಂಗಳಾ ಗೌಡಗೇರಿ, ಶಿಲ್ಪಾ ಬಬಲೇಶ್ವರ, ಸಹೀದಾ ವಾಲಿಕಾರ, ಸುಮಾ ಹಿರೇಮಠ, ರೇಖಾ ಬಿಂಗೆ, ಮುತ್ತು ಕರಡಿ, ರೇಶ್ಮಾ ಮುಳವಾಡ, ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.