ಸಮಾಜದಲ್ಲಿ ಬದಲಾವಣೆ ನಮ್ಮ ಮೂಲಕವೇ ಆಗಬೇಕು

ದಾವಣಗೆರೆ.ಸೆ.೧೬:  ಈಗ ಕಂಡು ಬರುತ್ತಿರುವ ಭ್ರಷ್ಟ ಸಾಮಾಜಿಕ ಪರಿಸ್ಥಿತಿಯಲ್ಲಿ ಅಮೂಲಾಗ್ರ ಬದಲಾವಣೆ ತರದಿದ್ದಲ್ಲಿ ಮುಂದಿನ ಪೀಳಿಗೆಯ ಭವಿಷ್ಯ ಕಗ್ಗತ್ತಲಲ್ಲಿ ಮುಳುಗಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಎಚ್ಚರಿಸಿದರು. ಸರ್ ಎಂ.ವಿ. ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥಾಪನಾ ದಿನ ಹಾಗೂ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾವೀ ಪ್ರಜೆಗಳಾಗಿರುವ ಯುವ, ವಿದ್ಯಾರ್ಥಿ ಸಮೂಹಕ್ಕೆ ತಮ್ಮ ಮುಂದಿನ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಹೊಣೆಗಾರಿಕೆ ಬಹಳಷ್ಟು ಇದೆ. ಸಮಾಜದಲ್ಲಿ ಬದಲಾವಣೆ ನಮ್ಮ ಮೂಲಕವೇ ಆಗಬೇಕು. ಹಾಗಾಗಿ ಯುವ, ವಿದ್ಯಾರ್ಥಿ ಸಮೂಹ ಬದಲಾವಣೆಯ ಮು ಂದಿನ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಬೇಕು ಎಂದು ತಿಳಿಸಿದರು.ಯಾರಿಗೋ ಲಂಚ ನೀಡಿ ಸರ್ಕಾರಿ ಕೆಲಸ, ಅಽಕಾರ ಪಡೆಯುವವರು ಆ ಹಣವನ್ನು ಮರಳಿ ಪಡೆಯಲು ಅವರು ಕೊಟ್ಟಂತಹ ಹಣಕ್ಕಿಂತ ಹತ್ತು ಪಟ್ಟು ಮೊತ್ತವನ್ನು ಲಂಚದ ರೂಪದಲ್ಲಿ ಪಡೆಯುತ್ತಾರೆ. ಆದರೆ, ಹಣದ ದಾಹ ಮುಗಿಯುವುದೇ ಇಲ್ಲ. ಮುಂದುವರಿಯುತ್ತಲೇ ಹೋಗುತ್ತದೆ. ಒಂದು ರೀತಿಯಲ್ಲಿ ಸಮಾಜವೇ ಲಂಚ, ಭ್ರಷ್ಟಾಚಾರ ಕಾರಣವಾಗುತ್ತಿದೆ. ಜನರೇ ಭ್ರಷ್ಟಾಚಾರ ಬೆಂಬಲಿಸುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.ಎಷ್ಟೇ ಹಣ, ಅಧಿಕಾರ, ಅಂತಸ್ತು ಏನೆಲ್ಲ ಇದ್ದರೂ ತೃಪ್ತಿ ಆಗುವುದೇ ಇಲ್ಲ. ಇರುವುದರಲ್ಲೇ ತೃಪ್ತಿ ಪಡುವ ಮನೋಭಾವ ಮತ್ತು ಮಾನವೀಯತೆ ಗುಣ ಮೈಗೂಡಿಸಿಕೊಂಡರೆ ಮಾತ್ರ ಭ್ರಷ್ಟಾಚಾರಕ್ಕೆ ನಾವೇ ಕಡಿವಾಣ ಹಾಕಬಹುದು. ಕಾನೂನಿನ ಚೌಕಟ್ಟಿನಲ್ಲಿ ಗಳಿಸಿದ ಹಣ, ಆಸ್ತಿಯನ್ನೇ ಸಂತೋಷದಿಂದ ಅನುಭವಿಸಬೇಕು. ಆದರೆ, ದುರಾಸೆಯಿಂದ ಎಷ್ಟೇ ಹಣ ಇದ್ದರೂ ತೃಪ್ತಿ ಎನ್ನುವುದೇ ಇರುವುದಿಲ್ಲ. ಅಕ್ರಮವಾಗಿ ಗಳಿಸಿದಷ್ಟೂ ಮತ್ತೆ ಮತ್ತೆ ಬೇಕು ಎನ್ನುವ ಮನಸ್ಥಿತಿ ಇದೆ. ಹಾಗಾಗಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿಶ್ಲೇಷಿಸಿದರು.ಎರಡು ವರ್ಷ ಕಾಡಿದ ಮಹಾಮಾರಿ ಕೊರೊನಾಗೆ ಲಸಿಕೆ ಇದೆ. ಪ್ರಾಣಾಂತಕ ಕ್ಯಾನ್ಸರ್‌ಗೂ ಸರ್ಜರಿ ಇದೆ. ಆದರೆ, ದುರಾಸೆಗೆ ಯಾವುದೇ ಲಸಿಕೆ, ಸರ್ಜರಿ ಇಲ್ಲ. ಹೆಚ್ಚು ಹಣ ಗಳಿಸಿ, ದೊಡ್ಡ  ಶ್ರೀಮಂತರಾಗಿ ಯಾರೂ ಬೇಡ ಎನ್ನು ವುದೇ ಇಲ್ಲ. ಆದರೆ, ಆ ಹಣ ಕಾನೂನಿನ ಚೌಕಟ್ಟಿನೊಳಗೆ ಸಂಪಾದಿಸಿದ್ದಾಗಿರಬೇಕು ಎಂದು ತಿಳಿಸಿದರು.೧೯೮೫ರಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾಗುತ್ತಿದ್ದ ೧ ರೂಪಾಯಿಯಲ್ಲಿ ಕೇವಲ ೧೫ ಪೈಸೆಯ ಷ್ಟು ಕೆಲಸ ನಡೆಯುತ್ತಿತ್ತು ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಽಯೇ ಹೇಳಿದ್ದರು. ಆದರೆ ಈಗ ೧೦೦ ರೂಪಾಯಿಯಲ್ಲಿ ೧೫ ಪೈಸೆಯಷ್ಟು ಕೆಲಸ ಕೂಡ ಆಗದಂತಹ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.ನಾನು ಅಕಾರದಲ್ಲಿದ್ದಾಗ ನನ್ನ ಪಾಲಿನ ಕರ್ತವ್ಯವನ್ನ ಪ್ರಾಮಾಣಿಕವಾಗಿ ಮಾಡಿದ್ದೇನೆ. ಬೇರೆಯವರು ಅದನ್ನು ಮಾಡದ ಕಾರಣ ನನ್ನನ್ನು ಜನ ಗೌರವಿಸುತ್ತಾರೆ. ಇಡೀ ಭೂಮಂಡಲದಲ್ಲಿ ನನ್ನದು ಎಂದಿರುವುದು ಒಂದೇ ಒಂದು ಫ್ಲಾಟ್. ಹೀಗಾಗಿ ನಾನು ನಿವೃತ್ತನಾದರೂ ವಿರೋಽಗಳು ನನ್ನನ್ನು ಏನೂ ಮಾಡಲಾಗುತ್ತಿಲ್ಲ. ಹಾಗೆ ಪ್ರತಿಯೊಬ್ಬರು ಬದುಕುವಂತಾಗಬೇಕು ಎಂದು ಆಶಿಸಿದರು.ಸರ್ ಎಂವಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎಸ್.ಜೆ. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವರಾಜ್, ಸೈಯದ್ ಸಂಷೀರ್, ಅಧ್ಯಕ್ಷ ಡಾ. ವಿ. ರಾಜೇಂದ್ರನಾಯ್ಡು, ದೇವರಾಜ್ ಸರಾಪದ, ಎಲ್.ವಿ. ಪ್ರದೀಪ್ ಕುಮಾರ್ ಇತರರು ಇದ್ದರು.

Attachments area