ಸಮಾಜದಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ: ವಿವೇಕಾನಂದ

ಚಿಂಚೋಳಿ,ನ.15- ನೆರೆಯ ಬೀದರ ಜಿಲ್ಲೆಯ ವನಮಾರಪಳ್ಳಿ ಯಿಂದ ಎಚ್.ಕೆ ವಿವೇಕಾನಂದ ಅವರು ಪಾದಯಾತ್ರೆ ಮುಖಾಂತರ ನಿನ್ನೆ ಸಂಜದೆ ಚಿಂಚೋಳಿಗೆ ಆಗಮಿಸಿದ ಅವರನ್ನು ಚಿಂಚೋಳಿ ಸಾಹಿತಿಗಳಾದ ಎಸ್.ಎನ್ ದಂಡಿನಕುಮಾರ ಅವರು ಸನ್ಮಾನಿಸಿ ಸ್ವಾಗತಿಸಿಕೊಂಡರು.
ತಮ್ಮ ಪಾದಯಾತ್ರೆಯ ಕುರಿತು ಎಚ್.ಕೆ ವಿವೇಕಾನಂದ ಮಾತನಾಡಿ, ನಾನು ಉತ್ತರ ಕರ್ನಟಕದ ಬೀದರ ಗಡಿ ಜಿಲ್ಲೆಯ ವನಮಾರಪಳ್ಳಿ ಯಿಂದ ದಕ್ಷಿಣ ಕರ್ನಾಟಕ ಜಿಲ್ಲೆಯ ಚಾಮರಾಜನಗರ ವರೆಗೆ ಪಾದಯಾತ್ರೆ ಮಾಡತ್ತೀದ್ದೇನೆ ಇದರ ಉದ್ದೇಶ ಸಮಾಜದಲ್ಲಿ ಜಾಗೃತಿ ಹಾಗೂ ಸುಧಾರಣೆಗಾಗಿ ಯುವಕರಿಗೆ ಹಾಗೂ ಹಿರಿಯರಿಗೆ ಆದರ್ಶ ಆಗಲಿದದೆ.
ಯುವಕರು ಕೆಟ್ಟ ಚಟಗಳಿಗೆ ಬಲಿಯಾಗಬಾರದು, ಯಾವುದೇ ಅಹಿತಕರ ಘಟನೆಗಳು ಮಾಡಬಾರದು ಹಾಗೂ ಹಿರಿಯರು ಇಂದಿನ ಯುವಕರಿಗೆ ಒಳ್ಳೆಯ ಭವಿಷ್ಯ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದರು.
ಇಂದಿನ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ ಹಾಗೂ ಚಲನಚಿತ್ರಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಿದ್ದೇನೆ ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಧ್ಯಮಗಳು ಸತ್ಯತೆಯನ್ನೆ ಬರೆಯಬೇಕು ಸಮಾಜಕ್ಕೆ ಹಾಗೂ ದೇಶಕ್ಕೆ ಒಳ್ಳೆಯ ಸಂದೇಶಗಳನ್ನು ಮುಟ್ಟಿಸಬೇಕು ಎಂದು ಅವರು ಮನವಿ ಮಾಡಿದರು. ತಮ್ಮ ಈ ಪಾದಯಾತ್ರೆಯಲ್ಲಿ ಜಗದೀಶರಾವ ಬೀರಾದರ. ಸಂತೋಷ ಬೋರೆ. ಅವರು ಸಾಥ್ ನಿಡುತ್ತೀದ್ದಾರೆ ಎಂದರು.
ಅವರೊಂದಿಗೆ ಹಿರಿಯ ಪತ್ರಕರ್ತರಾದ ಜಗನ್ನಾಥ ಶೇರಿಕರ. ಮೈಬೂಬಪಾಶಾ ಅಳವಾರ. ಬಸವರಾಜ ಐನೋಳ್ಳಿ. ಮಹೇಮೂದ ಪಠಾಣ. ಶಿವಕುಮಾರ ದಂಡಿನ. ಕಿರಣ್ ಕುಮಾರ ದಂಡಿನ. ರವಿಕುಮಾರ. ಸುನಿಲ ಕುಮಾರ. ಉಪಸ್ಥಿತರಿದ್ದರು.