ಸಿಂಧನೂರು,ಮಾ.೨೮- ಎಲ್ಲಾ ಸ್ಥಾನ ಸನ್ಮಾನ ಗಳಿಂತ ಸಮಾಜದಲ್ಲಿ ಡಾಕ್ಟರೇಟ್ ಪದವಿ ಅತ್ಯಂತ ಗೌರವ ತರುವಂತದು ಎಂದು ಡಾ.ಹೆಚ್. ಮರಿಯಪ್ಪ ಹೆಡಿಗಿಬಾಳ ವಕೀಲರು ಹೇಳಿದರು.
ನಗರದ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳಿಗೆ ಡಾಕ್ಟರೇಟ ಪದವಿ ನೀಡಿ ಸನ್ಮಾನಿಸಿ ಮಾತನಾಡಿದ ಅವರು ಈ ದೀನ ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ಸುಂದರ ಹಾಗೂ ಸಾಧನೆ ಮಾಡಿದ ದೀನ ವಾಗಿದೆ ಎಂದರು.
ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಕಡಿಮೆ ಫೀಸ್ ಕಟ್ಟಿಸಿಕೊಂಡು ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡುತ್ತಿದ್ದು ಅದಕ್ಕಾಗಿ ಚರ್ಚ ಪಾದರ ಹಾಗೂ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ವೃಂದದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ನನ್ನ ಮಗ ಕೂಡ ಇದೆ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ ಎಂದರು.
ಎಲ್‌ಕೆಜಿ ಮಕ್ಕಳಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿ ಒಂದನೆಯ ತರಗತಿಗೆ ಪಾಸ್ ಮಾಡಿ ಕಳಿಸಲಾಯಿತು ಎಲ್‌ಕೆಜಿ ಮಕ್ಕಳಿಗೆ ಚರ್ಚ ಪಾದರ ಜ್ಞಾನ ಪ್ರಕಾಶ ಹಾಗೂ ಶಾಲೆಯ ಆಡಳಿತ ಮಂಡಳಿಯಿಂದ ಗೌರವ ಡಾಕ್ಟರೇಟ ನೀಡಲಾಯಿತು ಮಕ್ಕಳು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಗುರುಗಳಾದ ಜೋತಿ. ಉಮಾ. ಸೈಯದ್. ಶಿಲ್ಪ. ಸವಿತಾ ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.