ಔರಾದ :ಎ.22: ಸಮಾಜದಲ್ಲಿ ಎಲ್ಲರೂ ಸಹಬಾಳ್ವೆ ನಡೆಸಿದರೆ ಮಾತ್ರ ಶಾಂತಿ, ನೆಮ್ಮದಿ ನೆಲೆ ನಿಲ್ಲುತ್ತದೆ. ಎಲ್ಲ ಧರ್ಮಗಳ ಬೋಧನೆ ಶಾಂತಿ ಪಾಲಿಸುವಿಕೆಯಾಗಿದೆ.ಎಲ್ಲ ಧರ್ಮಗ್ರಂಥಗಳು ಮನುಷ್ಯತ್ವದ ಮಹತ್ವ ಸಾರುತ್ತವೆ. ಅದನ್ನು ನಾವೆಲ್ಲ ಪಾಲಿಸಬೇಕು ಎಂದು ಸಮಾಜ ಸೇವಕ ಹಣಮಂತರಾವ ಪಾಟೀಲ ಹೇಳಿದರು.
ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಬುಧವಾರ ಹಣಮಂತರಾವ ಪಾಟೀಲ ಅವರು ಆಯೋಜಿಸಿದ್ದ ಇಫ್ತಾರ ಕೋಟದಲ್ಲಿ ಮಾತನಾಡಿದ ಅವರು ಪರಸ್ಪರ ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಇಂದಿನ ದಿನಗಳಲ್ಲಿ ಜಾತಿಗಳ ನಡುವೆ ವಿವಾದ ತರುವ ಕುತಂತ್ರಗಳಿಗೆ ಬಲಿಯಾಗದೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಒಂದೇ ಎನ್ನುವ ಸಾರವನ್ನು ನಮ್ಮ ತಲೆ ತಲಾಂತರಗಳಿಗೆ ಭಾವೈಕ್ಯತೆಯಿಂದ ಬದುಕುವುದು ಮಾದರಿಯಾಗಬೇಕು ಎಂದು ಹೇಳಿದರು.
ಹಾಫಿಜ್ ಸಮಿಉರ್ ರಹಮಾನ್ ಮಾತನಾಡಿ, ಮನುಕುಲದ ಮಾರ್ಗದರ್ಶನಕ್ಕಾಗಿ ದೇವರು ಪವಿತ್ರ ಕುರಾನ್ ಗ್ರಂಥ ಭೂಲೋಕಕ್ಕೆ ಅವತರಿಣಿಸಿದ್ದು ರಂಜಾನ್ ತಿಂಗಳಲ್ಲಿ. ದೇವನ ಈ ಅನುಗ್ರಕ್ಕೆ ಕೃತಜ್ಞತೆ ಸಲ್ಲಿಸಲು ಮುಸ್ಲಿಮರು ರಂಜಾನ್ ತಿಂಗಳಲ್ಲಿ 30 ದಿನಗಳ ಕಾಲ ಉಪವಾಸ ಆಚರಿಸುತ್ತಾರೆ. ಆತ್ಮಶುದ್ಧಿ ಮತ್ತು ದೇವ ಸಂಪ್ರೀತಿಗೆ ಪಾತ್ರವಾಗಲು ಅತ್ಯಂತ ಪ್ರಶಸ್ತ ತಿಂಗಳು ಇದಾಗಿದೆ. ಇದಲ್ಲದೇ ಪ್ರತಿಯೊಬ್ಬ ಶ್ರೀಮಂತ ತನ್ನ ಸಂಪತ್ತಿನಲ್ಲಿ ಬಡವರಿಗೆ ಪಾಲು ಕೆuಟಿಜeಜಿiಟಿeಜಡುವ “ಜಕಾತ್’ (ಕಡ್ಡಾಯ ದಾನ) ಸಹ ಈ ತಿಂಗಳಲ್ಲಿ ನೀಡಲಾಗುತ್ತದೆ. ಸಹನೆ, ಸಹಬಾಳ್ವೆ, ಸಹಾನುಭೂತಿ, ಮಾನವೀಯತೆ, ಉದಾರತೆ ರಂಜಾನ್ ತಿಂಗಳು ನಮಗೆ ಕಲಿಸಿಕೆuಟಿಜeಜಿiಟಿeಜಡುವ ಜೀವನ ಪಾಠಗಳು ಎಂದು ಹೇಳಿದರು.
ನಿತ್ಯ ಗ್ರಾಮದಲ್ಲಿ ಮುಸ್ಲಿಂ ಬಾಂಧವರಿಗಾಗಿ ಹಿಂದೂ ಧರ್ಮದ ಸಹೋದರರು ಇಫ್ತಾರ ಕೋಟ ಆಯೋಜಿಸುತಿದ್ದು ಇದು ಪರಸ್ಪರ ಪ್ರೀತಿಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಅಜೀಜೋದ್ದೀನ್ ಮಚಕುರಿ, ಚಾಂದಪಾಶಾ, ಘುಡುಸಾಬ, ಹುಸೇನಸಾಬ, ಫತ್ರುಸಾಬ, ಖುದಬೊದ್ದೀನ್, ಇಸ್ಮಾಯಿಲಸಾಬ, ಜಾವೀದಪಾಶಾ, ಮೋಹಿನ್, ಶಫಿಯೋದ್ದಿನ್, ಕಲಿಮಪಾಶಾ, ಅಬ್ದುಲ್ ಅಸದ, ಜಹಾಂಗಿರಮಿಯ್ಯಾ, ಅಲಿಮಪಾಶಾ, ಲಾಯಕಲಿ, ಇಮ್ರಾನ್, ಸೋಹೇಲ, ಆಫೆÇ್ರೀಜ, ಕಲಿಮ, ಅವೇಸ್ ಸೇರಿದಂತೆ ಇತರರು ಇದ್ದರು.