ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ

ಚಿತ್ರದುರ್ಗ,ಸೆ.18; ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
 ವಿಶ್ವಕರ್ಮ ಸಮುದಾಯ ಪ್ರತಿಯೊಂದು ಕಸುಬಿನ ಮೂಲವಾಗಿದ್ದಾರೆ. ಇಂದಿಗೂ ಪಂಚಕಸುಬುಗಳನ್ನು ಅನುಸರಿಸುವ ವಿಶ್ವಕರ್ಮ ಜನಾಂಗವು ಸಮಾಜದ ಎಲ್ಲ ವರ್ಗದ ಜನರಿಗೂ ಅಗತ್ಯವಾದ ವಸ್ತುಗಳನ್ನು ತಯಾರಿಸಿ ಕೊಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
 ವಿಶ್ವಕರ್ಮ ಸಮಾಜದ ನರೇಂದ್ರಚಾರ್ ಮಾತನಾಡಿ, ವಿಶ್ವಕರ್ಮ  ದಿನಾಚರಣೆಯನ್ನು ದೇಶಾದ್ಯಂತ ಮಾಡಲಾಗುತ್ತಿದ್ದು, ವಿಶ್ವಮಟ್ಟದಲ್ಲಿ ಏನೇ ಕಾರ್ಯಗಳು ನಡೆದರೂ ಅದು ವಿಶ್ವಕರ್ಮರಿಂದಲೇ, ದೇವತೆಗಳನ್ನು ನಿರ್ಮಾಣ ಮಾಡಿದವ ವಿಶ್ವಕರ್ಮ. ಇಡೀ ಸೃಷ್ಠಿಯ ಎಲ್ಲ ವಸ್ತುಗಳು ವಿಶ್ವಕರ್ಮ ಅವರಿಂದಲೇ ನಿರ್ಮಿತವಾಗಿವೆ. ಎಲ್ಲಿ ಕರ್ಮವಿದೆಯೋ ಅಲ್ಲಿ ವಿಶ್ವಕರ್ಮ ಇರುತ್ತಾನೆ. ಸೃಷ್ಟಿಯ ಎಲ್ಲಾ ಕಾರ್ಯಗಳಲ್ಲಿಯೂ ವಿಶ್ವಕರ್ಮ ಇದ್ದಾನೆ ಎಂದು ತಿಳಿಸಿದರು.
ಮಾನವನ ಹುಟ್ಟಿನಿಂದ ಮರಣದವರೆಗೂ ವಿಶ್ವಕರ್ಮ ಬೇಕು. ಎಲ್ಲರಿಗೂ ವಿಶ್ವಕರ್ಮ ಅತೀ ಅವಶ್ಯವಾಗಿ ಬೇಕು. ವಿಶ್ವಕರ್ಮರಿಗೂ ಎಲ್ಲರೂ ಬೇಕು. ಹಾಗಾಗಿ ವಿಶ್ವಕರ್ಮ ಜನಾಂಗಕ್ಕೆ ಸರ್ಕಾರದ ಹೆಚ್ಚಿನ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಂಕರಾಚಾರ್, ಕಾರ್ಯದರ್ಶಿ ಶಿವಾಚಾರ್, ಸಮುದಾಯದ ಸ್ವಾಮಿನಾಥ್, ನಾಮನಿರ್ದೇಶಿಕ ನಗರಸಭೆ ಸದಸ್ಯರಾದ ಪಿ.ರಮೇಶಾಚಾರ್. ಎಸ್.ವಿಜಯಲಕ್ಷ್ಮಿ, ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.