
ಹುಬ್ಬಳ್ಳಿ,ಸೆ18: ವಿಶ್ವಕರ್ಮರು ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.
ಮಕ್ಕಳಿಗೆ ಅವರ ಬಗ್ಗೆ ತಿಳಿಸಿಕೊಡಬೇಕು ಎಂದು ಹುಬ್ಬಳ್ಳಿ ಶಹರ ತಹಸೀಲ್ದಾರರಾದ ಕಲಗೌಡ ಪಾಟೀಲ ಹೇಳಿದರು.
ತಾಲೂಕು ಆಡಳಿತ ಸೌಧದ ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಭಾರತದ ಸಂಸ್ಕೃತಿ ವಿಶ್ವದಲ್ಲೇ ಮನ್ನಣೆ ಪಡೆದಿದೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳಬಾರದು. ಯೋಗವು ವಿಶ್ವಕ್ಕೆ ಮಾದರಿಯಾಗಿದೆ. ಚಾಲುಕ್ಯರು, ಹೊಯ್ಸಳರು ಸೇರಿದಂತೆ ಹಿಂದಿನ ರಾಜ ಮಹಾರಾಜರ ಬಗ್ಗೆ ಅರಿವು ಮೂಡಿಸಬೇಕಿದೆ. ಮಕ್ಕಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಬೇಕು ಎಂದರು.
ಮುಖಂಡರಾದ ಗಿರೀಶ ಬಡಿಗೇರ ಮಾತನಾಡಿ, ಸಮಾಜಕ್ಕೆ ವಿಶ್ವಕರ್ಮರ ಬಗ್ಗೆ ತಿಳುವಳಿಕೆ ಮೂಡಿಸಬೇಕಾಗಿದೆ. ಸರ್ಕಾರಗಳು ನಮ್ಮ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಉಮಾ ಬಡಿಗೇರ, ಸ್ಫೂರ್ತಿ ಬಡಿಗೇರ, ಮೇಘಾ ಬಡಿಗೇರ, ಮೀನಾ,
ಗೌರಿ ಪುರೋಹಿತ, ಪ್ರದೀಪ್ ಪತ್ತಾರ, ಅರ್ಚನಾ, ಕವನಾ,
ವಿಕಾಸ ಬಡಿಗೇರ, ಅಕ್ಷತಾ, ಪೂಜಾ ಪತ್ತಾರ, ಬಾಲಕೃಷ್ಣ ಅರ್ಕಸಾಲಿ, ಗಾಯತ್ರಿ ಪತ್ತಾರ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಆರ್.ಕೆ.ಪತ್ತಾರ, ನರಸಿಂಹ ಜೋಡಿಹಳ್ಳಿ, ಮನೋಹರ ಲಕ್ಕುಂಡಿ, ಭಾರತಿ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಹೇಶ ಪತ್ತಾರ ಸ್ವಾಗತಿಸಿದರು. ಗಾಯತ್ರಿ ಪತ್ತಾರ ಪ್ರಾರ್ಥಿಸಿದರು. ಶಂಕರ ಪುರೋಹಿತ ವಂದಿಸಿದರು.