ಸಮಾಜಕ್ಕೆ ಮಠಗಳ ಕೊಡುಗೆ ಅನನ್ಯ : ಡಾ. ಜಾಧವ್

ಕಾಳಗಿ :ಮಾ.29: ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ರೇವಗ್ಗಿ(ರಟಕಲ್) ರೇವಣಸಿದ್ಧೇಶ್ವರ ಗುಡ್ಡದಲ್ಲಿ ದಿ.ಗೋಪಾಲದೇವ ಜಾಧವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಪ್ರತಿಸ್ಥಾಪಿಸಲಾದ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ಸೋಮವಾರ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಂಸದ ಡಾ. ಉಮೇಶ ಜಾಧವ, ಶಾಸಕ ಡಾ. ಅವಿನಾಶ ಜಾಧವ ಲೋಕಾರ್ಪಣೆ ಮಾಡಿದರು.

ರೇಣುಕಾಚಾರ್ಯ ಮೂರ್ತಿ ಲೋಕಾರ್ಪಣೆ ಅಂಗವಾಗಿ ಹೋನ್ನಕಿರಣಗಿಯ ವೈದಿಕ ಬಳಗದ ವತಿಯಿಂದ ಸಂಸದ ಡಾ. ಉಮೇಶ ಜಾಧವ ಕುಟುಂಬದ ನೇತೃತ್ವದಲ್ಲಿ ಹೋಮ, ಹವನ, ವಿಶೇಷ ಪೂಜೆ ಜರುಗಿದವು.

ನಂತನ ಸುಧಾಮ ಕಲ್ಯಾಣ ಮಂಟಪದಲ್ಲಿ ನಡೆದ ಧರ್ಮಸಭೆಯನ್ನು ಉದ್ದೇಶಿಸಿ ಸಂಸದ ಡಾ. ಉಮೇಶ ಜಾಧವ ಮಾತನಾಡಿ, ಜನರ ಸಂಕಷ್ಟಗಳನ್ನು ನಿವಾರಿಸುವಲ್ಲಿ ಮಠಗಳು ಶ್ರಮಿಸುತ್ತಿದ್ದು, ಸಮಾಜಕ್ಕೆ ಮಠಗಳ ಕೊಡುಗೆ ಅನನ್ಯವಾಗಿದೆ. ಮಠಗಳು ಸಮಾಜದಲ್ಲಿನ ಜನರನ್ನು ಉಪದೇಶ ಮಾಡುವ ಮೂಲಕ ಸನ್ಮಾರ್ಗದಲ್ಲಿ ಕೊಂಡ್ಯೋಯುತ್ತಿರುವುದು ಶ್ಲಾಂಘನೀಯವಾಗಿದೆ ಎಂದರು.

ರೇವಣಸಿದ್ದೇಶ್ವರ ಗುಡ್ಡ ಪವಿತ್ರ ಸ್ಥಳವಾಗಿದ್ದು, ಬೇಡಿದವರ ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನುವಾಗಿದ್ದಾನೆ. ರೇವಣಸಿದ್ದೇಶ್ವರ ಆಶಿರ್ವಾದದಿಂದಲೇ ಇಂದು ನಮ್ಮ ಮನೆಯಲ್ಲಿ ಸಂಸದ, ಶಾಸಕ, ಎಮ್‍ಎಲ್‍ಸಿ ಗಳಾಗಿದ್ದೆವೆ. ನನ್ನ ತಂದೆ ಹೆಸರಿನ ದಿ. ಗೋಪಾಲದೇವ ಜಾಧವ ಮೆಮೋರಿಯಲ್ ಟ್ರಸ್ಟ್ ವತಿಯಿಂದ 51 ಅಡಿ ಎತ್ತರದ ರೇಣುಕಾಚಾರ್ಯರ ಮೂರ್ತಿ ಮರುಪ್ರತಿಷ್ಟಾಪಿಸಲಾಗಿದ್ದು, ರೇವಣಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿಗೆ ನನ್ನ ಕುಟುಂಬ ಸದಾ ಸಿದ್ಧವಾಗಿದೆ ಎಂದು ಹೇಳಿದರು.

ಬೆಣ್ಣೆತೋರಾ ಜಲಾಶಯದಿಂದ 245ಕೋಟಿ ರೂ. ವೆಚ್ಚದಲ್ಲಿ ಜೆಜೆಎಮ್ ಯೋಜನೆ ಅಡಿ ರೇವಗ್ಗಿಯಲ್ಲಿ ಎರಡು ಎಕರೆಯಲ್ಲಿ ನೀರು ಶೇಖರಣೆ ಘಟಕ ಸ್ಥಾಪಿಸಿ ಸುಮಾರು 97ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ಸಕ್ಕರೆ ಕಾರ್ಖಾನೆ, ಐನಾಪೂರ ಏತನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ. ಬರುವ ಚುನಾವಣೆಯಲ್ಲಿ ನನ್ನ ಮಗ ಡಾ. ಅವಿನಾಶ ಜಾಧವಗೆ ಎಲ್ಲಾ ಶ್ರೀಗಳು ಹಾಗೂ ಮತದಾರರು ಆಶಿರ್ವಾದಿಸಿ ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಟಕಲ್ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳು, ನರನಾಳ ಪೂಜ್ಯ ಶಿವಕುಮಾರ ಶಿವಾಚಾರ್ಯರು ಆಶಿರ್ವಚನ ನೀಡಿದರು.

ಹೊನ್ನಕಿರಣಗಿಯ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು, ಸೊನ್ಯಾಲಗಿರಿಯ ಪೂಜ್ಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ರಟಕಲ ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಸೂಗೂರು(ಕೆ) ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ಚಂದನಕೇರಾ ಪೂಜ್ಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, , ಗೌರಿಗುಡ್ಡದ ರೇವಣಸಿದ್ದ ಶರಣರು ಸಾನಿದ್ಯ ವಹಿಸಿದ್ದರು.
ಗ್ರೇಡ-1 ತಹಸೀಲ್ದಾರ ಸಂಗಯ್ಯ ಸ್ವಾಮಿ, ನಾಗನಾಥ ತರಗೆ, ಶಿವರಾಜ ಪಾಟೀಲ ಗೊಣಗಿ, ಬಸವರಾಜ ಪಾಟೀಲ್ ಬೆಡಸೂರ, ಇಮ್ತಿಯಾಜ್ ಅಲಿ ಹೆರೂರ, ರಾಜು ಜಾಧವ್, ದತ್ತಾತ್ರೇಯ ರಾಯಗೋಳ, ಸಂಜುಕುಮಾರ ತೆಳಮನಿ, ಗೊರಕನಾಥ ರಾಠೋಡ, ಸಿದ್ದಯ್ಯ ಮಠಪತಿ, ಸಿದ್ದು ಚಟ್ನಳ್ಳಿ, ರೇವಣಸಿದ್ಧ ಬಡಾ, ನಾಗೇಶ ಬಿರಾದಾರ್, ವೀರಯ್ಯ ಮಠಪತಿ ಮುಕರಂಬಾ, ಶಾಂತಕುಮಾರ ನಾಗೂರ, ಬಸವರಾಜ ಹುಡುಗಿ, ರವಿ ಸಿಂಗೆ, ಶಿವಶರಣಪ್ಪ ಚನ್ನೂರ್, ಗಂಗಾಧರ ಸ್ವಾಮಿ ರೇವಗ್ಗಿ, ವಿಜಯಕುಮಾರ ಚೇಂಗಟಾ, ಪ್ರಶಾಂತ ಕದಮ, ರಮೇಶ ಕಿಟ್ಟದ, ರಾಮು ರಾಠೋಡ, ಶರಣು ಬುಬಲಿ, ಜಗನ್ನಾಥ ತೇಲಿ, ಸುಂದರ ಡಿ. ಸಾಗರ, ಇತರರು ಇದ್ದರು.