ಸಮಾಜಕ್ಕೆ ಒಳಿತಾಗುವಂತಹ ಕಾರ್ಯ ನಿಷ್ಠೇಯಿಂದ ಮಾಡಬೇಕು:ಮಾನಯ್ಯ ಬಡಿಗೇರ

ಕಲಬುರಗಿ,ಮಾ.16:ನಮ್ಮ ಕಾರ್ಯ ಮತ್ತು ಕೆಲಸಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಹಾಗೂ ನಮಗೆ ಗುರಿತಲುಪಿಸುತ್ತವೆ. ನಮ್ಮ ಸ್ವ-ಪ್ರಚಾರಕ್ಕಾಗಿ ಯಾವುದೇ ಸಮಾಜಿಕ ಮಾದ್ಯಮ ಹಾಗೂ ಇತರ ಪ್ರಚಾರ ಮಾದ್ಯಮಗಳಿಗೆ ಮೊರೆಹೊಗಬೇಕಾಗಿಲ್ಲ. ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳನ್ನು ನಿಷ್ಠೇಯಿಂದ ಮಾಡಬೇಕು. ಜೀವನವು ಒಂದು ಕಲೆ. ವಾಸ್ತುಶಿಲ್ಪ ಹಾಗೂ ಕಲೆ ಇವೇರಡು ವಾಸ್ತುಶಿಲ್ಪಿಗಳ ಜೀವನದ ಅವಿಭಾಜ್ಯ ಅಂಗ ಎಂದು ಸುರಪುರ ತಾಲೂಕಿನ ಶಿಲ್ಪಕಲಾ ವಿದ್ವಾನ ಹಾಗೂ ಅಯೋದ್ಯಾ ರಾಮ ಮಂದಿರ ನಿರ್ಮಾಣದ ಗರ್ಭಗುಡಿಯ ವಿನ್ಯಾಸ ಸಲಹೆಗಾರರಾಗಿ ಆಯ್ಕೆಯಾದ ಮಾನಯ್ಯ ಬಡಿಗೇರ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಯೋಜಿಸಿದ್ದ ಮೂರುದಿನಗಳ ಆರ್ಚಿಸ್ ಶುಭಾರಂಭ – 2023 ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು ಸಮಾಜದ ಎಲ್ಲ ಕ್ಷೇತ್ರದಲ್ಲೂ ವಾಸ್ತುವಿನ್ಯಾಸದ ಅವಶ್ಯಕತೆ ಇದೆ ಅದಕ್ಕಾಗಿ ವಿವಿಧ ರೀತಿಯ ವಾಸ್ತುವಿನ್ಯಾಸದಲ್ಲಿ ನಿಪುಣತೆಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಗೌರವ ಅತಿಥಿಗಳಾಗಿ ಅಗಮಿಸಿದ ಕಲಬುರಗಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಯಾನಂದ ಪಾಟೀಲ ಅವರ ಮಾತನಾಡಿ ಶ್ರೀ ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಶ್ವಕರ್ಮರನ್ನು ಸಮಾಜಕ್ಕೆ ನೀಡುತ್ತಿದ್ದು ಮುಂಬರುವ ದಿನಗಳಲ್ಲಿ ಅವರು ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಬೇಕು. ಕಲೆ ಮತ್ತು ವಾಸ್ತುವಿನ್ಯಾಸ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಅವರು ಮಾತನಾಡಿ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಒಂದು ವಿಭಾಗವಾಗಿ ಕಾರ್ಯನಿರ್ವಹಿಸುತ್ತದ್ದ ವಾಸ್ತುಶಿಲ್ಪವನ್ನು ಸ್ವತಂತ್ರ ಮಹಾವಿದ್ಯಾಲಯವಾಗಿ ಪರಿವರ್ತಿಸಿ ಅದಕ್ಕೆ ತುಮಕೂರಿನ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಅಭಿವೃದ್ಧಿ ಪಡೆದು ಹೆಮ್ಮರವಾಗಿ ಬೆಳೆಯಲಿದೆ ಎಂದು ತಿಳಿಸಿದರು.
ಈ ಸಂದಭದಲ್ಲಿ ವಾಸ್ತುಶಿಲ್ಪ ಮಹಾವಿದ್ಯಾಲಯದ ವೆಬಸೈಟ್, ಇನಸ್ಟಾಗ್ರಾಂ, ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಲಾಯಿತು, ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸ್ಕೂಲ್ ಆಫ್ ಆರ್ಕಿಟೆಕ್ಚರ್‍ನ ಪ್ರಾಚಾರ್ಯರಾದ ಪ್ರೊ. ಪರಂಜ್ಯೋತಿ ಪಾಟೀಲ ಅವರು ಉದ್ಘಾಟನಾ ಸಮಾರಂಭಕ್ಕೆ ಅಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು ಹಾಗೂ ವಿದ್ಯಾರ್ಥಿಗಳು ನಿರೂಪಿಸಿದರು.

ಈ ಸಮಾರಂಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಜಗನ್ನಾಥ ಬಿಜಾಪೂರ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಖಂಡೆರಾವ, ವಿನಯ ಪಾಟೀಲ, ಡಾ. ಅನೀಲ ಪಟ್ಟಣ, ಡಾ. ಕೈಲಾಶ ಪಾಟೀಲ, ಸಾಯಿನಾಥ ಪಾಟೀಲ, ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ, ಉಪ್ರಾಚಾರ್ಯರಾದ ಡಾ. ಕಲ್ಪನಾ ವಾಂಜರಖೇಡಿ, ಡಾ. ಭಾರತಿ ಹರಸೂರ, ಪರೀಕ್ಷಾ ವಿಭಾಗದ ಮುಖ್ಯಾಧಿಕಾರಿ ಪ್ರೊ. ರವೀಂದ್ರ ಲಠ್ಠೆ, ವಿಭಾಗಗಳ ಮುಖ್ಯಸ್ಥರು, ಆವ್ಹಾನಿತರು ಹಾಗೂ ಡಿನ ಡಾ. ಎಸ್ ಆರ್. ಹೊಟ್ಟಿ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯದ ಗಣೇಶ ಪಾಟೀಲ, ರೇಶ್ಮಾ ಪರ್ವಿನ್, ಶುಭಾಂಗಿ ಭಾಸ್ಗಿ, ಕೀರ್ತಿ ಹಾಲಕಾಯಿ, ಪ್ರಿಯಾಂಕ ಹಿಬಾರೆ, ಶೋಭಾ ದಸ್ತಾಪೂರ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕರಾಗಿ ಅಮೃತ ಸಾಹು, ಕಾಶಿ ಚೆಟ್ಟಿ, ಅಂಜುಕುಮಾರಿ ಒಂಟಿ ತಮ್ಮ ಕಾರ್ಯವನ್ನು ನಿರ್ವಹಿಸಿದರು.