ಸಮಾಜಕ್ಕಾಗಿ ಶಿವಾರ್ಪಿತ ಭಾವದಿಂದ ಮಾಡುವ ಕೆಲಸ ಕಾಯಕ

ಇಂಡಿ : ನ.11: ಮನುಷ್ಯನು ತನ್ನ ನಿರ್ವಹಣೆಗಾಗಿ ಅವಲಂಬಿಸಿರುವ ವೃತ್ತಿ ಕಾಯಕ, ತನಗಾಗಿ ಮತ್ತು ಸಮಾಜಕ್ಕಾಗಿ ಶಿವಾರ್ಪಿತ ಭಾವದಿಂದ ಕೈಕೊಂಡು ಕಾಯಕರಾದರೆ ಅದುವೆ ಕೈಲಾಸ ಎಂದು ವಿಜಯಪುರದ ವಿಶ್ರಾಂತ ಉಪನ್ಯಾಸಕ ಸಿದ್ದಣ್ಣ ಉತ್ನಾಳ ಹೇಳಿದರು.

ಪಟ್ಟಣದ ಬಸವರಾಜೇಂದ್ರ ದೇವಸ್ಥಾನದ ಆವರಣದಲ್ಲಿ ಶ್ರೀ ಬಸವರಾಜೇಂದ್ರ ಸಮಿತಿ ಮತ್ತು ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ವತಿಯಿಂದ ನಡೆದ ಶರಣರ ಸಂದೇಶ ಮತ್ತು ನರಸಯ್ಯ ಇಪ್ಪಕಾಯಲ್ ಪುಣ್ಯ ಸ್ಮರಣೆ ನಿಮಿತ್ಯ ನಡೆದ 65 ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಓಂ ಕಾರ ಸಿದ್ದಾರೂಢ ಆಶ್ರಮದ ಡಾ. ಸ್ವರೂಪಾನಂದ ಶ್ರೀಗಳು ಮಾತನಾಡಿ ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು.ಕೆಲಸವೇ ಪೂಜೆ. ಕೆಲಸವೇ ದೇವರು. ಕೆಲಸದಲ್ಲಿಯೇ ಕೈಲಾಸವೆಂದು ಬಸವಣ್ಣನವರು ಹೇಳಿದ್ದರು ಎಂದರು.

ಅಂತರ ರಾಷ್ಟ್ರೀಯ ಮಟ್ಟದ ಚಿಕ್ಕ ಮಕ್ಕಳ ತಜ್ಞರ ಸಮಾವೇಶದಲ್ಲಿ ಚಿನ್ನದ ಪದಕ ವಿಜೇತ ಡಾ|| ಆದರ್ಶ ಪ್ರಭಾಕರ ಬಗಲಿ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನಿತ ಆದರ್ಶ ಬಗಲಿ, ಶ್ರಿಮತಿ ಎನ್.ಟಿ.ತಂಗಾ, ರಾಘವೇಂದ್ರ ಕುಲಕರ್ಣಿ, ಎಸ್.ಜಿ.ಸಣ್ಣಕ್ಕಿ, ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಆರ್.ವಿ.ಪಾಟೀಲ, ಬಿ.ಎಸ್.ಪಾಟೀಲ ಮಾತನಾಡಿದರು.

ವೇದಿಕೆಯಮೇಲೆಸಮಿತಿಯಅಧ್ಯಕ್ಷಐ.ಬಿ.ಸುರಪುರ,ಸಂಶೋಧಕಡಾ.ಎಸ್.ಕೆ.ಕೊಪ್ಪ,ಜಿ.ವಿ.ಗಾಳಿಮಠ,ಕೆ.ಜಿ.ನಾಟಿಕಾರ,ಬಾಲಾಜಿ ಇಪ್ಪಕಾಯಲ್,ಸಿ.ಎಂ.ಉಪ್ಪಿನ,ಜಿ.ಎಸ್.ವಾಲಿ, ಶಿವಲಿಂಗಪ್ಪ ಪಟ್ಟದಕಲ್ಲ,ಎಚ್.ಎಸ್.ಎಳೆಗಾಂವ, ಎಸ್.ವಿ.ಹೂಗಾರ, ಎಸ್.ಎಸ್.ಈರನಕೇರಿ,ಜಾಮಗೊಂಡಿ, ಸೋಮಶೇಖರ ಸುರಪುರ, ಪ್ರಭು ನಾಡಗೌಡ ಮತ್ತಿತರಿದ್ದರು.