ಸಮಸ್ಯೆ ಅಲಿಸಿದ ನಗರ ಸಭೆ ಅಧ್ಯಕ್ಷರು

ಬಾಗಲಕೋಟೆ,ನ.12 : ನಗರದ ವಾರ್ಡ ನಂ.9 ರ ವ್ಯಾಪ್ತಿಯ ಎಂ.ಜಿ.ರಸ್ತೆ, ಕಿರಾಣಿ ಮಾರ್ಕೆಟ್, ಟಾಂಗಾ ಸ್ಟ್ಯಾಂಡ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ ಅವರು ನಗರಸಭೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ವಾರ್ಡ್ ಸದಸ್ಯ ಸ್ಮೀತಾ ಪವಾರ ವಾರ್ಡ್ ನಂಬರ್ 9 ರಲ್ಲಿ ಸರಿಯಾಗಿ ಸ್ವಚ್ಛತೆ ಇಲ್ಲ, ಚರಂಡಿಯಲ್ಲಿ ಗಲೀಜು ತುಂಬಿಕೊಂಡಿದೆ ಮಾರುಕಟ್ಟೆ ಪ್ರದೇಶವಾಗಿದ್ದರಿಂದ ತ್ಯಾಜ್ಯ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ, ಆದರೇ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಿ ಎಲ್ಲೆಂದಲ್ಲಿ ತ್ಯಾಜ್ಯ ಆವರಿಸಿದೆ ಎಂದು ವಾಸ್ಥವ ಸಮಸ್ಯೆ ತೆರೆದಿಟ್ಟರು.
ತಕ್ಷಣದಲ್ಲಿಯೇ ನಗರಸಭೆ ಕಾರ್ಮಿಕರು ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಅಲ್ಲದೆ ಜೆಸಿಬಿ ಮುಖಾಂತರ ಯುಜಿಡಿ, ಚರಂಡಿಗಳಲ್ಲಿನ ಗಲೀಜು ಹೊರ ತೆಗೆಯಲಾಯಿತು. ಮಧ್ಯಾಹ್ನ 12 ವರೆಗೂ ವಾರ್ಡ್ 9 ಕ್ಕೆ ಹೊಸ ರೂಪ ನೀಡಿದ್ದು ಗಮನ ಸೆಳೆಯಿತು. ಈ ವೇಳೆ ಸಾರ್ವಜನಿಕರಲ್ಲಿ ಸ್ವಚ್ಛತೆ, ತ್ಯಾಜ್ಯವಿಲೇವಾರಿ ಕುರಿತು ಜಾಗೃತಿ ಮೂಡಿಸಲಾಯಿತು. ಸ್ವಚ್ಛತೆ ವಿಷಯಕ್ಕೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದಲ್ಲಿ ನಗರಸಭೆಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಸೇರಿದಂತೆ ನಗರಸಭೆ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.