ಸಮಸ್ಯೆಗಳ ಸುಳಿಯಲ್ಲಿ ಸಾರ್ವಜನಿಕ ಆಸ್ಪತ್ರೆ

ದೇವದುರ್ಗ.ನ.೧೫-ಸಮೀಪದ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಕ್ಕೆ ಸುಮಾರು ೩೦ ಹಳ್ಳಿಗಳು ಬರುತ್ತವೆ, ಆದರೆ ಈ ಒಂದು ಆಸ್ಪತ್ರೆಯಲ್ಲಿ ಒಂದು ಇದ್ದರೆ ಇನ್ನೊಂದು ಇಲ್ಲದಂತೆ ಆಗಿದೆ ಈ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ಇದ್ದರು ಇಲ್ಲದಂತೆ ಮೌನ ವಹಿಸಿದ್ದು ಯಾಕೆ ಎಂಬುದು ಸಾರ್ವಜನಿಕರ ಮಾತು ಆಗಿದೆ.
ಜಾಲಹಳ್ಳಿ ಪಟ್ಟಣಕ್ಕೆ ದೊಡ್ಡ ಸಮುದಾಯ ಆರೋಗ್ಯ ಕೇಂದ್ರ ಇದಾಗಿದ್ದು, ಕೇವಲ ಒಬ್ಬರೇ ವೈದ್ಯಾಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು ಅವರು ಕೂಡ ಮಹಿಳಾ ವೈದ್ಯರು ಇರುವುದರಿಂದ ಅವರು ರಾಯಚೂರನಿಂದ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ ವಾರದಲ್ಲಿ ಎರಡು ಮೂರು ದಿನ ಆಸ್ಪತ್ರೆಗೆ ಬರುತ್ತಾರೆ. ಅದು ಸಹಾ ಅವರು ಟೈಂ ಸರಿಯಾಗಿ ಆಸ್ಪತ್ರೆಯಲ್ಲಿ ಇರುವುದಿಲ್ಲ ಬೆಳಿಗ್ಗೆ ರಾಯಚೂರನಿಂದ ಲೇಟಾಗಿ ಬಂದು ಮರಳಿ ಮಧ್ಯಾಹ್ನನನೇ ಮರಳಿ ಊರಿಗೆ ಹೋಗುತ್ತಾರೆ ಇನ್ನು ಇಬ್ಬರು ಅರೆ ಕಾಲಿಕ ವೈದ್ಯರು ಇದ್ದು ಅವರು ಸಹಾ ಸರಿಯಾದ ಸಮಯಕ್ಕೆ ಆಸ್ಪತ್ರೆಯಲ್ಲಿ ಇರುವುದಿಲ್ಲ, ಇನ್ನೂ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ವೈದ್ಯರು ದಿನ ರಾಯಚೂರಿನಿಂದ ಬಂದು ಕೆಲಸ ನಿರ್ವಹಿಸಲು ಸಾಧ್ಯ ಆಗುತ್ತಿಲ್ಲ,
ಇಲ್ಲಿ ತುಂಬಾನೇ ಹುದ್ದೆಗಳು ಖಾಲಿ ಇದ್ದಾವೆ, ಆಸ್ಪತ್ರೆಗೆ ಎಂಬಿಬಿಎಸ್ ಖಾಯಂ ವೈದ್ಯರ ಅವಶ್ಯಕತೆ ಇದೆ, ಅವರೆಲ್ಲ ಕೆಲಸವನ್ನು ಅರೆ ಕಾಲಿಕ ವೈದ್ಯರೇ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ, ಇನ್ನು ಕೆಲವರು ಹುದ್ದೆಯಲ್ಲಿ ತಾವು ಇದ್ದರು ಅವರು ಆಸ್ಪತ್ರೆಯ ಒಳಗಡೆ ಇರಲ್ಲ, ಆಸ್ಪತ್ರೆ ಒಳಗಡೆ ಔಷಧಿಗಳು ಕೆಲವು ಸಿಕ್ಕರೂ ಕೂಡ ಹೊರಗಡೆ ಮೆಡಿಕಲ್ ನಿಂದ ತರಬೇಕಂತೆ, ಮೆಡಿಕಲ್ ಆಫೀಸ್ ರನ್ನು ಕೇಳಿದರೆ ರೋಗಿಗಳು ಕೇಳುವ ಔಷಧಿಗಳು ನಮ್ಮ ಆಸ್ಪತ್ರೆಯಲ್ಲಿ ಇಲ್ಲ ಯಾವ ಯಾವ ಔಷಧಿ ಇಲ್ಲ ಅದು ನಾವು ನಮ್ಮ ಮೇಲಿನ ಅಧಿಕಾರಿಗಳಿಗೆ ಕೂಡಲೇ ಕಳಿಸಿ ಕೊಡಿ ಅಂತ ನಾವು ಮೇಲಿನ ಅಧಿಕಾರಿಗಳಿಗೆ ಗಮನಕ್ಕೆ ತಂದರು ಸಹಾ ಅಲ್ಲಿಂದ ಇದುವರೆಗೆ ಕಳಿಸಿ ಕೊಟ್ಟಿಲ್ಲ ಆಗಾಗಿ ನಾವು ಹೊರಗೆ ಕಳಿಸುತ್ತೇವೆ ಅಂತ ಹೇಳುತ್ತಾರೆ.
ಶೌಚಾಲಯ ಇದ್ದರು ಇಲ್ಲದಂತೆ:. ಆರೋಗ್ಯ ಕೇಂದ್ರದ ಒಳಗೆ ಎರಡು ಶೌಚಾಲಯ ಇದ್ದು ಅದಕ್ಕೆ ಸರಿಯಾದ ರೀತಿಯಲ್ಲಿ ಬಳಕೆ ಸ್ವಚ್ಚತೆ ಇದೆ ಗಬ್ಬು ನಾರುತ್ತಿದೆ, ಆಸ್ಪತ್ರೆಯಲ್ಲಿ ಎರಡೇ ಶೌಚಾಲಯ ಇರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಳಕೆ ಮಾಡಲು ತುಂಬಾ ಸಮಸ್ಯೆ ಆಗಿದೆ ಇನ್ನು ಶೌಚಾಲಯ ಪುರುಷರಿಗೆ ಮಹಿಳೆಯರಿಗೆ ಬೇರೆ ಬೇರೆ ಇಲ್ಲದ ಕಾರಣ ಪುರುಷರು ಮಹಿಳೆಯರು ಒಂದೇ ಶೌಚಾಲಯ ಬಳಕೆ ಮಾಡುವಂತೆ ಆಗಿದೆ.

ಸ್ವಚ್ಛತೆ ಮರೀಚಿಕೆ
ಪಟ್ಟಣಕ್ಕೆ ದೊಡ್ಡದಾದ ಈ ಆಸ್ಪತ್ರೆ ದಿನಾಲೂ ನೂರಾರು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ ಆದರೆ ರೋಗಿಗಳು ಕೊಡಲು ಹೋರಗೆ ಸ್ವಚ್ಛವಾದ ಸ್ಥಳವಿಲ್ಲ ಆಸ್ಪತ್ರೆಯ ಸುತ್ತಲೂ ಎಲ್ಲಿ ನೋಡಿದರೂ ಕಸ ಕಲ್ಲು, ಮಧ್ಯೆ ಸೇವಿಸಿದ ಬಿಯರ್ ಬಾಟಲ್, ಗಿಡ ಗಂಟೆಯಿಂದ ಕೂಡಿದೆ ಆಸ್ಪತ್ರೆಗೆ ಬರುವ ರೋಗಿಗಳು ಉಷಾರ್ ಆಗಿ ಹೋಗುವುದಕ್ಕೆ ಸಾಧ್ಯವಿಲ್ಲ ಮತ್ತೆ ರೋಗ ಹೆಚ್ಚಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ

ಬೆಡ್‌ಶೀಟ್, ಕುಡಿವ ನೀರಿಲ್ಲ
ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಕೂಡ ಇಲ್ಲದಂತೆ ಆಗಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್‌ಶೀಟ್ ಇಲ್ಲ, ಇಲ್ಲಿ ಶುದ್ಧ ಕುಡಿಯುವ ನೀರು ಗರ್ಭಿಣಿ ಮಹಿಳೆಯರಿಗೆ ಬಿಸಿನೀರು ಶೌಚಾಲಯ ಸೇರಿ ಎಕ್ಸರೇ ಇದ್ದು ಇಲ್ಲದಂತೆ ಆಗಿದೆ. ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಸಂಘ-ಸಂಸ್ಥೆಗಳು ವೈದ್ಯಾಧಿಕಾರಿಗಳಿಗೆ, ತಾಲೂಕಿನ ಜನಪ್ರತಿನಿಧಿಗಳೇ ಸೇರಿ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಉಪಯೋಗವಾಗಿಲ್ಲ.
ಕಳೆದ ತಿಂಗಳು ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿಯಲ್ಲಿ ಸಹಾ ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚೆ ಆಗಿದೆ. ಶೀಘ್ರ ಸಮಸ್ಯೆ ಬಗೆಹರಿಸಲು ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ ಇದುವರೆಗೂ ಒಂದು ಸಮಸ್ಯೆ ಪರಿಹಾರ ಕಂಡಿಲ್ಲ. ಗಮನ ಹರಿಸಬೇಕಾದ ಅಧಿಕಾರಿಗಳು ಮೌನ ವಹಿಸಿದ್ದಾರೆ. ಇನ್ನಾದರೂ ತಾಲೂಕಿನ ಜನಪ್ರತಿನಿಧಿಗಳು ಜಿಲ್ಲಾ ಆಡಳಿತ, ತಾಲೂಕು ಆಡಳಿತ, ಆರೋಗ್ಯ ರಕ್ಷಾ ಸಮಿತಿ ಇತ್ತಕಡೆ ಗಮನಹರಿಸಿ ಸಮಸ್ಯೆ ಬಗೆಹರಿಸುತ್ತಾ ಕಾದುನೋಡಬೇಕಾಗಿದೆ.