ಸಮಸ್ಯೆಗಳ ಸುರಿಮಳೆಯಲ್ಲಿ ಮುರಾರ್ಜಿ ವಸತಿ ಶಾಲೆ: ವಿಧ್ಯಾರ್ಥಿಗಳ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಶಹಾಪುರ:ಮಾ.23:ವಸತಿ ನಿಲಯದಲ್ಲಿನ ಗುಣಮಟ್ಟದ ಆಹಾರ, ವಾರ್ಡನ್‍ನ ಅವಾಚ್ಯ ಶಬ್ದಗಳು ಮತ್ತು ಮಕ್ಕಳ ಕೈಯಲ್ಲಿ ಆರೋಗ್ಯ ತಪಾಸಣೆ, ಇಂಗ್ಲೀಷ್ ಶಿಕ್ಷಕರ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಟ್ಟುಕೊಂಡು ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು 250ಕ್ಕೂ ಹೆಚ್ಚಿನ ಮಕ್ಕಳು ವಿಜಯಪುರ-ಹೈದರಾಬಾದ್ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ವಾರ್ಡನ್ ಮತ್ತು ಇಂಗ್ಲೀಷ್ ಶಿಕ್ಷಕರು ಒಬ್ಬರೆ ಇದ್ದಾರೆ. ವಸತಿ ನಿಲಯದಲ್ಲಿ ಮೇನು ಚಾರ್ಟ ಇಲ್ಲ. ದಿನಾಲು ಒಂದೆ ಊಟ, ನಮಗೆ ಪೌಷ್ಠಿಕ ಆಹಾರ ಸಿಗುತಿಲ್ಲ. ವಾರ್ಡನ್ ಎರಡು ಹುದ್ದೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಹಾಯಕರು ತಪಾಸಣೆಗೆ ಮತ್ತು ಮಾತ್ರೆಗಳ ವಿತರಣೆಯನ್ನು ವಿಧಾರ್ಥಿಗಳ ಕೈಯಲ್ಲಿ ಕೊಟ್ಟಿರುತ್ತಾರೆ ಎನಾದರು ಎಚ್ಚುಕಡಿಮೆಯಾದರೆ ಯಾರು ಹೋಣೆ, ಎಲ್ಲ ವಿಚಾರಗಳು ಪ್ರಾಂಶುಪಾಲರ ಗಮನಕ್ಕೂ ತಂದರು ಅವರು ಸ್ಪಂದಿಸುತ್ತಿಲ್ಲ. ಆದ್ದರಿಂದ ನಾವು ಪ್ರತಿಭಟನೆಗೆ ಇಳಿದಿದ್ದೆವೆ ಎಂದು ವಸತಿ ಶಾಲೆಯ ವಿಧ್ಯಾರ್ಥಿಗಳು ನುಡಿಯಾಗಿದ್ದು ಕೂಡಲೆ ಪರಿಹಾರ ನೀಡಬೇಕು ಆಗ್ರಹಿಸಿದರು.
ಗುಂಪುಗಾರಿಕೆ : ವಸತಿ ಶಾಲೆಯ ಶಿಕ್ಷಕರ ಮಧ್ಯೆ ಗುಂಪುಗಾರಿಕೆ. ಒಂದು ಶಿಕ್ಷಕರ ಗುಂಪು ವಿಧಾರ್ಥಿಗಳಿಗೆ ಆಂತರಿಕವಾಗಿ ಪ್ರಚೊಧನೆ ನೀಡುತ್ತಿದೆ ಎನ್ನುವುದು ಕೆಲವರ ವಾದವಾಗಿದೆ.
ಹೇಳಿಕೆ : ಸ್ಥಳಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಉಪ ನೀರ್ದೆಶಕರು ಪ್ರಭು ದೊರೆ ಬೇಟಿನೀಡಿ, ಗುಣಮಟ್ಟದ ಆಹಾರ, ಪಾಠ ಭೊಧನೆ ಇತ್ಯಾದಿ ಸಮಸ್ಯೆಗಳಿಗೆ ಕೂಡಲೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.