ಸಮಸ್ಯೆಗಳ ಧ್ವನಿಯಾಗಿ ಸೇವೆ ಸಲ್ಲಿಸುವೆ: ಸಲೀಂ


ಕುಂದಗೋಳ, ನ 28: ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ಅವರು ತಾಲೂಕಿನ ಸಂಶಿ ಗ್ರಾಮಕ್ಕೆ ಭೇಟಿ ನೀಡಿದರು.
ನಂತರ ಮಾತನಾಡಿದ ಅವರು ಗ್ರಾ.ಪಂ. ಸದಸ್ಯರ ಪರವಾಗಿ ಅನುದಾನಗಳ ಬಗ್ಗೆ ವಿಧಾನ ಪರಿಷತನಲ್ಲಿ ಮಾತನಾಡುವ ಅವಕಾಶ ನಿಮ್ಮೆಲ್ಲರ ಪ್ರಥಮ ಪ್ರಾಶಸ್ತ್ಯ ದೊರೆತಾಗ ಸಿಗುವಂತಾಗುತ್ತದೆ. ತಮ್ಮೆಲ್ಲರ ಸಮಸ್ಯೆಗಳಿಗೆ ಧ್ವನಿಯಾಗಿ ಸೇವೆಯನ್ನು ಮಾಡುತ್ತೇನೆ ಎಂದು ಸಲೀಂ ಅಹ್ಮದ ಅವರು ಹೇಳಿದರು.
ನಂತರ ಮಾತನಾಡಿದ ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರ ಮತಗಳನ್ನು ಹಾಕಿಸುವ ಕೆಲಸವನ್ನು ನಾನು ಮಾಡುತ್ತೇನೆ. ತಮ್ಮನ್ನು ಗೆಲ್ಲಿಸುವ ಹೊಣೆ ತೆಗೆದುಕೊಳ್ಳಿತ್ತೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ ಸಮೀತಿಯ ಅಧ್ಯಕ್ಷರಾದ ಅನೀಲಕುಮಾರ ಪಾಟೀಲ, ಮಾಜಿ ಶಾಸಕರಾದ ಎಂ.ಎಸ್.ಅಕ್ಕಿ, ಅರವಿಂದ ಕಟಗಿ, ಚಂದ್ರಶೇಖರ ಜುಟ್ಟಲ, ರಮೇಶ ಕೊಪ್ಪದ, ಬಸಲಿಂಗಪ್ಪ ಕೋರಿ, ಮಲ್ಲೇಶ ಬೆಳವಡಿ, ವಿದ್ಯಾಧರ ಸುಂಕದ, ಬಸವರಾಜ ನಾಯ್ಕರ, ಪಕ್ಕಿರೇಶ ಮ ಕೋರಿ, ಇರ್ಷಾದ ಅಹಮದ್ ಮುಲ್ಲಾ, ಹನಮಂತಪ್ಪ ಲಕ್ಷ್ಮೇಶ್ವರ, ದೇವೇಂದ್ರಪ್ಪ, ಲಕ್ಷ್ಮವ್ವ ಪೂಜಾರ, ನಿಂಗಮ್ಮ ಕುಮ್ಮಣ್ಣವರ, ಕಮಲವ್ವ ಹರಕುಣಿ, ಲೋಕೇಶ ಸೇರಿದಂತೆ ಮತ್ತು ಕಾಂಗ್ರೆಸ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.