ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ:  ಜಿಲ್ಲಾಧಿಕಾರಿ 

ಹರಿಹರ.ಜು.26;  ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ  ದಾವಣಗೆರೆ  ಜಿಲ್ಲಾಧಿಕಾರಿ ಶಿವಾನಂದ ಕಪಾಸಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಯಿತು ಹಳೇ ಹರ್ಲಾಪೂರದ ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಲು ಹರಸಾಹಸ ಮಾಡಿ ಮೃತರ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಗುತ್ತೂರು ಹಿಂಭಾಗದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಸರ್ಕಾರಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹರಸಾಹಸ ಮಾಡಿ ಶಾಲೆಗೆ ಹೋಗಬೇಕು ವಾಹನ ಸವಾರರು ಪಾದಚಾರಿಗಳು ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ ಮಳೆ ಬಂತೆಂದರೆ ಮೊಣಕಾಲುವರೆಗೂ ಕೆಸರು ಗದ್ದೆಯಲ್ಲಿ  ಸಂಚರಿಸುವ ಪರಿಸ್ಥಿತಿ ಮತ್ತು ಸುಮಾರು ಐವತ್ತು ಮನಗಳಿಗೆ ಜಲಸಿರಿ ಯೋಜನೆಯ ಸಂಪರ್ಕ ಇಲ್ಲದೆ ಕುಡಿಯುವ  ನೀರಿಗೆ ತೊಂದರೆಯಾಗುತ್ತದೆ ಇನ್ನೂ ಅನೇಕ ಸಮಸ್ಯೆಗಳನ್ನು ಕುರಿತು ಒಂದನೇ ವಾರ್ಡಿನ ನಗರಸಭಾ ಸದಸ್ಯ ಎಂ ಜಂಬಣ್ಣ ಸಮಸ್ಯೆಗಳನ್ನು ಹೇಳಿಕೊಂಡು  ಜಿಲ್ಲಾಧಿಕಾರಿಯೊಂದಿಗೆ ಮನವಿ ನೀಡಿದರು ಜೈಭೀಮ್ ನಗರ ಸಂಬಂಧಿಸಿದಂತೆ ರಸ್ತೆ ವಿದ್ಯುತ್ ದೀಪ ಕುಡಿಯುವ ನೀರು ಉದ್ಯಾನವನ ಮೂಲಭೂತ ಸೌಕರ್ಯಗಳು ಒದಗಿಸಿ ಕೊಡಬೇಕೆಂದು ಸದಸ್ಯ ದಿನೇಶ್ ಬಾಬು .ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶದ ನಾಗರಿಕರು ಸರ್ಕಾರಿ ಶಾಲೆಯ ಜಾಗ ಒತ್ತುವರಿ ಆಕಾರ್ ಬಂದ್ ಅಂತ್ಯಕ್ರಿಯೆ ಕ್ಕೆ ಹೋಗುವ ರಸ್ತೆ ಆಕಾರ್ ಬಂದ್ ವಿಸ್ತರಣೆ ಹತ್ತು ಹಲವಾರು ಸಮಸ್ಯೆಗಳನ್ನು ಸಾರ್ವಜನಿಕರು ನಗರಸಭೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.ಮನವಿಗಳನ್ನು ಸ್ವೀಕರಿಸಿ ಜಿಲ್ಲಾ ಅಧಿಕಾರಿ ಶಿವಾನಂದಪ್ಪ ಕಪಾಸಿ ಮಾತನಾಡಿ ಕೆಲವು ದಿನಗಳ ಹಿಂದೆ ಅಧಿಕಾರವನ್ನು ಸ್ವೀಕರಿಸಿದ್ದೇನೆ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಕುಂದುಕೊರತೆ ಸಭೆಗಳನ್ನು ಮಾಡಿ ಹಂತ ಹಂತವಾಗಿ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಿ ಕೊಡುವುದಾಗಿ ಹೇಳಿದರು