ಸಮಸಮಾಜ ನಿರ್ಮಾಣವಾದಾಗ ಮಾತ್ರ ಮಹಿಳೆ ಸಬಲವಾಗಲು ಸಾಧ್ಯ

ಚಿತ್ರದುರ್ಗ ಸೆ. 4 – ಪುರಾಣ, ಪುಣ್ಯಕಥೆಗಳು ಮತ್ತು ಸನಾತನ ವ್ಯವಸ್ಥೆಯು ಮಹಿಳೆಗೆ ಒಂದಷ್ಟು ದ್ರೋಹ ಮಾಡಿವೆ. ಮಹಿಳೆಗೆ ಆಗಿರುವ ದ್ರೋಹವನ್ನು ವಂಚನೆಯನ್ನು ಸರಿಪಡಿಸಿದಂತಹ ಶತಮಾನವೆಂದರೆ ಅದು 12ನೇ ಶತಮಾನ. ಯೇಸು, ಬುದ್ಧ, ಬಸವ, ಗುರುನಾನಕ, ಮಹಾವೀರ, ಜ್ಯೋತಿಬಾ ಪುಲೆ ಮಹಿಳಾ ಸ್ವಾತಂತ್ರ‍್ಯಕ್ಕೋಸ್ಕರವಾಗಿ ಹೋರಾಡಿದರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಲಿಂಗತಾರತಮ್ಯವಿದ್ದು, ಸಮಸಮಾಜ ರಚನೆ ಆದಾಗ ಮಾತ್ರ ಮಹಿಳೆ ಸಬಲಳಾಗುತ್ತಾಳೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ನಗರದ ಕೆಳಗೋಟೆ ಇಂಡಸ್ಟಿçÃಯಲ್ ಏರಿಯಾದ ವರ್ಷಾ ಅಸೋಸಿಯೇಟ್ಸ್ ಆವರಣದಲ್ಲಿ ನಡೆದ ನಿತ್ಯ ಕಲ್ಯಾಣ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಹಿಳಾ ಸಬಲೀಕರಣ – ಅದರ ಕಲ್ಪನೆ ಏನು ? ವಿಷಯ ಚಿಂತನ ಮಾಡಿದ ಶ್ರೀಗಳು, ಸಬಲೀಕರಣ ಅನ್ನುವ ಶಬ್ದವೇ ಶಕ್ತಿಯನ್ನು ತುಂಬುವುದಾಗಿದೆ. ಬಲವನ್ನು ನೀಡುವುದರ ಮುಖಾಂತರವಾಗಿ ಒಂದಷ್ಟು ಸಬಲರನ್ನಾಗಿ ಮಾಡುವುದು. ಮಹಿಳಾ ಸಬಲೀಕರಣ ಏಕೆ ಬೇಕು? ಅನ್ನುವುದಕ್ಕೆ ಸೂಕ್ತವಾದ ಉತ್ತರ ಕಂಡುಕೊಳ್ಳಬೇಕಾಗಿದೆ. ಆಧುನಿಕ ಜಗತ್ತಿನಲ್ಲಿ ಮೂಡಿಬಂದAತಹ ವ್ಯವಸ್ಥೆಗಳು ಕೆಲವು. ಕಳೆದ ಕೆಲ ದಶಕಗಳಿಂದ ಜಾಗತೀಕರಣ ಅನ್ನುವ ಶಬ್ದ ಕೇಳಿಬರುತ್ತಿದೆ. ಬದಲಾಗುವಂತಹ ಪರಿಸ್ಥಿತಿಗೆ ಮಾನವ ಜೀವನವು ಕೂಡ ಬದಲಾವಣೆ ಕಾಣಬೇಕಾಗುತ್ತದೆ. ಸರ್ವಧರ್ಮಗಳ ಆಚೆಗೆ ಕಾಲಧರ್ಮ ಅನ್ನುವುದಿದೆ. ಕಾಲಧರ್ಮ ಯಾವ್ಯಾವ ಕಟ್ಟುಪಾಡುಗಳನ್ನು ತರುತ್ತದೆಯೋ ಅವುಗಳಿಗೆಲ್ಲ ಮಾನವ ಹೊಂದಿಕೊಳ್ಳಬೇಕಾಗಿದೆ ಎಂದರು.1988ರವರೆಗೆ ಜಾಗತೀಕರಣ ಅನ್ನುವ ಶಬ್ದ ಪ್ರಯೋಗ ಆಗಿರಲಿಲ್ಲ. ಇಂದು ಅದರ ಪದ ಪ್ರಯೋಗ ಮತ್ತೆ ಮತ್ತೆ ಆಗುತ್ತಿದೆ. ಜಾಗತೀಕರಣ ಅಂದರೆ ಜಾಗತೀಕ ಮಟ್ಟದ ಹಲವಾರು ಕಂಪನಿಗಳ ಸಂಗಮ. ಮಹಿಳಾ ಸಬಲೀಕರಣಕ್ಕೆ ಕಾರಣವಾದರೂ ಏನು ಅನ್ನುವಂತಹ ಚಿಂತನೆಯನ್ನು ಮಾಡಬೇಕಿದೆ. ಹಾಗಾದರೆ ದೇಶದಲ್ಲಿ ಇರುವಂತಹ ವ್ಯವಸ್ಥೆಯಾದರೂ ಏನು? ಎನ್ನುವ ಚಿಂತನೆಯನ್ನು ಮಾಡಿದಾಗ ಪುರುಷ ಪ್ರದಾನ ವ್ಯವಸ್ಥೆ. ಪಿತೃ ಪ್ರದಾನವಾದ ವ್ಯವಸ್ಥೆ. ಮಾತೃಪ್ರದಾನವಾಗಿರುವಂತಹ ವ್ಯವಸ್ಥೆ ಕಾಣಲು ಸಾಧ್ಯವಿಲ್ಲ. ಮಹಿಳಾ ದಾಸ್ಯತ್ವ ನಮ್ಮಲ್ಲಿ ಅತಿಯಾಗಿದೆ. ಹೆಣ್ಣು ಸಹ ಸಮಾನಳು ಎಂಬ ಭಾವನೆಯನ್ನು ಪುರುಷ ಹೊಂದಲು ಸಿದ್ಧರಿರುವುದಿಲ್ಲ. ಮಹಿಳಾ ಸಬಲೀಕರಣ ಆಗಬೇಕಾದರೆ ಎಲ್ಲ ಮಹಿಳೆಯರು ಕನ್ಯಾದಾನ ಎನ್ನುವ ಶಬ್ದವನ್ನು ಕಿತ್ತುಹಾಕಬೇಕು. ಪುರುಷ ಪ್ರದಾನ ವ್ಯವಸ್ಥೆ ಇರುವುದರಿಂದಲೇ ಸಬಲೀಕರಣ ಅನ್ನುವಂತಹ ವ್ಯವಸ್ಥೆಯನ್ನು ಮಹಿಳೆಯರು ಸಾಧಿಸಬೇಕಿದೆ. ಸಮಸಮಾಜ ಪರಿಕಲ್ಪನೆ ಇದ್ದಿದ್ದರೆ ಮಹಿಳಾ ಸಬಲೀಕರಣದ ಅವಶ್ಯಕತೆಯೇ ಇರುತ್ತಿರಲಿಲ್ಲ. ಇಡೀ ದೇಶದಲ್ಲಿ ಪುರುಷ ಪ್ರದಾನ ವ್ಯವಸ್ಥೆ ಇರುವುದರಿಂದ ಮಹಿಳಾ ಸಬಲೀಕರಣ ಅನ್ನುವ ವ್ಯವಸ್ಥೆಯನ್ನು ಸರ್ಕಾರಗಳೇ ಜಾರಿಗೆ ತರುತ್ತಿವೆ ಎಂದರು. ಹಿಸ್ಟರಿ ಎಂಬ ಶಬ್ದದಲ್ಲಿ ಹಿಸ್ ಸ್ಟೋರಿ ಅವನ ಕತೆ ಇದೆಯೇ ಹೊರತು, ಅಲ್ಲಿ ಅವಳ ಕತೆ (ಹರ್ ಸ್ಟೋರಿ) ಇಲ್ಲ. ಪುರಾಣ ಪುಣ್ಯಕಥೆಗಳು ಮತ್ತು ಸನಾತನ ವ್ಯವಸ್ಥೆ ಮಹಿಳೆಯರಿಗೆ ಒಂದಷ್ಟು ದ್ರೋಹ ಮಾಡಿವೆ. ಮಹಿಳೆಗೆ ಆಗಿರುವ ದ್ರೋಹವನ್ನು ವಂಚನೆಯನ್ನು ಸರಿಪಡಿಸಿದಂತಹ ಶತಮಾನವೆಂದರೆ ಅದು 12ನೇ ಶತಮಾನ. ಯೇಸು, ಬುದ್ಧ, ಬಸವ, ಗುರುನಾನಕ, ಮಹಾವೀರ, ಜ್ಯೋತಿಬಾ ಪುಲೆ ಮಹಿಳಾ ಸ್ವಾತಂತ್ರ‍್ಯಕ್ಕೋಸ್ಕರವಾಗಿ ಹೋರಾಡಿದರು. ಪುರುಷ ಪ್ರದಾನ ವ್ಯವಸ್ಥೆಯಲ್ಲಿ ಲಿಂಗ ತಾರತಮ್ಯವಿದೆ. ಸಮ ಸಮಾಜ ರಚನೆ ಆದಾಗ ಮಾತ್ರ ಮಹಿಳಾ ಸಬಲಳಾಗುತ್ತಾಳೆ ಎಂದು ನುಡಿದರು.ದೇಶದಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಪುರುಷ ಪ್ರಧಾನ ವ್ಯವಸ್ಥೆ. 12ನೇ ಶತಮಾನದಲ್ಲಿ 40ಕ್ಕು ಹೆಚ್ಚು ವಚನಕಾರ್ತಿಯರು ಇದ್ದರು. ಇಂದು ಮಹಿಳೆಯರ ಹಕ್ಕುಗಳ ಬಗ್ಗೆ ಗಮನಹರಿಸಬೇಕಿದೆ. ಜಗತ್ತನ್ನು ಮಾನವ ಆಳಿದರೆ, ಆ ಮಾನವನನ್ನು ಮಹಿಳೆಯರು ಆಳುತ್ತಾರೆ ಎಂದು ಹೇಳಿದರು.ಸಮ್ಮುಖ ವಹಿಸಿದ್ದ ಮೇದಾರಕೇತೇಶ್ವರ ಗುರುಪೀಠದ ಶ್ರೀ ಇಮ್ಮಡಿಬಸವ ಕೇತೇಶ್ವರ ಸ್ವಾಮಿಗಳು ಮಾತನಾಡಿ, ಅಕ್ಕಮಹಾದೇವಿ, ವೀರವನಿತೆ ಓಬವ್ವ ಮೊದಲಾದವರದು ಇತಿಹಾಸ ಮರೆಯಲಾರದ ಸೇವೆ. ಮಹಿಳೆಯರು ವಿಚಾರವಂತರಿದ್ದು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ ಎಂದರು.ಮುಖ್ಯಅತಿಥಿ ಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್‌ಕುಮಾರ್ ಮಾತನಾಡಿ, ಕೃಷಿ ಎಂದರೆ ಕಲೆ, ವಿಜ್ಞಾನ. ನೀರಿನ ಸಂರಕ್ಷಣೆ ಮುಖ್ಯ. ಶರಣಸಾಹಿತ್ಯದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದೆ. ಶರಣರು ನಮ್ಮದು ಎದೆಯ ಒಕ್ಕಲುತನ ಎಂದಿದ್ದಾರೆ. ತಂತ್ರವನ್ನು ಬಳಸಿ ಬದುಕನ್ನು ಕಟ್ಟಿಕೊಳ್ಳಬೇಕೆಂದರು.ಪತ್ರಕರ್ತ ಉಜ್ಜಿನಪ್ಪ ಮಾತನಾಡಿ, ಬೆಳವಡಿ ಮಲ್ಲಮ್ಮ, ಝಾನ್ಸಿರಾಣಿ ಲಕ್ಷಿö್ಮÃಬಾಯಿ, ಕಿತ್ತೂರು ರಾಣಿಚೆನ್ನಮ್ಮ ಮೊದಲಾದವರು ಮಹಿಳೆಯರು. ಅವರೆಲ್ಲ ಸಾಧಕರಾಗಿದ್ದಾರೆ ಎಂದರು.ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಎಸ್.ವಿ. ರಾಜು ಸಾಣಿಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಕು. ದೀಪ ಸ್ವಾಗತಿಸಿದರು. ಸಹನ, ಗಿರಿಜಾ ನಿರೂಪಿಸಿದರು.