ಸಮವಸ್ತ್ರದಿಂದ ಮೇಲು-ಕೀಳು ಎಂಬ ಭಾವನೆ ಬರುವುದಿಲ್ಲ: ರಾಠೋಡ್

ಬೀದರ:ಜು.14:ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಶಾಲಾ ಸಮವಸ್ತ್ರ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅPI ಶ್ರೀ ಪುಲ್ಲಯ್ಯಾ ಎಂ. ರಾಠೋಡ್ ಅವರು ಮಾತನಾಡುತ್ತ ಪ್ರಾಚಿನ ಕಾಲದಲ್ಲಿ ಗುರುಕುಲಗಳಲ್ಲಿ ಶಿಷ್ಯರು ಹೇಗೆ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಶಾಲಾ ಪ್ರಾರ್ಥನೆಯಿಂದ ಎಲ್ಲರ ಮನಸ್ಸಿನಲ್ಲಿ ಏಕಾಗ್ರತೆಯನ್ನು ಬೆಳಸಲು ಮೂಲಮಂತ್ರವಾಗಿದೆ ಎಂದು ತಿಳಿಸಿದರು. ಸಮವಸ್ತ್ರ ಎಂದರೆ ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣುವುದಾಗಿದೆ. ಕಾವಿ, ಖಾಕಿ ಮತ್ತು ಖಾದಿ ಈ ವಸ್ತ್ರಗಳು ದೇಶ ಮತ್ತು ಸಮಾಜದ ರಕ್ಷಣೆಗಾಗಿ ಇದೆ ಎಂದರು. ದೇಶದ ಆಂತರಿಕ ಭದ್ರತೆಗೆ ಖಾಕಿಯು ಅತಿ ಅವಶ್ಯಕವಾಗಿದೆ. ಸಮವಸ್ತ್ರದಿಂದ ಮೇಲು-ಕೀಳು ಎಂಬ ಭಾವನೆ ಬರುವುದಿಲ್ಲ. ಭಾತೃತ್ವ ಭಾವನೆಯಿಂದ ನಾವೆಲ್ಲರು ಒಂದು ಎಂಬ ಮನೋಧೋರಣೆ ಮೂಡುವುದು. ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದ ನಮಗೆ ಸ್ವತಂತ್ರ ಸಿಕ್ಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಪ್ರೊ|| ಎಸ್.ಬಿ. ಸಜ್ಜನಶೆಟ್ಟಿ ಅವರು ಮಾತನಾಡುತ್ತ ಶಿಸ್ತನಿಂದಲೆ ಸಾಧನೆ ಮಾಡಬಹುದು ಎಂದು ಹೇಳಿದರು. ಸಮವಸ್ತ್ರದಿಂದ ಎಲ್ಲರು ಸಮಾನತೆಯಿಂದ ಕಾಣುವರು. ಇದರಲ್ಲಿ ಶ್ರೀಮಂತ-ಬಡವ ಎಂಬುದು ಕಂಡುಬರುವುದಿಲ್ಲ. ಸಮವಸ್ತ್ರವು ನಮ್ಮ ಜೀವನದ ಶಿಸ್ತಿನ ಪಾಠವಾಗಬೇಕು. ಸಮವಸ್ತ್ರ ಮತ್ತು ಶಿಸ್ತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಮಹಾನ ವ್ಯಕ್ತಿಗಳು ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿದಾಗ ಆ ವ್ಯಕ್ತಿಯು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.ಸಮವಸ್ತ್ರ ಕೇವಲ ಆಚರಣೆಗೆ ಮಾತ್ರ ಆಗದೆ ಅದು ಪ್ರತಿನಿತ್ಯ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪ್ರತಿಭಾ ಚಾಮಾ ಅವರು ಉಪಸ್ಥಿತರಿದ್ದರು. ಅಚ್ಚು ಕಟ್ಟಾಗಿ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದ ಸ್ವಾಗತ ಪರಿಚಯ ವಿದ್ಯಾರ್ಥಿಗಳಾದ ಮಹಾಂತೇಶ ಮಾಡಿದರೆ, ವೈಯಕ್ತಿಕ ಗೀತೆ ಲಕ್ಷ್ಮೀ ಮತ್ತು ದೃಷ್ಟಿ ಹಾಡಿದರು. ಐಶ್ವರ್ಯಾ ಸ್ವಾಮಿ ವಂದನಾರ್ಪ ಮಾಡಿದರೆ ಗಣೇಶ ನಿರೂಪಣೆ ಮಾಡಿದನು.