ಸಮರ್ಪಕ ವಿದ್ಯುತ್ ಪೂರೈಸುವಂತೆ ಮನವಿ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಸೆ2: ಜಿಲ್ಲೆಯಾಧ್ಯಂತ ಮಳೆ ಬಾರದಿರುವುದರಿಂದ ಬೆಳೆಗಳಿಗೆ, ಜಾನುವಾರು ಮತ್ತು ಮನುಷ್ಯರಿಗೆ ನೀರಿನ ಅವಶ್ಯಕತೆಯಿದೆ ಎಂದು ಸ್ವಾಭಿಮಾನಿ ರಾಜ್ಯ ರೈತ ಸಂಘದ ಅಧ್ಯಕ್ಷ ಶಿವಸಿಂಗ ಮೊಕಾಶಿ ಮತ್ತು ಉಪಾಧ್ಯಕ್ಷ ಬೀರಪ್ಪ ದೇಶನೂರ ಹೇಳಿದರು.
ಬೆಳಗಾವಿ ಕೆಇಬಿ ಮುಖ್ಯ ಇಂಜಿನೀಯರ್ ವಲಯ ಕಛೇರಿ ಇವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬೆಳೆಗಳಿಗೆ, ಜಾನುವಾರುಗಳಿಗೆ, ಮತ್ತು ಮನುಷ್ಯರಿಗೆ ನೀರಿನ ಅವಶ್ಯಕತೆಯಿರುವುದರಿಂದ ಪಂಪಸೆಟ್‍ಗಳಿಗೆ ಪ್ರತಿದಿನ ಹಗಲು ಹೊತ್ತಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಹಾಗೂ ಟಿಸಿ ಸುಟ್ಟರೆ ತಕ್ಷಣ ಬದಲಾವಣೆ ಮಾಡಿಕೊಡಬೇಕು. ಟಿಸಿ,ಕೇಬಲ್ ಹಾಗೂ ಪ್ಯೂಜ್‍ಗಳನ್ನು ರೈತರಿಂದ ತರಲು ಹೇಳುತ್ತಾರೆ ಅದಾಗಬಾರದು.
ಟಿಸಿ ಬದಲಾವಣೆಗಳಿದ್ದು ಅವುಗಳನ್ನು ಬದಲಾಯಿಸಬೇಕು. ಅದನ್ನು ಇಲಾಖೆಯಿಂದ ಒದಗಿಸಬೇಕು. ರೈತರ ಇನ್ನೂ ಹಲವಾರು ಸಮಸ್ಯೆಗಳಿರುತ್ತವೆ. ಅವುಗಳನ್ನು ಪರಿಹರಿಸಬೇಕು. ಎಂದು ಹೇಳಿದರು.
ಈ ವೇಳೆ ಮಾರುತಿ ಕಮತಗಿ ಸಿದ್ದಪ್ಪ ಜಳಕದ, ಈರಪ್ಪ ಗುಮ್ಮಗೋಳ, ಪ್ರಸಾದ ಕುಲಕರ್ಣಿ, ವಿಶ್ವನಾಥ ಹಿಟ್ಟಿನ, ಯಲ್ಲಪ್ಪ ದೇವಲತ್ತಿ, ಮಂಜುನಾಥ ಕಿಡತಾಳ, ಬಾಬುರಾವ್ ಚಂದರಗಿ, ರಾಜು ದೊಡ್ಡನಾಯ್ಕರ, ಕಲ್ಲಪ್ಪ ಬಿರ್ಜೆ, ವಿಶಾಲ ಹೊಳ್ಳುರ, ಸುರೇಶ ವಿಭೂತಿ, ನಾಗಪ್ಪ ಶಿಂದೆ, ನಾಗನಗೌಡ ಪಾಟೀಲ, ಚಂದ್ರಪ್ಪ ಮೊಕಾಶಿ, ಸೇರಿದಂತೆ ಇನ್ನಿತರರಿದ್ದರು.