ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಆಗ್ರಹ

ಗುರುಮಠಕಲ್:ಜು.13: ತಾಲೂಕಿನಲ್ಲಿ ಬೇಕಾಬಿಟ್ಟಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರ ಬೆಳೆಗಳಿಗೆ ತೊಂದರೆಯಾಗಿದೆ ಜೆಸ್ಕಾಂ ಸಿಬ್ಬಂದಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿಷ್ಕಾಳಜಿ ತೊರುತಿದ್ದಾರೆ ಎಂದು ಕರ್ನಾಟಕ ಜನಸೇನಾ ಸಂಘಟನೆ ರಾಜ್ಯಾಧ್ಯಕ್ಷ ಎಮ್ ಎಮ್ ಜಾಗಿರ್ದಾರ್ ರವರು ಸುಮಾರು ಹತ್ತು ಹನ್ನೆರಡು ದಿನಗಳಿಂದ ನಿರಂತರವಾಗಿ ಒಂದೇ ಸಮನೆ ಜಿಟಿಜಿಟಿ ಯಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕಾರ್ಯಕರ್ತರು ಮುಖಂಡರು ಜೊತೆಗೂಡಿ ಜನರ ಸಮಸ್ಯೆಗಳಿಗೆ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಕರ್ನಾಟಕ ಜನಸೇನಾ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಜನಸೇನಾ ಸಂಘಟನೆ ಜಿಲ್ಲಾ ವಕ್ತಾರ ರಾದ ಬಸವಂತರೆಡ್ಡಿ. ತಾಲ್ಲೂಕ ಅಧ್ಯಕ್ಷ ಅನಿಲ್ ರೆಡ್ಡಿ. ರಾಮು ಪೂಜಾರಿ. ಮಹೇಶ ಸ್ವಾಮಿ ಯದ್ಲಾಪುರ. ಸಿದ್ದು ಹಿಮ್ಲಪೂರ ಅನೇಕ ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು.