ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಶಿರಹಟ್ಟಿ,ಅ9: ಸೊರಟೂರ ಗ್ರಾಮಸ್ಥರಿಂದ ಸಮರ್ಪಕ ವಿದ್ಯುತ ಪೂರೈಸುವಂತೆ ಒತ್ತಾಯಿಸಿ ಕೆಇಬಿ ಕಚೇರಿ ಎದುರು ಹಠಾತ ಪ್ರತಿಭಟನೆ Àಡೆಸಲಾಯಿತು.
ಪಟ್ಟಣದಲ್ಲಿನ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಕಚೇರಿ ಹಿಂದುಗಡೆ ಇರುವ ವಿದ್ಯುತ್ ಗ್ರಿಡ ನಲ್ಲಿ ನೂರಾರು ರೈತರು ಸಮರ್ಪಕ ವಿದ್ಯುತ್ ಅಡಚಣೆಯಿಂದ ಬೆಸತ್ತು ಹಠಾತ್ತನೆ ಪ್ರತಿಭಟನೆ ಮಾಡಿದ ಘಟನೆ ಜರುಗಿತು.
ರೈತ ಶಂಕ್ರಪ್ಪ ಆಡರಕಟ್ಟಿ ಹಾಗೂ ಇತರ ರೈತರು ಮಾತನಾಡಿ, ದಿನದ ಏಳು ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಸುವಂತೆ ಹಲವಾರು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ವಿನಂತಿಸಿದರು ಕೂಡ ನಮಗೆ ಸಮರ್ಪಕ ವಿದ್ಯುತ್ ನೀಡದೆ ದಿನಕ್ಕೆ ಕೇವಲ ಎರಡು ಗಂಟೆಗಳ ಕಾಲ ಶ್ರೀ ಪೇಸ್ ವಿದ್ಯುತ್ ನೀಡುತ್ತಿದ್ದು ಇದರಿಂದ ನಮ್ಮ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗುತ್ತಿವೆ. ಈ ವ್ಯವಸ್ಥೆ ಹೀಗೆ ಮುಂದುವರೆದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ ಎಂದರು.
ಹುಬ್ಬಳ್ಳಿ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ನೂರಾರು ರೈತರು ಪ್ರತಿಭಟನೆಗೆ ಇಳಿದರು.
ನಂತರ ಹೆಸ್ಕಾಂ ಅಧಿಕಾರಿ ಮಜಬೂರ ಸುಂಕದ ಮಧ್ಯಪ್ರವೇಶಿಸಿ ನಾಳೆಯಿಂದಲೇ ನಿಮಗೆ ಬೇಕಾದ ತ್ರೀ ಪೇಸ್ ವಿದ್ಯುತ್ತನ್ನು ಏಳು ಗಂಟೆಗಳ ಕಾಲ ಪೂರೈಸುತ್ತೇವೆ ಎಂದು ಪ್ರತಿಭಟನಕಾರರಿಗೆ ಮನವೊಲಿಸಿದರು. ಅಧಿಕಾರಿಗಳ ಮಾತಿಗೆ ಬೆಲೆಕೊಟ್ಟು ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಈ ವೇಳೆ ರೈತರಾದ ಶಂಕ್ರಪ್ಪ ಆಡರಕಟ್ಟಿ, ವೆಂಕಟೇಶ ರಣತೂರ ಶರಣಪ್ಪ ಬೊಳನವರ, ರಾಮಣ್ಣ ಶೆಲಿಯಪ್ಪನವರ, ಬಸವರಾಜ ಕನ್ಯಾಳ, ಶಿವನಪ್ಪ ಚಪಾಟೆ, ಅಂಬಣ್ಣ ಮಲ್ಲಾಡದ, ಶಿವರಾಜಸಾಬ ಯಳವತ್ತಿ, ರಾಜು ಬೊಳನವರ, ಪರಪ್ಪ ಗದಗೀನ, ಪ್ರಕಾಶ ಮುರಿಗೆಣ್ಣವರ, ಪರಶುರಾಮ ಹುಗಾರ, ಬಸಪ್ಪ ಛಬ್ಬಿ,ಮಲ್ಲಪ್ಪ ಕನ್ನೂರ, ದೇವಪ್ಪ ಜಾಮದಾರ, ಚನ್ನಪ್ಪ ಕನ್ಯಾಳ, ಸೊಮಪ್ಪ ಮುರಿಗೆಣ್ಣವರ ಉಪಸ್ಥಿತರಿದ್ದರು.