
ಲಕ್ಷ್ಮೇಶ್ವರ,ಸೆ.16: ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ಮುಂಜಾನೆ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಮರ್ಪಕ ಬಸ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಅನೇಕ ಬಾರಿ ಮನವಿ ಪತ್ರ ನೀಡಿದ್ದರೂ ಲಕ್ಷ್ಮೇಶ್ವರ ಘಟಕದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ನಿರ್ಲಕ್ಷ್ಮ ಧೋರಣೆಯನ್ನು ತೋರಿದ್ದಾರೆ. ಖಂಡಿಸಿದ ಮುಖಂಡರುಗಳು ವಿದ್ಯಾಭ್ಯಾಸಕ್ಕಾಗಿ ನೂರಾರು ವಿದ್ಯಾರ್ಥಿಗಳು ಲಕ್ಷ್ಮೇಶ್ವರಕ್ಕೆ ಬರುತ್ತಿದ್ದಾರೆ ಶಕ್ತಿ ಯೋಜನೆಯ ನಂತರ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಹೋಗುವುದೇ ದುಸ್ತರವಾಗಿದೆ.
ಗ್ರಾಮಕ್ಕೆ ಬರುವ ಬಸ್ಸುಗಳು ಪೂರ್ಣ ತುಂಬಿಕೊಂಡು ಬರುವುದರಿಂದ ವಿದ್ಯಾರ್ಥಿಗಳು ಬಸ್ಸನ್ನು ಹಿಡಿಯಲು ಹರಸಾಹಸ ಮಾಡಬೇಕಾಗಿದೆ ಗಂಟೆಗಟ್ಟಲೆಕ್ಕಾದರೂ ಬಸುಗಳು ವೇಳೆಗೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪವನ್ನು ಮಾಡಿದರು.
ಸ್ಥಳಕ್ಕೆ ಆಗಮಿಸಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ವಿಭಾಗಿಯ ನಿಯಂತ್ರಣಧಿಕಾರಿ ಕೂಡಲೇ ಈ ಕುರಿತು. ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ ಯೂಸುಫ್ ಜಮುಲಾ ಅವರು ಸಿಬ್ಬಂದಿಯೊಂದಿಗೆ ಇದ್ದರು.