ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆ

ವಾಡಿ:ಎ.28:ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ವಾರ್ಡ್ ವಾಡಿ ಪಟ್ಟಣದ ವಾರ್ಡ ನಂ 06 ಜಾಂಭವೀರ ಕಾಲೋನಿ ಬಡಾವಣೆಯ ನಿವಾಸಿಗಳು ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೋವಿಡ್ ಸಮಯದಲ್ಲಿ ಕಳೆದ ಒಂದು ವಾರದಿಂದ ಬಡವಾಣೆಯ ನಿವಾಸಿಗಳು ನೀರಿಗಾಗಿ ಪರದಾಢುವ ಪರಿಸ್ಥಿತಿ ಎದುರಾಗಿದೆ. ಸುಡು ಬಿಸಿಲಿನಲ್ಲಿ ಬೋರವೆಲ್ ಸೇರಿದಂತೆ ಜಲಮೂಲಗಳ ಬಳಿ ಗಂಟೆಗಟ್ಟಲೆ ಸರತಿಸಾಲಿನಲ್ಲಿ ನಿಂತು ನೀರುತ್ತರುವ ಪರಿಸ್ಥಿತಿ ಬಂದೊದಗಿದೆ. ಒಂದು‌‌ ಕಡೆ ಕೊವೀಡ್ ಆತಂಕ ಮತ್ತೊಂದು ಕಡೆ ನೆತ್ತಿ ಸುಡುವ ಬಿಸಿಲು ಇದರ ಮದ್ಯ ನೀರಿನ ಸಮಸ್ಯೆ ತೆಲೆದೂರಿದ್ದು ಸಂಭದಿಸಿ ಅಧಿಕಾರಿಗಳು ತೆಲೆಕೆಡಿಸಿಕೊಳ್ಳುತ್ತಿಲ್ಲವೆಂದ ಆಕ್ರೋಶ ವ್ಯಕ್ತಪಡಿಸಿದರು. ಒಂದು ವಾರದಿಂದ ನೀರಿ ಬಾರದಕ್ಕೆ ರೋಚ್ಚಿಗೆದ್ದ ಬಡಾವಣೆಯ ನಿವಾಸಿಗಳು, ಮಹಿಳೆಯರು ಬಿಂದಿಗೆ ಹಿಡಿದು ಪುರಸಭೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮಹಿಳೆಯರು ಪುರಸಭೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನೀರಿ ಬೀಡದಕ್ಕೆ ಬೇರೆ ಬೇರೆ ಏರಿಯಾಗಳಿಗೆ ಹೋಗಿ ನೀರು ತರಬೇಕು. ಬಿಲ್ ಕಟ್ಟಿಸಿಕೊಳ್ತಿರಿ ಆದ್ರೆ ನೀರು ಕೊಡೋದಿಲ್ಲ ಕಿಡಿಕಾರಿದ ಪ್ರತಿಭಟನಾಕಾರರು ಕೊಡಲೆ ನೀರಿನ ಸಮಸ್ಯೆ ಬಗೆಹರಿಸಿ ಪ್ರತಿನಿತ್ಯ ಸ್ವಚ್ಛ ನೀರು ಒದಗಿಸುವಂತೆ ಒತ್ತಾಯಿಸಿದರು. ಇನ್ನು ಪ್ರತಿಭಟನೆ ಮಾಡುತ್ತಿದ್ದಂತೆ ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಆದಷ್ಟು ಬೇಗ ವಾಲ್ ಸಮಸ್ಯೆ ಸರಿ‌ಪಡಿಸಿ ಸಮರ್ಪಕ ನೀರು ಒದಗಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬಡವಣೆ ಮುಖಂಡರಾದ ಶರಣಪ್ಪ ದೊಡ್ಡಮನಿ, ಮಲ್ಲಿಕಾರ್ಜುನ ಮುದ್ನಾಳ, ಚಂದ್ರಾಮ್ ರಾಜೋಳ್ಳಿ, ಬಸವರಾಜ್ ತುಮಕೂರಕರ್, ಅರ್ಜುನ್ ರಾಜೋಳ್ಳಿ, ಶಿವಶರಣ ಬಿರಳ, ದೀಲಿಪ್ ಚಾಮನೂರ್, ಮಲ್ಲಿಕಾರ್ಜುನ ಚಾಮನಾಳ, ಪುಷ್ಪ ಗೋಪಿರೆಡ್ಡಿ, ಭೀಮಬಾಯಿ ವಸ್ತಾರಿ, ಸುಜಾತಾ ಸೈದಾಪುರ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.