ಸಮರ್ಪಕ ಚಿಕಿತ್ಸೆ ನೀಡದ ವೈದ್ಯರು; ಆರೊಪ

ಚನ್ನಗಿರಿ.ಜೂ.೧;  ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಯೋಗೇಶ್ ಆರೋಪ ಮಾಡಿದರು.ಚನ್ನಗಿರಿ ತಾಲೂಕು ಅತಿ ದೊಡ್ಡ ತಾಲೂಕು ಆಗಿದ್ದು ಜನರಿಗೆ ದಿನದಿಂದ ದಿನಕ್ಕೆ ಹೆಚ್ಚು ಕೊರೋನ ಸೋಂಕು ಹರಡುತ್ತಿದ್ದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದರೆ ರೋಗಿಗಳನ್ನು ಹೊರಗಡೆ ಕೂರಿಸಿ ಕಾಯಿಸುತ್ತಾರೆ.ಆಸ್ಪತ್ರೆಗೆ ಬಂದಂತ ರೋಗಿಗಳನ್ನು ವಿಚಾರಿಸಿ ಅವರ ಸಂಪರ್ಕದಲ್ಲಿ ಯಾರ್ಯಾರಿದ್ದಾರೆ ಎಂಬುದು ತಿಳಿದುಕೊಂಡು ಅಂಥವರನ್ನು ಕೋವಿಡ್ ಸೆಂಟರಿಗೆ ಕರೆತರಬೇಕು ಅಧಿಕಾರಿಗಳು ಈ ಕೆಲಸವನ್ನು ಮಾಡುತ್ತಿಲ್ಲ ಹೋಂ ಐಸೋಲೇಷನ್ ನಲ್ಲಿರುವವರನ್ನು  ಆಸ್ಪತ್ರೆಗೆ ಕರೆತರಬೇಕು. ಸರಿಯಾದ ರೀತಿಯಲ್ಲಿ ವೈದ್ಯರುಗಳು  ಟೆಸ್ಟ್ ಮಾಡಬೇಕು ಅದನ್ನು ಕೂಡ ವೈದ್ಯರು ಯಾರೂ ಮಾಡುತ್ತಿಲ್ಲ ಇನ್ನಿತರ ರೋಗಿಗಳು ಆಸ್ಪತ್ರೆಗೆ ಬಂದರೆ ಅವರನ್ನು ಸರಿಯಾದ ರೀತಿಯಲ್ಲಿ ವೈದ್ಯರು ನೋಡುವುದಿಲ್ಲ  ರೋಗಿಗಳು ಏನು ಮಾಡಬೇಕು ಎಂಬುದು ತಾಲೂಕಿನ ಜನತೆಗೆ ಗೊತ್ತಾಗದೆ ಕಂಗಲಾಗಿದ್ದಾರೆ ಎಂದು ವ್ಯವಸ್ಥೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.