ಸಮರ್ಥನಂ ಸಂಸ್ಥೆಯು ವಿಕಲಚೇತನ ಅಭ್ಯರ್ಥಿಗಳಿಗಾಗಿ ಜು.29 ರಂದು ಉದ್ಯೋಗ ಮೇಳಃ ಅರುಣಕುಮಾರ

ವಿಜಯಪುರ, ಜು.25-ಸಮರ್ಥನಂ ಸಂಸ್ಥೆಯು ವಿಕಲಚೇತನ ಅಭ್ಯರ್ಥಿಗಳಿಗಾಗಿ 29 ಜುಲೈ 2022 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ವರೆಗೆ ವಿಜಯಪುರ ನಗರದ ರುಡ್ಸೆಟ್ ಸಂಸ್ಥೆ, ರಾಘವೇಂದ್ರ ಕಾಲೋನಿ, ಬಾಗಲಕೋಟ-ಜಮಖಂಡಿ ಭೈಪಾಸ್ ರಸ್ತೆ ಜಲ ನಗರ, ವಿಜಯಪುರದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಾಖಾ ಮುಖ್ಯಸ್ಥರಾದ ಅರುಣಕುಮಾರ ಎಮ್. ಜಿ. ಹೇಳಿದರು.
ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪ್ರಶಸ್ತಿ ವಿಜೇತ ಸಮರ್ಥನಂ ಅಂಗವಿಕಲರ ಸಂಸ್ಥೆಯು ಒಂದು ನೋಂದಾಯಿತ ಸೇವಾ ಸಂಸ್ಥೆಯಾಗಿದ್ದು, ಭಾರತದಲ್ಲಿ ದೃಷ್ಟಿಹೀನರು (ಅಂಧರು), ದೈಹಿಕ ವಿಕಲಚೇತನರು, ವಾಕ್ ಶ್ರವಣದೋಷ ಉಳ್ಳವರು ಅರೇ ಅಂದತ್ವ (ಲೋವಿಜನ) ಹೊಂದಿರುವ ಅಂಗವಿಕಲರು ಮತ್ತು ಬುದ್ಧಿ ಮಾಂಧ್ಯರು ಹಾಗೂ ಹಿಂದುಳಿದ ಸಮುದಾಯದ ಅಭಿವೃದ್ಧಿಗಾಗಿ ಸಮರ್ಥನಂ ಸಂಸ್ಥೆಯು ಕಳೆದ 25 ವರ್ಷಗಳಿಂದ ಯವುದೇ ತಾರತಮ್ಯ ರಹಿತವಾದ ಒಂದು ಮುಕ್ತವಾದ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿದೆ ಹಾಗೂ ವಿಕಲಾಂಗ ಸಮುದಾಯವು ಘನತೆ ಮತ್ತು ಗೌರವದಿಂದ ಬದುಕಲು ಸಮರ್ಥನಂ ಸಂಸ್ಥೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಅತ್ಯುತ್ತಮವಾದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ವಿವರಿಸಿದರು.
ಕಳೆದ 2 ವರ್ಷ ಗಳೀಂದ ಕೋವಿಡ್ ಸಂಕಷ್ಟದಿಂದ ವಿದ್ಯಾವಂತ ಅಂಗವಿಕಲರು ನಿರುದ್ಯೋಗಿಗಳಾಗಿ ಉಳಿದಿದ್ದು ಅಂತಹ ಪ್ರತಿಭಾವಂತ ನಿರುದ್ಯೋಗಿ ಅಂಗವಿಕಲರಿಗೆ ಉದ್ಯೋಗ ಅವಕಾಶ ದೊರಕಿಸುವ ಉದ್ದೇಶದಿಂದ ಸಮರ್ಥನಂ ಸಂಸ್ಥೆಯು ಚಿಕಲಚೇತನ ಅಭ್ಯರ್ಥಿಗಳಿಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಭಾಗವಹಿಸುವವರು ಉಚಿತ ನೋಂದಣಿ ಮಾಡಿಸಬೇಕು ನೋಂದಣಿಯು 9 ರಿಂದ ಪ್ರಾರಂಭಗೊಳ್ಳಲಿದೆ. ಬಯೋಡೇಟಾದ ಕನಿಷ್ಠ 3 ಪ್ರತಿಗಳು, ಕನಿಷ್ಠ 3 ಪಾಸ್ಟೋರ್ಟ್ ಅಳತೆಯ ಭಾವಚಿತ್ರ, ಶೈಕ್ಷಣಿಕ ಅರ್ಹತೆಗಳ ನಕಲು ಪ್ರತಿ, ಅಂಗವಿಕಲರ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಆಧಾರ ಕಾರ್ಡ್ ತರಬೇಕು. ಆದ ಕಾರಣ ಎಸ್.ಎಸ್.ಎಲ್.ಸಿ. , ಪಿ.ಯು.ಸಿ. ಐ.ಟಿ.ಐ ಡಿಪ್ಲೋಮಾ ಬಿ.ಇ. ಅಥವಾ ಯಾವುದೇ ಪದವಿ ಸ್ನಾತಕ್ಕೋತ್ತರ ಅಧ್ಯಯನ ಮಾಡಿ ಉದ್ಯೋಗಕ್ಕಾಗಿ ಕಾದಿರುವ ದೈಹಿಕ ವಿಕಲಚೇತನರು, ವಾಕ್ ಶ್ರವಣದೋಷ ಉಳ್ಳವರು ಹಾಗೂ ಅರೇ ಅಂದತ್ವ ಲೋವಿಜನ) ಹೊಂದಿರುವ ಉದ್ಯೋಗಾಕಾಂಕ್ಷಿಗಳು ತಮ್ಮ ಇಚ್ಛೆಯಂತೆ ಉದ್ಯೋಗಗಳನ್ನು ಪಡೆಯುವಂತೆ ವಿನಂತಿಸಿದರು.
ಈ ಉದ್ಯೋಗ ಮೇಳದಲ್ಲಿ 18 ರಿಂದ 35 ವಯೋಮಿತಿಯ 500 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಹಾಗೂ 25 ಕ್ಕು ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆನ್ನು ಹೊಂದಿದ್ದೇವೆ. ಹೆಚ್ಚಿನ ಮಾಹಿತಿಗಾಗಿ 9343595047, 9480809580, 9148157888 ಗೆ ಸಂಪರ್ಕಿಸಲು ಕೋರಿದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಶ್ರೀಯುತ ರಾಜಶೇಖರ ದೈವಾಡಿ, ಸಮರ್ಥನಂ ಸಂಸ್ಥೆಯ ಪಂಡಿತ ಬಿ ಸಂಸ್ಥೆಯ ಇತರೆ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.