ಸಮಯ ಮೀರಿಲ್ಲ ಮದುವೆಯಾಗಿ ರಾಗಾಗೆ ಲಾಲೂ ಸಲಹೆ

ಪಾಟ್ನಾ,ಜೂ.೨೪- “ ನೀವು ಮದುವೆ ಮಾಡಿಕೊಳ್ಳಿ. ನಮ್ಮ ಮಾತು ಕೇಳಿ.. ನಿಮ್ಮ ತಾಯಿ ಸೋನಿಯಾ ಅವರು ಮಗ ನನ್ನ ಮಾತು ಕೇಳುತ್ತಿಲ್ಲ, ನೀವಾದರೂ ಹೇಳಿ ಅನ್ನುತ್ತಾರೆ. ಈಗಲೂ ಸಮಯ ಮೀರಿಲ್ಲ. ಮದುವೆ ಮಾಡಿಕೊಳ್ಳಿ..”
ಹೀಗಂತ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದಾರ
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಧರಿಸಿದ ಬಳಿಕ ಎಲ್ಲಾ ನಾಯಕರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಭೆಯ ವಿವರ ನೀಡುವ ಸಮಯದಲ್ಲಿ ಲಾಲು ಪ್ರಸಾದ್ ಯಾದವ್ ಪ್ರಸ್ತಾಪಿಸಿದ ವಿಷಯ ಎಲ್ಲರ ಮುಖದಲ್ಲಿ ನಗು ತರಿಸಿತು.
ರಾಹುಲ್ ಗಾಂಧಿ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ ಪಾದಯಾತ್ರೆ ಮೂಲಕ ಸಂಚರಿಸಿದ್ದಾರೆ. ಅದಾನಿ ವಿಚಾರದಲ್ಲಿ ಲೋಕಸಭೆಯಲ್ಲಿ ಉತ್ತಮ ಹೋರಾಟ ನಡೆಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು..
ಪಕ್ಕದಲ್ಲಿ ಕುಳಿತಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಗಡ್ಡ ಬೆಳೆಸಿಕೊಂಡಿದ್ದಾರೆ ಎಂದರು.
ಆಗ ಮಾತು ಮುಂದುವರಿಸಿದ ಲಾಲು ಪ್ರಸಾದ್ ಯಾದವ್, ಜಾಸ್ತಿ ಉದ್ಧ ಗಡ್ಡ ಬೆಳೆಸಬೇಡಿ. ನೀವು ಮದುವೆ ಆಗಬೇಕಿತ್ತು. ನಮ್ಮ ಮಾತು ಕೇಳಿಲ್ಲ. ಈಗಲೂ ಸಮಯ ಮೀರಿಲ್ಲ ,ಮದುವೆ ಆಗಿ, ನಿಮ್ಮ ಮದುವೆಯ ಮೆರವಣಿಗೆಯಲ್ಲಿ ನಾವೂ ಬರುತ್ತೇವೆ. ನಿಮ್ಮ ತಾಯಿ ಸೋನಿಯಾ ಅವರು ಮಗ ನನ್ನ ಮಾತು ಮಾತು ಕೇಳುತ್ತಿಲ್ಲ. ನೀವು ಮದುವೆ ಮಾಡಿಸಿ ಎಂದು ನಮಗೆ ಹೇಳುತ್ತಾರೆ ಎಂದರು.
ಆಗ ರಾಹುಲ್ ಗಾಂಧಿ ಅವರು ನಗುತ್ತಲೇ ಆಗೋಣ, ಆಗುತ್ತೆ ಎಂದರು. ಸುದ್ದಿಗೋಷ್ಠಿಯಲ್ಲಿ ಇದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಎಲ್ಲ ನಾಯಕರು ಮುಸಿನಕ್ಕರು.