ಸಮಯ ಪ್ರಜ್ಞೆ ಯುವಕರ ಬಾಳಿಗೆ ಬೆನ್ನೆಲುಬು

ಔರಾದ :ಮಾ.26 : ದೇಶ ಅನೇಕ ಸಮಸ್ಯೆಗಳಲ್ಲಿ ನಲುಗುತ್ತಿದೆ ಆದರೆ ಯುವಕರಾದವರು ಜಾಗೃತಿರಾದರೆ ದೇಶದ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದಕ್ಕೆ ವಿವೇಕಾನಂದರೆ ನಮಗೆ ಹಿಡಿದ ಕೈಗನ್ನಡಿ ಎಂದು ನೆಹೆರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ್ ನುಡಿದರು.

ನೆಹೆರು ಯುವ ಕೇಂದ್ರ ಬೀದರ್, ಸರ್ಕಾರಿ ಐ ಟಿ ಐ ಕಾಲೇಜು ಔರಾದ ಹಾಗೂ ಹನುಮಾನ್ ಮಂದಿರ್ ಮಹಿಳಾ ಭಜನ ಮಂಡಲ ಔರಾದ, ಸುಭಾಸ್ ಚಂದ್ರ ಭೋಸ್ ಯುವಕ ಸಂಘ ಔರಾದ್ ಸಹಯೋಗದಲ್ಲಿ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಯುವಕರ ಜೀವನ ಸಮಯ ಪ್ರಜ್ಞೆ ಭಾರತೀಯ ಪರಂಪರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿದ ಮಯೂರಕುಮಾರರವರು ಮಾತನಾಡುತ್ತ ಭಾರತ ದೇಶದ ಅನೇಕ ಸತ್ಯವಾದ ಘಟನೆಗಳು ಮೆಲುಕು ಹಾಕಿ ಸಂತರ, ಯುಗ ಪುರುಷರ ಜೀವನ ಶೈಲಿ ನಮಲ್ಲಿ ಹಾಸುಹೊಕ್ಕಾಗಬೇಕು. ಗುರು ಹಾಗೂ ಪಾಲಕರು ಸೇವೆ ಸ್ಮರಣೀಯ ಯುವಕರಾದವರು ಗುರಿ ತಲುಪಲು ಜ್ಞಾನವೇ ಮುಖ್ಯ ಭೂಮಿಕೆ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಔರಾದ ಶಾಹೀನ ಕಾಲೇಜನ ಪ್ರಾಂನ್ಸುಪಾಲ ಗಣೇಶ್ ಕೆ ಜೋಜನಾ ಮಾತನಾಡಿ ಕತ್ತಲ್ಲೆಯಿಂದ ಬೆಳಕಿನಡೆಗೆ ಬರಬೇಕರಾದರೆ ನಮ್ಮ ಆದರ್ಶ ಉತ್ತುಂಗಕ್ಕೆ ಒಯ್ಯಬಹುದು ನಿರಂತರವಾದ ಓದು ಛಲ ಇಚ್ಛಾ ಶಕ್ತಿ ಇದ್ದರೆ ಸಾಧನೆ ಮಾಡುವಲ್ಲಿ ಸಂಕಷ್ಟವಾಗುವದಿಲ್ಲವೆಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಐ ಟಿ ಐ ಕಾಲೇಜನ ಪ್ರಾಚಾರ್ಯ ಶಿವಶಂಕರ ಟೋಕರೇ ಮಾತನಾಡಿ ಕುಶಲ ಕರ್ಮಿಗಳು ಓದಿನ ಜೊತೆಗೆ ಅನೇಕ ಹವ್ಯಾಸಗಳು ಮೈಗುಡಿಸಿಕೊಳ್ಳಬೇಕು ಕೌಶಲ್ಯಕ್ಕೆ ಬದುಕು ರೂಪಿಸಿದರೆ ಪರಿಶ್ರಮ ಗುರಿ ಮುಟ್ಟಿಸುತ್ತದೆ ಬಡತನವೆಂಬ ಶಬ್ದದಿಂದ ನಲುಗಿದರೆ ಸಾಧನೆ ಶೂನ್ಯ. ಕಷ್ಟವನ್ನು ಇಸ್ಟ ಮಾಡಿಕೊಂಡು ಮುನ್ನುಗಳು ತರಬೇತಿದಾರರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಬಾಬುರಾವ ಸೋನಾರ, ಅನಿತಾ ರಾಠೋಡ, ದಯಾನಂದ ಬಂಬುಲೆಗೆ, ಚಂದ್ರಕಾಂತ ಹುಲ್ಸುರೆ,ದಯಾನಂದ ಎನಕುಮೂರೇ ಉಪಸ್ಥಿತರಿದ್ದರು. ಸುಜಾತ ಗೋವಿಂದ ಸ್ವಾಗತಿಸಿದರೆ ರತ್ನದೀಪ ಕಸ್ತೂರೆ ನಿರೂಪಿಸಿದರು, ಶಿವಕುಮಾರ ಸೂರ್ಯವಂಶಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಕಾಲೇಜುನ ವಿದ್ಯುತ ಕರ್ಮಿ, ವಿದ್ಯುತ ಮಾನ ದುರಸ್ಥಿಗಾರ, ಹಾಗೂ ಐ ಸಿ ಟಿ ಎಸ್ ಎಂ, ತರಬೇತಿದಾರರು ಸೇರಿದಂತೆ ಇನ್ನಿತರರು ಭಾಗವಹಿಸಿದರು.