ಸಮಯ ಪ್ರಜ್ಞೆ, ಆಸಕ್ತಿ ಇದ್ದರೆ ಉದ್ಯಮಿಯಾಗಬಹುದು

ರಾಯಚೂರು,ಮಾ.೨೯- ವಿದ್ಯಾರ್ಥಿಗಳು ಪಠ್ಯದೊಂದಿಗೆ ಮುಂದಿನ ಭವಿಷ್ಯಕ್ಕಾಗಿ ಉದ್ಯಮದತ್ತ ಆಸಕ್ತಿ ವಹಿಸಬೇಕು. ಉದ್ಯಮಕ್ಕೆ ಸಮಯ ಪ್ರಜ್ಞೆ ಮತ್ತು ಆಸಕ್ತಿ ಇದ್ದರೆ ಉದ್ಯಮಿಯಾಗಬಹುದು.
ಇತ್ತೀಚಿಗೆ ಸರ್ಕಾರ ವಿದ್ಯಾರ್ಥಿಗಳಲ್ಲಿ ಅನೇಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಆ ಯೋಜನೆಗಳನ್ನು ತಾವೆಲ್ಲರೂ ತಿಳಿದುಕೊಂಡು ತಮಗೆ ಯಾವುದಾದರು ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಅದಕ್ಕೆ ನಮ್ಮ ಇಲಾಖೆ ಸಹಕಾರ ನೀಡುತ್ತದೆ ಎಂದು ಸಿ.ಯು ಹುಡೆದ್ ಜಂಟಿ ನಿರ್ದೇಶಕರು ಸಿಡಾಕ್ ರಾಯಚೂರು ಇವರು ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉದ್ಯೋಗ ಮತ್ತು ತರಬೇತಿಕೋಶ ಹಾಗೂ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೂರು ದಿನಗಳ ಉದ್ಯಮಶೀಲತೆ ತಿಳುವಳಿಕೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಡಾ. ಪ್ರಾಣೇಶ್ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಏಕೆಂದರೆ ಸರ್ಕಾರ ಅನೇಕ ವೃತ್ತಿಪರ ಮತ್ತು ಉದ್ಯೋಗ ಪರ ತರಬೇತಿಗಳನ್ನು ನೀಡುತ್ತಿದೆ. ತಾವುಗಳು ಇಂತಹ ಕಾರ್ಯಕ್ರಮಗಳಲ್ಲಿ ಆಸಕ್ತಿವಹಿಸಿ ಭಾಗವಹಿಸಿ ತಮ್ಮಲ್ಲಿದ್ದಂತಹ ಕೌಶಲ್ಯಗಳನ್ನು ವೃದ್ಧಿಪಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಯ೦ಕಣ್ಣ ಮಾತನಾಡಿ ನಮ್ಮ ಕಾಲೇಜಿನಲ್ಲಿ ಪಠ್ಯದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಲು ವೃತ್ತಿಪರ , ಕೌಶಲ್ಯ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ತಾವೆಲ್ಲರೂ ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು. ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಕೋಶದ ಸಂಚಾಲಕರಾದ ಡಾ. ಶಿವರಾಜಪ್ಪ, ಡಾ. ಜೆ.ಎಲ್. ಈರಣ್ಣ, ಐಕ್ಯೂಎಸಿ ಸಂಚಾಲಕರಾದ ಮಹಾಂತೇಶ ಅಂಗಡಿ ಉಪಸ್ಥಿತರಿದ್ದರು.