
ಸಂಜೆವಾಣಿ ವಾರ್ತೆ
ಜಗಳೂರು.ಆ.೩೧ ; ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ತಮ್ಮನ ಪ್ರಾಣವನ್ನು ಸಹೋದರಿಯರು ಉಳಿಸಿದ್ದಾರೆ ಇವರ ಕೆಲಸಕ್ಕೆ ವೈದ್ಯರಿಂದಲೇ ಶಭಾಷ್ ಎನ್ನುವ ಗೌರವ ಸಿಕ್ಕಿದೆ.ಜಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ದ್ವಿ,ದ.ಸ. ಸಹಾಯಕರದ ಜೆ.ಡಿ.ತಿರುಮಲೇಶ್ ಅವರ ಮಗ ಜಗಳೂರು ನಗರದ ಜೆ.ಎಂ ಇಮಾಂ ಸ್ಮಾರಕ ಕಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾದ ವಂಶಿ ಕೃಷ್ಣ.ಟಿ ಎನ್ನುವ ಬಾಲಕ ಶಾಲೆಗೆ ರಜೆ ಇರುವ ಕಾರಣ ಮನೆಯಲ್ಲಿ ಹಗ್ಗದಾಟ ಆಡುತ್ತಿರುವ ಸಂದರ್ಭದಲ್ಲಿ ಆಟ ಆಡುತ್ತಾ ಮನೆಯ ಮೆಟ್ಟಿಲುಗಳನ್ನು ಇಳಿಯುವಾಗ ಕಾಲು ಜಾರಿ ಬಿದ್ದಿದ್ದಾನೆ. ಹಗ್ಗದ ಹಿಡಿಕೆ ಮೆಟ್ಟಿಲಿನ ರಿಲ್ಲಿಂಗ್ ಗೆ ಸಿಕ್ಕಿಹಾಕಿಕೊಂಡು ಬಾಲಕನ ಕುತ್ತಿಗೆಗೆ ಹಗ್ಗ ಬಿಗಿದುಕೊಂಡಿದೆ, ಆಗ ಬಾಲಕ ಪ್ರಜ್ಞಾಹೀನನಾಗಿ ದ್ದಾನೆ ಬಿದ್ದ ಶಬ್ದ ಕೇಳಿ ಮನೆಯಲ್ಲಿದ್ದ ಅಕ್ಕಂದಿರು ( ಮಹಿಮಾ ಮತ್ತು ಪಾಲ್ಗುಣಿ )ಹೊರಗೆ ಬಂದು ನೋಡಿ ನೆರೆಯವರನ್ನು ಸಹಾಯಕ್ಕೆ ಕರೆದಿದ್ದಾರೆ. ತಕ್ಷಣದಲ್ಲಿ ಯಾರು ಲಭ್ಯವಿಲ್ಲದಿದ್ದಾಗ ಬಾಲಕನನ್ನು ಮೇಲಕ್ಕೆತ್ತಿ ಹಗ್ಗದಿಂದ ಬಿಡಿಸಿದ್ದಾರೆ. ಆದರೆ ಹಗ್ಗ ಕುತ್ತಿಗೆಗೆ ಹಗ್ಗ ಬಿಗಿದಿದ್ದ ಕಾರಣ ನಿಶ್ಚೇತನಗೊಂಡಿದ್ದನು. ಇದನ್ನು ಅರಿತ ಸಹೋದರಿಯರು ಪ್ರಥಮ ಚಿಕಿತ್ಸೆಯಾಗಿ ಬಾಲಕನ ಎದೆಯನ್ನು ಒತ್ತಿದ್ದಾರೆ ನಂತರ ಬಾಯಿಯಲ್ಲಿ ಬಾಯಿ ಇಟ್ಟು ಉಸಿರು ನೀಡಿ ಮರು ಜೀವ ನೀಡಿ ದ್ದಾರೆ. ಚಿಕಿತ್ಸೆ ಫಲ ನೀಡಿ ಬಾಲಕ ವಂಶಿಕೃಷ್ಣ ಪವಾಡ ವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ನಂತರ ಬಾಲಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆ ಇಬ್ಬರು ಸಹೋದರಿಯರು ಸಮಯ ಪ್ರಜ್ಞೆ ಮತ್ತು ಪ್ರಥಮ ಚಿಕಿತ್ಸೆಯ ಫಲವಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ದರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.