ಸಮಯಸಾಧಕತನದ ಪರಮಾವಧಿಯನ್ನು ಲಕ್ಷ್ಮಣ್ ಮಾಡುತ್ತಿದ್ದಾರೆ: ಕಿಡಿ

ಮೈಸೂರು, ಮೇ.28: ಸಮಯಸಾಧಕತನದ ಪರಮಾವಧಿಯನ್ನು ಲಕ್ಷ್ಮಣ್ ಅವರು ಮಾಡುತ್ತಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಕಿಡಿಕಾರಿದರು.
ಬಿಜೆಪಿ ಕಛೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದಾರು ತಿಂಗಳಿನಿಂದ ಲಕ್ಷ್ಮಣ್ ಅವರು ಪತ್ರಿಕಾಗೋಷ್ಠಿಯನ್ನು ಮಾಡುತ್ತ ಮೋದಿ ಇರಬಹುದು, ಅಮಿತ್ ಷಾ, ಜೆಪಿ ನಡ್ಡಾ ಹೀಗೆ ಇವರುಗಳನ್ನು ಹೀಗಳೆಯುತ್ತ ಅವಹೇಳನ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಅವರು ಏನು ಬೇಕಾದರೂ ಹೇಳಬಹುದು, ಲಕ್ಷ್ಮಣ್ ಅವರು ಮೋದಿಯನ್ನು ಕೊಲೆಗಾರ ಅಂತ ಹೇಳಬಹುದು, ಯಡಿಯೂರಪ್ಪನವರನ್ನು ಪರ್ಸೆಂಟೇಜ್ ನಾಯಕ ಎಂದು ಹೇಳಬಹುದು, ಆ ಮಾತುಗಳಿಗೆ ಲಂಗುಲಗಾಮಿಲ್ಲದೆ ಮಾತನಾಡಿದ ಲಕ್ಷ್ಮಣ್ ಅವರು ಮೊನ್ನೆ ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಹುಚ್ಚು ನಾಯಿ ಅಂದ ತಕ್ಷಣ ಬೇಜಾರಾಗಿ ರಿಯಾಕ್ಟ್ ಮಾಡುತ್ತಾರೆ ಅನ್ನುವಂಥದ್ದು. ಕಾಲಲ್ಲಿರೋದು ಕಳ್ಕೋತಿನಿ ಅಂದರು.
ಕಾಲಲ್ಲಿರೋದು ಕಳ್ಕೋತೀನಿ ಅಂದರೆ , ಬಿಜೆಪಿಯ ಓರ್ವ ನಗರ ಪ್ರಧಾನ ಕಾರ್ಯದರ್ಶಿ ಮಾತನಾಡಿದರೆ ಇಷ್ಟರಮಟ್ಟಿಗೆ ಮಾತಾಡಿದಾರೆ ಅಂದರೆ ನಮ್ಮ ನಾಯಕರ ಬಗ್ಗೆ ಎಲ್ಲ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ನಾವೆಷ್ಟು ಸಿಟ್ಟಾಗಬೇಕಿತ್ತು? ಸ್ಟೆಪ್ ಡೌನ್ ಆಸ್ಪತ್ರೆ ಬಗ್ಗೆಯೂ ಮಾತಾಡಿದ್ದಾರೆ. ಸ್ಟೆಪ್ ಡೌನ್ ಆಸ್ಪತ್ರೆಯನ್ನು ಯಾರು ಯಾರು ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಡಿಹೆಚ್ ಓ ಆದೇಶವನ್ನೇ ಮಾಡಿದ್ದಾರೆ? ಯಾವ ಬಿಜೆಪಿ ಅದು ಹಂಗಾದರೆ ಎಂದು ಪ್ರಶ್ನಿಸಿದರು. ಸಾರ್ವಜನಿಕರಿಗೆ ಬಿಜೆಪಿಯ ಬಗ್ಗೆ ಅನುಮಾನ ಮೂಡಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದು ರಾಜಕೀಯ ಪಕ್ಷವಾಗಿ ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವುದು ಸಹಜವಾದ ರೀತಿ, ಅದೇ ಸಹಜತೆಗೆ ಎಲ್ಲವಕ್ಕೂ ದಾಖಲೆ ಕೊಡಿ ಅಂದರೆ ಸ್ಟೆಪ್ ಡೌನ್ ಆಸ್ಪತ್ರೆಗೆಲ್ಲ ದಾಖಲೆ ಇಟ್ಟುಕೊಂಡಿದ್ದಾರಾ?
ಸಮಯಸಾಧಕತನದ ಪರಮಾವಧಿಯನ್ನು ಲಕ್ಷ್ಮಣ್ ಅವರು ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಅವರು ಟಿಕೇಟ್ ತಗೊಳ್ಳಕೆ ಏನು ಬೇಕಾದರೂ ಮಾಡಲಿ, ದೋಸೆ ಮಗುಚಿದಂತೆ, ಅವರು ಮಾತನಾಡಿದ ಭಾಷೆಯ ಕುರಿತು ನಮ್ಮ ಆಕ್ರೋಶವಿದೆ. ಲಕ್ಷ್ಮಣ್ ಅವರನ್ನು ಗೌಣ ಮಾಡಬೇಕು, ಅವರ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ನಮ್ಮ ಚಟುವಟಿಕೆಯನ್ನು ನಾವು ಮುಂದುವರಿಸಬೇಕು ಎಂದರು.
ಮೂರನೇ ವರ್ಷಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ಬಿಜೆಪಿ ಅನೇಕ ಸೇವಾಚಟುವಟಿಕೆಗಳನ್ನು ಮಾಡಬೇಕು ಎನ್ನುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಒಂದು ಕರೆಯನ್ನು ಕೊಟ್ಟಿದ್ದಾರೆ.
ಕೋವಿಡ್ ಸೇವಾ ಚಟುವಟಿಕೆಯನ್ನು ಮಾಡುತ್ತಿದ್ದೇವೆ ಅದನ್ನು ವಿಸ್ತರಿಸಬೇಕೆನ್ನುವ ನಿಟ್ಟಿನಲ್ಲಿ ಅದನ್ನು ಬೂತ್ ಲೆವೆಲ್ ನಲ್ಲಿ ಮಾಡಲು ಸಾಧ್ಯವಿದೆಯಾ? ಕಾರ್ಯಕರ್ತರು ಮಾಸ್ಕ್, ಸ್ಯಾನಿಟೈಸರ್, ಆಹಾರ ವಿತರಣೆ, ಅಸಹಾಯಕರಿಗೆ ವಿತರಿಸುವ ಯೋಜನೆಯನ್ನು ಬೂತ್ ಲೆವೆಲ್ ನಲ್ಲೂ ಮಾಡಬಹುದಾ ಎನ್ನುವ ಕರೆಯನ್ನು ಕೊಟ್ಟಿದ್ದಾರೆ ಅದರ ಹಿನ್ನೆಲೆಯಲ್ಲಿ ಮೈಸೂರು ನಗರವು ನಮ್ಮೆಲ್ಲ ಕಾರ್ಯಕರ್ತರನ್ನು ಒಳಗೊಂಡಂತೆ 854ಬೂತ್ ಬರತ್ತೆ, ಎಲ್ಲಾ ಬೂತ್ ಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸದ ರೀತಿಯಲ್ಲಿ ಒಂದು ಬೂತ್ ಗೆ 3ರಿಂದ4 ಕಾರ್ಯಕರ್ತರನ್ನು ಕಳುಹಿಸಲು ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ನಾಳೆಯಿಂದ ಮೈಸೂರು ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಸೇವಾ ಚಟುವಟಿಕೆ ವಿಸ್ತರಿಸಬೇಕು. ರಕ್ತದಾನ ಶಿಬಿರ ನಡೆಸಬೇಕು ಎಂದು ಕೊಂಡಿದ್ದೇವೆ. ಅದನ್ನು ಸೇವಾಹಿ ಸಂಘಟನೆ ಮಾಡಲಿದೆ. ಶಕ್ತಿ ಕೇಂದ್ರದ ಪ್ರಮುಖರು ಅಂತ ಮಾಡಿದ್ದು, ಓರ್ವ ಪ್ರಮುಖನಿಗೆ ಐದು ಬೂತಿನ ಉಸ್ತುವಾರಿ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗ ಪ್ರಭಾರಿ ಮೈ ವಿ ರವಿಶಂಕರ್ ,ಮಾಧ್ಯಮ ವಕ್ತಾರ ರಾದ ಎಂ ಎ ಮೋಹನ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಸೋಮಸುಂದರ್ ,ವಾರ್ನಿಷ್ ,ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಜಯಶಂಕರ್ ಉಪಸ್ಥಿತರಿದ್ದರು.