ಸಮಯವನ್ನು ಸದುಪಯೋಗಪಡಿಸಿಕೊಂಡವರು ಸಾಧಕರಾಗುತ್ತಾರೆ: ಸವಿತಾ ದೇಶಮುಖ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.27:ಆತ್ಮವಿಶ್ವಾಸದೊಂದಿಗೆ ಛಲ ಬಿಡದೆ ಪ್ರಯತ್ನಿಸಿದಾಗ ಮಾತ್ರ ಗುರಿ ತಲುಪಲು ಸಾಧ್ಯ. ಕಂಠಪಾಠಕ್ಕಿಂತ ವಿಷಯವನ್ನು ಅರ್ಥೈಸಿಕೊಳ್ಳುವುದು ಬಲು ಮುಖ್ಯ. ವಿದ್ಯಾರ್ಥಿಗಳಾದಿಯಾಗಿ ಎಲ್ಲರಿಗೂ ಸಮಯ ಎಂಬುದು ಅತ್ಯಮೂಲ್ಯವಾದದ್ದು. ಸದ್ಯಕ್ಕೆ ಇರುವ ಸಮಯ ಮಾತ್ರ ನಿಮ್ಮದು. ನಂತರ, ನೋಡೋಣ ನಾಳೆ ಮಾಡೋಣವೆಂದು ಆಲಸಿಗಳಾದರೆ ಯಶಸ್ವಿಯಾಗಲಾರರು. ಲಭ್ಯವಿರುವ ಸಮಯವನ್ನು ಸದ್ಬಳಕೆ ಮಾಡಿಕೊಂಡರೆ ಸಾಧಕರಾಗಲು ಸಾಧ್ಯವೆಂದು ಆಕಾಶವಾಣಿ ಪ್ರವಾಚಕಿ ಸವಿತಾ ದೇಶಮುಖ ನುಡಿದರು.
ವಿಜಯಪುರ ನಗರದ ಕೆ.ಎಸ್.ಆರ್.ಟಿ.ಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಪಿ.ಯು. ದ್ವಿತೀಯ ವರ್ಗದ ವಿದ್ಯಾರ್ಥಿಗಳಿಗೆ ಶುಭ ಕೋರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾÁತನಾಡಿ, ವಿದ್ಯಾರ್ಥಿಗಳಲ್ಲಿ ಆಚಾರ, ವಿಚಾರ, ಉಚ್ಚಾರ, ಸ್ಪಷ್ಟವಾಗಿರಬೇಕು. ಕೀಳರಿಮೆಯನ್ನು ತೊರೆದು ನಾವು ಭವ್ಯ ಪರಂಪರೆಯಿಂದ ಬಂದ ಅಮೃತ ಪುತ್ರರೆಂಬ ಭಾವ ನಮ್ಮದಾಗಬೇಕು. ಹಣ, ರೂಪ, ಯೌವನ, ಶಾಶ್ವತವಲ್ಲ. ಎತ್ತರ-ಕುಳ್ಳ, ದಪ್ಪ-ತೆಳ್ಳಗೆ, ಕಪ್ಪು-ಬಿಳುಪು ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಉತ್ತಮ ಚಾರಿತ್ರ್ಯ, ವ್ಯಕ್ತಿತ್ವದಿಂದ ಮಾತ್ರ ವ್ಯಕ್ತಿ ಬೆಳೆಯಲು ಸಾಧ್ಯ. ನಾಳಿನ ಉದಾತ್ತ ಪ್ರಜೆಗಳನ್ನು ತಯಾರಿಸುತ್ತಿರುವ ಎಕ್ಸಲಂಟ್ ವಿಜ್ಞಾನ ಕಾಲೇಜಿನಲ್ಲಿ ಧ್ಯೇಯ ಮೆಚ್ಚುವಂತಹದ್ದು ಎಂದರು.
ಇನ್ನೋರ್ವ ಅತಿಥಿ ಸಮಾಜ ಚಿಂತಕಿ ಸುಗಂಧಾ ಕಬಾಡೆ ಮಾತನಾಡಿ, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಹೆಚ್ಚು ಒತ್ತಡ, ಗೊಂದಲ, ಆಯಾಸ, ಹೆದರಿಕೆಗೆ ಒಳಗಾಗದೇ ಪ್ರಸನ್ನ ಭಾವದಿಂದ ಇರಬೇಕು. ಸಂತೋಷದಿಂದ ಇದ್ದಾU Àಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು. ಓದಿನ ಮಧ್ಯೆ ಬರಹ ಇರಲಿ, ಬರಹದ ಮಧ್ಯೆ ಓದು ಇರಲಿ. ಇವೆರಡರ ಮಧ್ಯೆ ಯೋಗ, ಧ್ಯಾನ ಜೊತೆಗೆ ವರ್ಷಪೂರ್ತಿ ಕೇಳಿದ ಪಾಠಗಳ ಮನನವಿರಲಿ. ಎಲ್ಲಕ್ಕಿಂತ ಜೀವ£, ಪ್ರೀತಿ ದೊಡ್ಡದು. ಮೊದಲು ನಿಮ್ಮನ್ನು ನೀವು ಪ್ರೀತಿಸಿಕೊಂಡಾಗ ಇನ್ನೊಬ್ಬರನ್ನು ಪ್ರೀತಿಸಲು ಸಾಧ್ಯ. ನಿಮ್ಮ ಬದುಕಿನ ರೂವಾರಿಗಳು ನೀವೇ ಹೊರತು ಬೇರೆಯವರಲ್ಲ. ಬೇರೆಯವರು ಮಾರ್ಗದರ್ಶನ ಮಾಡಬಹುದಷ್ಟೇ. ನಡೆದು ಗುರಿ ಮುಟ್ಟುವÀವರು ನೀವೇ. ಕಾರಣ ಎದ್ದೇಳಿ ಜಾಗೃತರಾಗಿ ಎಂದು ಹುರಿದುಂಬಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಪುಷ್ಟಾ ಬಸವರಾಜ ಕೌಲಗಿ ಅವರು ಬುದ್ಧಿವಂತರಾಗುವದು ಸುಲಭ. ಆದರೆ ಹೃದಯವಂತರಾಗುವುದು ಬಲು ಮುಖ್ಯ. ಗುರಿ ಮುಟ್ಟಿದಾಗ ಏರಿ ಬಂದ ಏಣಿಯನ್ನು ಮರೆಯಬೇಡಿ. ತಂದೆ ತಾಯಿಗಳ, ಗುರು ಹಿರಿಯರ, ಕಲಿತ ಶಾಲೆಯ ಒಟ್ಟು ಸಮಾಜದ ಋಣ ತೀರಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ದಿಢೀರನೆ ಜನಪ್ರಿಯರಾಗಬೇಕೆಂಬ ಆಸೆಯಿಂದ ಅಡ್ಡದಾರಿ ಹಿಡಿಯಬಾರದು. ಬದುಕಿಗೆ ದಾರಿದೀಪವಾಗಬೇಕಿದ್ದ ಸಿನೇಮಾ, ಧಾರವಾಹಿ ಸಮಾಜಿಕ ಜಾಲತಾಣಗಳು ಯುವಜನತೆಗೆ ಭ್ರಮೆ ಹುಟ್ಟಿಸಿ ಕಂಟಕವಾಗುತ್ತಿರುವುದು ವಿಪರ್ಯಾ¸ ಎಂದರು.
ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಹಾಗೂ ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಉಪನ್ಯಾಸಕÀ ಟಿ. ಮಂಜುನಾಥ, ಆರ್. ಪ್ರಭು, ಜೆ. ಶ್ರದ್ಧಾ ಅನಿಸಿಕೆ ಹಂಚಿಕೊಂಡರು. ಹೆಚ್. ಬಸವರಾಜ, ಎಸ್.ಎ. ಪಾಟೀಲ, ಗುರುರಾಜ, ಜಿ.ಪ್ರೇಮಾ, ಎಮ್.ಎಮ್. ಮಲಘಾಣ, ಎಮ್. ನಟರಾಜ ಮಂಜುನಾಥ ತಳವಾರ, ಕೆ. ವಿರೇಶ, ಶಾಝೀಯಾ ಇನಾಮದಾರ, ಎಮ್ ಪ್ರತಾಪ ಮುಂತಾದವರು ಉಪಸ್ಥಿರಿದ್ದರು.
ವಸತಿ ನಿಲಯಗಳ ಮೆಲ್ವೀಚಾರಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕುಮಾರಿ ಪುಷ್ಪಾ ಸ್ವಾಗತಿಸಿದರು. ಸ್ಮಿತಾ ಹಾಗೂ ಐಶ್ವರ್ಯ ನಿರೂಪಿಸಿದರು. ಸುಷ್ಮಿತಾ ವಂದಿಸಿದರು.