ಸಮಯಪಾಲನೆ ಹಾಗೂ ಸಮವಸ್ತ್ರದಿಂದ ವ್ಯಕ್ತಿತ್ವ ವಿಕಸನ

ಬೀದರ್:ಜು.20: ಮಕ್ಕಳಿಗೆ ಸಮಯ ಪಾಲನೆ, ಸಮವಸ್ತ್ರ ಮತ್ತು ಶಿಸ್ತು ಇವು ಜೀವನದಲ್ಲಿ ಅಳವಡಿಸಿಕೊಂಡು ಮಹಾನ್ ವ್ಯಕ್ತಿಗಳಾಗಬೇಕು, ಉನ್ನತ ಹುದ್ದೆಯನ್ನು ಪಡೆಯಬೇಕೆಂದು ಹೇಳಿದರು. ಸಮವಸ್ತ್ರಕ್ಕೆ ತನ್ನದೇ ಆದ ವಿಶೇಷತೆ ಸಮಾನತೆ ಇದೆ, ಸಮವಸ್ತ್ರ ಧರಿಸುವ ಮುಖ್ಯ ಉದ್ದೇಶವೆಂದರೆ ನಾವೆಲ್ಲರೂ ಒಂದು ಎನ್ನುವ ಭಾವನೆ ಬರುತ್ತದೆ ಭೇದ ಭಾವ ಹುಟ್ಟುವುದಿಲ್ಲ ಯಾವುದೇ, ಕೀಳರಿಮೆ ಉಂಟಾಗುವುದಿಲ್ಲ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಆರ್. ಪಿ.ಎಫ್ ಅಧಿಕಾರಿಗಳಾದ ವೀರ ಮೋಹನ್ ಹೇಳಿದರು
ನಗರದ ಶ್ರೀ ಮಡಿವಾಳೇಶ್ವರ ಶಾಲೆಯಲ್ಲಿ ಮಂಗಳವಾರದಂದು ಸಮವಸ್ತ್ರ ದಿನಾಚರಣೆ ಕಾರ್ಯಕ್ರಮವು ಭಾವಚಿತ್ರಗಳಿಗೆ ಪುಷ್ಪಾರ್ಚನೆ, ಶಾಲಾ ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು ಈ ಕಾರ್ಯಕ್ರಮಕ್ಕೆ. ಇನ್ನೋರ್ವ ಅತಿಥಿಗಳಾದ ಶಿವಪುತ್ರ ಇವರು ಸಮವಸ್ತ್ರದ ಮೇಲೆ ಗೌರವ ಪ್ರೀತಿ ಇರುವವರು ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆಯ ಜೊತೆಗೆ ಉನ್ನತ ಹುದ್ದೆಗೆ ಹೋಗಬಹುದು ಉನ್ನತ ಹುದ್ದೆಗೆ ಹೋದ ಮೇಲೆ ತಂದೆ ತಾಯಿಗೆ, ಬಡವರಿಗೆ ಮತ್ತು ಸಮಾಜದ ಸೇವೆ ಮಾಡಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.

ನಂತರ ಸಂಸ್ಥೆಯ ಅಧ್ಯಕ್ಷರಾದ ಪೆÇ್ರಫೆಸರ್ ಎಸ್.ಬಿ .ಸಜ್ಜನ್ ಶೆಟ್ಟಿ ಅವರು ತಮ್ಮ ಅಧ್ಯಕ್ಷರ ಹಿತನುಡಿಯಲ್ಲಿ ಸಮವಸ್ತ್ರವು ನಮ್ಮ ಜೀವನದ ನಿತ್ಯ ಪರಿಪಾಠವಾಗಬೇಕು ಸಮಯ ಪಾಲನೆ, ಸಮವಸ್ತ್ರದ ಮೇಲೆ ಗೌರವವಿರಬೇಕು ಸಮವಸ್ತ್ರದಿಂದ ಜಾತಿ ಭೇದವಿರುವುದಿಲ್ಲ, ಬಡವ ಶ್ರೀಮಂತ ಎನ್ನದೆ ನಾವೆಲ್ಲರೂ ಒಂದು ಎನ್ನುವ ಭಾವನೆ ಬೆಳೆಸುತ್ತದೆ ಮಕ್ಕಳು ಒಳ್ಳೆಯ ಮಹಾನ್ ವ್ಯಕ್ತಿಗಳಾಗಿ ಹೆತ್ತವರಿಗೆ ಮತ್ತು ಸಮಾಜಕ್ಕೆ, ಕೀರ್ತಿ ತರುವಂತಹವರಾಗಿ ಎಂದು ಮಕ್ಕಳಲ್ಲಿ ಸ್ಪೂರ್ತಿಯನ್ನು ತುಂಬಿದರು ಅತಿಥಿಗಳು ಸಮವಸ್ತ್ರ ವೀಕ್ಷಣೆ ಮಾಡಿ ಮಕ್ಕಳಿಗೆ ಬಹುಮಾನವನ್ನು ವಿತರಿಸಿದರು ಅದೇ ರೀತಿ ಶ್ರೀ ಶಿವಕುಮಾರ ಎ.ಎಸ.ಐ, ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀಯುತ ಗುರುನಾಥ್ ಮೂಲಗೆ, ಪ್ರೌಢಶಾಲೆಯ ಮುಖಗುರುಗಳಾದ ಶಿವಶರಣಪ್ಪ ಪಾಟೀಲ್, ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಅರ್ಚನಾ ಶಿರಿಗೇರಿ,ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಸಾಯಿ ಸಂಗಮೇಶ್ ಸ್ವಾಗತಿಸಿದರು, ಅಶ್ವಿನಿ ನಿರಂಜಪ್ಪ ವಂದಿಸಿದರು, ಮಾಧವಿ ರಾಮಚಂದ್ರ ನಿರೂಪಿಸಿದರು, ಬಹುಮಾನ ವಿತರಣಾ ಪಟ್ಟಿಯನ್ನು ಸುಂದ್ರಮ್ಮ.ಯು ಹೇಳಿದರು.