ಸಿಂಧನೂರು,ಸೆ.೨೭- ಸಾರ್ವಜನಿಕರ ಹಿತದೃಷ್ಟಿಯಿಂದ ಈ ದೇಶದಲ್ಲಿ ಸಹಕಾರಿಗಳು ಹುಟ್ಟಿಕೊಂಡಿವೆ, ಸಾಲಗಾರರು ಸಹಕಾರಿಯಿಂದ ಸಾಲ ಪಡೆದು ತಾವು ಅಭಿವೃದ್ಧಿ ಹೊಂದಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಯಾದರೆ ಸಹಕಾರಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಉದ್ಯಮಿ ರಾಜೇಶ್ ಹಿರೇಮಠ ಹೇಳಿದರು.
ಸಿಂಧನೂರು ನಗರದ ಶ್ರೀ ಜಗದ್ಗುರು ಪಂಚಾಚಾರ್ಯರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ೨೧ ನೇ ಸರ್ವ ಸದಸ್ಯರ ವಾರ್ಷಿಕೋತ್ಸವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರಿ ಅಧ್ಯಕ್ಷ ಎಸ್ ಎಸ್ ಹಿರೇಮಠ ಅವರು ನಮ್ಮ ತಾಲೂಕಿನಲ್ಲಿ ಸಾಕಷ್ಟು ಸಹಕಾರಿಗಳು ಹುಟ್ಟಿಕೊಂಡಿವೆ ಅದರ ಮಧ್ಯೆ ನಾವು ಸಾಕಷ್ಟು ಪ್ರಯತ್ನ ಮಾಡಿ ಎಲ್ಲಾ ನಿದೇರ್ಶಕರು ಹೆಚ್ಚು ಪ್ರಯತ್ನ ಮಾಡಿ ಮುಂದಿನ ವಾರ್ಷಿಕ ವರ್ಷದಲ್ಲಿ ಸರ್ವ ಸದಸ್ಯ ಶೇರುದಾರರಿಗೆ ಹೆಚ್ಚಿನ ಲಾಭಾಂಶವನ್ನು ಕೊಡುತ್ತೇವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಬಸವರಾಜ ಹಿರೇಮಠ ಅವರನ್ನು ಗೌರವಿಸಲಾಯಿತು. ಮುಖ್ಯ ಕಾರ್ಯನಿರ್ವಾಹಕ ಲಿಂಗನಗೌಡ ವಾರ್ಷಿಕ ವರದಿ ಮಂಡಿಸಿದರು.ನಿರ್ದೇಶಕರಾದ ಮರಿಸ್ವಾಮಿ ಹಿರೇಮಠ ,ಮಲ್ಲಿಕಾರ್ಜುನ ಹಟ್ಟಿ ,ಪಂಪಯ್ಯಸ್ವಾಮಿ ಸಾಲಿಮಠ ,ಸೈಯದ್ ಖಲೀಲ್ ಹಮ್ಹದ್ ,ಜಿ ಉಮೇಶ್ , ಆನಂದ ಹಿರೇಮಠ ,ಲಿಂಗರಾಜ ,ಕವಿತಾ ಹಿರೇಮಠ. ಸದಸ್ಯರುಗಳಾದ ಅಕ್ಕಮ್ಮ ,ಜಯಶ್ರೀ ,ಸಹನಾ ಜ್ಯೋತಿ ,ಯೋಗೀತಾ , ಸನ್ನಿಧಿ ,ಚಂದ್ರಕಲಾ ,ಶೃತಿ ,ರವಿಚಂದ್ರರಡ್ಡಿ ,ಶೇಖರಪ್ಪ ಉಪಸ್ಥಿತರಿದ್ದರು.