ಸಮಯಕ್ಕೆ ಬಾರದ ವೈದ್ಯರು ರೊಗಿಗಳ ನಿತ್ಯ ಪರದಾಟ: ಹೆಸರಿಗೆ ಮಾತ್ರ ತಾಲೂಕಾ ಆಸ್ಪತ್ರೆ

ಮುದ್ದೇಬಿಹಾಳ:ನ.12: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ತಾಲೂಕಾ ಆಸ್ಪತ್ರೆಗೆ ಹಗಲು ಪಾಳಿಯಲ್ಲಿರುವ ವೈಧ್ಯರು ಸಮಯಕ್ಕೆ ಬಾರದೆ ಇರುವ ಕಾರಣ ಆಸ್ಪತ್ರೆಗೆ ಆಗಮೀಸುವ ರೋಗಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದ್ದು ಕೂಡಲೆ ಸಂಬಂದಿಸಿದ ಅಧಿಕಾರಿಗಳು ಹಗಲಿ ಪಾಳಿಯಲ್ಲಿ ಕರ್ತವ್ಯನಿರ್ವಹಿಸುವ ವೈಧ್ಯರ ವಿರುದ್ದ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾತ್ರಿ ಪಾಳಿಯಲ್ಲಿರುವ ವೈದ್ಯರ ಕರ್ತವ್ಯ ಬೆಳಿಗ್ಗೆ 8 ಘಂಟೆಗೆ ಮುಕ್ತಾಯವಾಗುತ್ತದೆ ಹಗಲು ಪಾಳಿಯ ವೈಧ್ಯರ ಕರ್ತವ್ಯ ಬೆಳಿಗ್ಗೆ 8 ಘಂಟೆಗೆ ಪ್ರಾರಂಬವಾದರು 10 ಘಂಟೆವರೆಗೆ ಯಾವ ವೈದ್ಯರು ಬರುವದಿಲ್ಲ. ಗ್ರಾಮೀಣ ಪ್ರದೇಶದಿಂದ ಬರುವ ಮತ್ತು ತುರ್ತು ಚಿಕಿತ್ಸೆಗೆ ಆಗಮೀಸುವ ರೋಗಿಗಳನ್ನು ಪರೀಕ್ಷಿಸಲು ಯಾವ ವೈದ್ಯರು ಲಭ್ಯವಿರದ ಕಾರಣ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ ತಮ್ಮ ಗೋಳು ಕೆಳುವವರು ಯಾರು ಇಲ್ಲದಂತಾಗಿದೆ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಅಧಿಕಾರಿಗಳೆ ಉತ್ತರಿಸಬೇಕಿದೆ.
ಮುದ್ದೇಬಿಹಾಳ ಪಟ್ಟಣದಲ್ಲಿರುವ ತಾಲೂಕಾ ಆಸ್ಪತ್ರೆಯು ಹೆಸರಿಗೆ ಮಾತ್ರ ಮೇಲ್ದರ್ಜೆಗೆ ಎರಿಸಿದ ತಾಲೂಕಾ ಆಸ್ಪತ್ರೆಯಾಗಿದೆ ಇಲ್ಲಿರುವ ಸೌಕರ್ಯಗಳು ರೋಗಿಗಳಿಗೆ ಸರಿಯಾಗಿ ತಲುಪುತಿಲ್ಲ. ಹಗಲು ಪಾಳಿಯ ವೈಧ್ಯರು ಸಮಯಕ್ಕೆ ಸರಿಯಾಗಿ ಬರುವದಿಲ್ಲ ಮತ್ತು ಹೆರಿಗೆ ವಾರ್ಡನಲ್ಲಿರುವ ಕೆಲವು ನರ್ಸಗಳು ಹೆರಿಗೆಯಾದ ಭಾಣಂತಿಯರಿಂದ ಹಣ ವಸೂಲಿ ಮಾಡುತಿದ್ದರು ಯಾರು ಕೆಳುವವರು ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಹಗಲು ಪಾಳಿಯಲ್ಲಿರುವ ವೈಧ್ಯರು ಸಮಯಕ್ಕೆ ಸರಿಯಾಗಿ ಹಾಜರಿದ್ದು ರೋಗಿಗಳ ತಪಾಸಣೆ ನಡೆಸುವಂತೆ ಕ್ರಮ ಜರುಗಿಸಬೇಕು. ಸ್ಟಾಪ್ ನರ್ಸಗಳು ಹೆರಿಗೆ ವಾರ್ಡನಲ್ಲಿ ಭಾಣಂತಿಯರಿಗೆ ಸರಿಯಾಗಿ ಉಟೋಪಚಾರ ನೀಡುವಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿಗಳು ಮುದ್ದೇಬಿಹಾಳ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಕೋವಿಡ್-19 ಚಿಕಿತ್ಸಾ ಕೇಂದ್ರವನ್ನು ಪ್ರಾರಂಬಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರು ವಿಜಯಪುರ ಮತ್ತು ಬಾಗಲಕೋಟ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತಿದ್ದಾರೆ. ಕೊರೊನಾ ಚಿಕಿತ್ಸೆ ಪಡೆಯಲು ಬಡವರು ಪರದಾಡುವಂತಾಗಿದ್ದು ಕೂಡಲೆ ಕೊವಿಡ್-19 ಆಸ್ಪತ್ರೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ- ಅಯ್ಯಪ್ಪ ಬಿದರಕುಂದಿ ರೈತ ಸಂಘಟನೆ ಮುಖಂಡರು.

ಕೋವಿಡ್-19 50 ಹಾಸಿಗೆಗಳ ಆಸ್ಪತ್ರೆ ಪ್ರಾರಂಬವಾಗಿದ್ದು ಆಕ್ಸಿಜನ್ ಪೈಪಲೈನ ಕಾರ್ಯ ಪ್ರಗತಿಯಲ್ಲಿದೆ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತಿದ್ದೆವೆ ಈ ಕುರಿತು ಈಗಾಗಲೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಹಗಲು ಪಾಳಿಯಲ್ಲಿ ವೈದ್ಯರು ಮುಂಜಾನೆ 8 ಘಂಟೆಗೆ ಬರಬೇಕು ತಡವಾಗಿ ಬರುವ ವೈಧ್ಯರ ವಿರುದ್ದ ಕ್ರಮ ಜರುಗಿಸಲಾಗುವದು- ಡಾ. ಅನಿಲಕುಮಾರ ಶೇಗುಣಸಿ ಆಡಳಿತ ವೈಧ್ಯಾಧಿಕಾರಿ ಮುದ್ದೇಬಿಹಾಳ