
ಬೀದರ್:ಸೆ.6: ಸಮಯಕ್ಕೆ ಸರಿಯಾಗಿ ಘನ ತ್ಯಾಜವನ್ನು ನಿರ್ಮೂಲನೆ ಮಾಡಿ ಗ್ರಾಮ ಹಾಗೂ ನಗರಗಳನ್ನು ಸ್ವಚ್ಛವಾಗಿಡುವದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಬೀದರ್ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಹೇಳಿದರು. ಮಂಗಳವಾರ ತಾಲ್ಲೂಕ ಪಂಚಾಯತ ಕಚೇರಿ ಸಭಾಂಗಣದಲ್ಲಿ ನಡೆದ ಘನ ತ್ಯಾಜ ನಿರ್ವಹಣೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಘನ ತ್ಯಾಜ ನಿರ್ವಹಣೆಯ ಸಿಬ್ಬಂದಿಗಳು ತಮಗೆ ವಹಿಸಿದ ಕೆಲಸ ಸಮಯಕ್ಕೆ ಸರಿಯಾಗಿ ಮಾಡಬೇಕು. ಸ್ವಚ್ಛತೆ ಕಾಪಾಡುವ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ. ಗ್ರಾಮ ಪಂಚಾಯತ ಹಾಗೂ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕಿ ಲಕ್ಷ್ಮೀ ಬಿರಾದಾರ, ಘನ ತ್ಯಾಜ ನಿರ್ವಹಣೆ ಸಂಯೋಜನೆ ಗುರುಪ್ರಸಾದ, ಐಇಸಿ ಸಂಯೋಜಕ ಸತ್ಯಜಿತ್ ನಿಡೋದಕರ್,ಎನ್.ಆರ್.ಎಲ್.ಎಂ ಸಿಬ್ಬಂದಿಗಳಾದ ರಮೇಶ ಚಟ್ನಳ್ಳಿ, ಸಂಜೀವ ಕುಮಾರ್ ಹಳ್ಳಿ, ಅರ್ಚನಾ ಪಾಟೀಲ್, ಸುನಿತಾ ರೆಡ್ಡಿ, ಅಭಿಲಾಶ್, ವಿವಿಧ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಇತತರು ಉಪಸ್ಥಿತರಿದ್ದರು.