ಸಮಯಕ್ಕೆ ಆರಂಭವಾಗದ ಕೃಷಿ ಮೇಳ

ರಾಯಚೂರು,ಜ.೧೦-
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಕೃಷಿ ಮೇಳದ ಮೊದಲನೇ ದಿನದ ಉದ್ಘಾಟನಾ ಕಾರ್ಯಕ್ರಮವು ನಿಗದಿಪಡಿಸಿಲಾದ ಸಮಯಕ್ಕಿಂತ ಸುಮಾರು ಎರಡು ಗಂಟೆಗಳ ತಡವಾಗಿ ಆರಂಭ ಗೊಂಡಿತು.
ಮೂರು ದಿನಗಳ ಕಾಲ ನಡೆಯುವ ಈ ಕೃಷಿ ಮೇಳಕ್ಕಾಗಿ ಎರಡು ಮೂರು ದಿನಗಳ ಹಿಂದೆಯೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮೊದಲನೇ ದಿನದ ಕಾರ್ಯಕ್ರಮವೇ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿಲ್ಲ. ವೇದಿಕೆ ಮೇಲೆ ಹಾಜರಿರಬೇಕಾದ ಸ್ಥಳೀಯ ಶಾಸಕರು, ಗ್ರಾಮೀಣ ಶಾಸಕರು, ತಾಲೂಕ ಕ್ಷೇತ್ರಗಳ ಶಾಸಕರು, ಉಸ್ತುವಾರಿ ಸಚಿವರು, ಗಣ್ಯರು ಹಾಗೂ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು ತಡವಾಗಿ ಹಾಜರಾದರು. ಇದರಿಂದ ಬೇಗನೆ ಬಂದು ಆಸನಗಳಲ್ಲಿ ಹಾಜರಾದ ಸಾರ್ವಜನಿಕರು ಮತ್ತು ರೈತರು ಬೇಸರ ವ್ಯಕ್ತಪಡಿಸಿದರು.