ಸಮಪರ್ಕ ರಸಗೊಬ್ಬರ ಬೀಜ ಪೂರೈಕೆಗೆ ಆಗ್ರಹಿಸಿ ಮನವಿ.


 ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.19: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು. ಸಮಪರ್ಕ ರಸಗೊಬ್ಬರ ಮತ್ತು ಬಿತ್ತನೆ ಬೀಜವನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಮಹೇಶಬಾಬುವರಿಗೆ ಮನವಿ ಸಲ್ಲಿಸಿದರು.
ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಮಂದಾಗಿದ್ದಾರೆ,  ರಸಗೊಬ್ಬರದ ಅವಶ್ಯಕತೆ ಇರುವುದರಿಂದ ಜಿಲ್ಲೆಯ ಕೆಲವು ಕಡೆ ಯೂರಿಯಾ, ಡಿ.ಐ.ಪಿ., ಮತ್ತು ಹೆಚ್ಚಿನ ಧರದಲ್ಲಿ ಮಾರಾಟ ವಾಗುತ್ತಿದ್ದು ಇದರಿಂದ ರೈತರಿಗೆ ತುಂಬಾ ತೊಂದರೆಯುಂಟಾಗುತ್ತಿದೆ, ಈ ಬಗ್ಗೆ ಕೃಷಿ ಇಲಾಖೆ ಮತ್ತು ರಸಗೊಬ್ಬರ ಮಾರಾಟಗಾರರ ಸಭೆ ಕರೆದು ಸೂಕ್ತ ಕ್ರಮಕ್ಕೆ ಮುಂದಾಗಬೇಕು, ಮತ್ತು ಈ ಹಿಂದೆ ಸುರಿದ ಅಕಾಲಿಕ ಮಳೆಗೆ ಹೊಸಪೇಟೆ ತಾಲೂಕಿನಲ್ಲಿ ಬಾಳೆಬೆಳೆ ಹಾನಿಯಾಗಿದ್ದು, ಇಲ್ಲಿಯವರೆಗೂ ಇದರ ಬೆಳೆಪರಿಹಾರದ ಹಣ ಬಂದಿರುವುದಿಲ್ಲ. ಆದ ಕಾರಣ ಶೀಘ್ರವಾಗಿ ಬಾಳೆ ಬೆಳೆಪರಿಹಾರ ಹಣವನ್ನು ಮಂಜೂರು ಮಾಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. 
ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕಾರ್ತಿಕ್,  ಮುಖಂಡರಾದ  ಹೆಚ್.ಜಿ.ಮಲ್ಲಿಕಾರ್ಜುನ, ಟಿ.ನಾಗರಾಜ,  ರೇವಣ ಸಿದ್ದಪ್ಪ,  ಕೆ.ಹೆಚ್.ಮಹಾಂತೇಶ,  ಜಗನ್,  ಬಸವರಾಜ್, ಹೇಮರೆಡ್ಡಿ,  ಕೊಟ್ರಪ್ಪ ಇದ್ದರು.