ಸಮನ್ವಯ ಸೇವಾ ಫೌಂಡೇಶನ್‍ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

ಹುಬ್ಬಳ್ಳಿ,ಮೇ29: ಕೋವೀಡ್ 19 ಸಂಕಷ್ಟ ಸಮಯದಲ್ಲಿ ಫ್ರಂಟ್‍ಲೈನ್ ಕೊರೊನಾ ವಾರಿಯರ್ಸ್‍ಗಳಾದ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಶ್ರಮಿಸಿದ್ದು ಅವರ ಕಾರ್ಯ ಶ್ಲಾಘನೀಯ ಎಂದು ಸಮನ್ವಯ ಸೇವಾ ಫೌಂಡೇಶನ್ ಅಧ್ಯಕ್ಷ ವಿನೋದ ಅಲಾಡಿ ಹೇಳಿದರು.
ನಗರದ ಮಾಧವಪುರದಲ್ಲಿಂದು ಸಮನ್ವಯ ಸೇವಾ ಫೌಂಡೇಶನ್” ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ಸಾಕಷ್ಟು ಸಮಯದಲ್ಲಿ ತಮ್ಮ ಜೀವನದ ಹಂಗು ತೊರೆದು ಸದಾ ಸಮಾಜ ಮುಖಿಯಾಗಿ ಕಾರ್ಯ ಮಾಡುತ್ತಿರುವ ಪತ್ರಕರ್ತರಿಗೆ ಎಲ್ಲವೂ ಸಹಾಯ ಸಹಕಾರ ನೀಡಬೇಕಾಗಿದೆ ಎಂದರು.
ಫೌಂಡೇಶನ್ ಕಾರ್ಯದರ್ಶಿ ಎಸ್ .ಕೆ .ಕೊಟ್ರೇಶ್ ಮಾತನಾಡಿ, ಪತ್ರಕರ್ತರು ಎಷ್ಟೇ ಒತ್ತಡ ಮತ್ತು ಕಷ್ಟದಲ್ಲಿದ್ದರು ಹಗಲಿರುಳು ಎನ್ನದೇ ಕೋವಿಡ್‍ಗಾಗಿ ದುಡಿಯುತ್ತಿದ್ದಾರೆ. ಅವರ ಕಾರ್ಯಕ್ಕೆ ಪೆÇ್ರೀತ್ಸಾಹವನ್ನು ನೀಡಬೇಕು ಎಂದರು.
ಫೌಂಡೇಶನ್‍ನ ಗೌರವಾಧ್ಯಕ್ಷರಾದ ವಿ .ಜಿ. ಪಾಟೀಲ ಮಾತನಾಡಿ, ಕೋವಿಡ್‍ನಿಂದ ಪತ್ರಕರ್ತರೂ ಸಹ ಆರ್ಥಿಕ ಸಂಕಷ್ಟದಲ್ಲಿದ್ದು ತಮ್ಮ ಫೌಂಡೇಷನ್ ವತಿಯಿಂದ ಅಲ್ಪ ಸಹಾಯ ಮಾಡುತಿದ್ದೇವೆ ಎಂದರು.
ಫೌಂಡೇಷನ್ ಉಪಾಧ್ಯಕ್ಷ ದೀಪಕ್ ಕರ್ಜಗಿ, ಖಜಾಂಚಿಗಳಾದ ಆಕಾಶ್ ಮಾಡಳ್ಳಿ, ನಂದೀಶ ಹಿರೇಮಠ್, ವಿನಾಯಕ್ ಅವಾರಿ, ಸೂರಜ್ ಕಬಾಡಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.