ಸಮನ್ವಯ ತತ್ವದ ಮೇರು ಸಾಧಕ ರಾಮಕೃಷ್ಣ ಪರಮಹಂಸ

ಕಲಬುರಗಿ:ಮಾ.12: ಧರ್ಮಗಳು ಬೇರೆ-ಬೇರೆಯಾದರೂ ಕೂಡಾ, ಎಲ್ಲಾ ಧರ್ಮಗಳ ಮೂಲತತ್ವ ಒಂದೇ ಆಗಿದೆ. ‘ದೇವನೊಬ್ಬ, ನಾಮ ಹಲವು’ ಆಗಿದ್ದು, ಎಲ್ಲಾ ಧರ್ಮಗಳ ತಿರುಳು ಒಂದೇಯಾಗಿದೆ. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಸೌಹಾರ್ದವಾಗಿ ಬದುಕಬೇಕೆಂಬ ಸಮನ್ವಯ ತತ್ವವನ್ನು ಪ್ರತಿಪಾದಿಸಿದ ರಾಮಕೃಷ್ಣ ಪರಮಹಂಸ್‍ರ ಸಂದೇಶ ಪಾಲನೆ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಮಂಗಳವಾರ ಜರುಗಿದ ‘ರಾಮಕೃಷ್ಣ ಪರಮಹಂಸ್‍ರ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಭಾರತದಲ್ಲಿ ಆಂಗ್ಲರ ಪ್ರಭಾವದಿಂದ ಎಲ್ಲೆಡೆ ಪಾಶ್ಚಾತ್ಯ ಸಂಸ್ಕøತಿ ತುಂಬಿದ್ದ ಅಂದಿನ ದಿನಗಳಲ್ಲಿ ಪರಮಂಹಸರು ಭಾರತೀಯ ಸಂಸ್ಕøತಿ, ಧರ್ಮ ಪರಂಪರೆಗಳ ಮಹತ್ವವನ್ನು ಎಲ್ಲೆಡೆ ಪ್ರಚಾರ ಮಾಡಿ ಜನಜಾಗೃತಿಯನ್ನುಂಟು ಮಾಡಿದರು. ಇದರಿಂದ ಸಮಾಜದ ಎಲ್ಲಾ ವರ್ಗದವರ ಮೇಲೆ ಇವರ ಪ್ರಭಾವ ಬೀರಿತು. ಇವರ ಪ್ರಭಾವಕ್ಕೆ ಒಳಗಾಗಿ ಅಸಂಖ್ಯಾತ ಶಿಷ್ಯಬಳಗವೇ ಸಿದ್ದವಾಯಿತು. ಅದರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರಾಗಿದ್ದಾರೆ. ಕಂದಾಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಅವರು ಯಾವಾಗಲೂ ‘ಆತ್ಮ ಸಾಕ್ಷಾತ್ಕಾರ’ದ ಬಗ್ಗೆ ಉಪದೇಶವನ್ನು ನೀಡುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಲಕ್ಷ್ಮೀ ಸುತಾರ, ಸಾನಿಯಾ ಶೇಖ್, ಪ್ರಮುಖರಾದ ಬೀರಪ್ಪ ಘೋಡಕೆ, ಪರಶುರಾಮ ನಾಟಿಕಾರ, ರಜನಿಕಾಂ ಸಪ್ಪಾಣಿ, ಶರಣಬಸಪ್ಪ ಹಡಪದ, ಆದಿತ್ಯ ಸಿಂಗೆ, ಸೋಮಶೇಖರ, ಆಕಾಶ ರಾಠೋಡ, ಮಲ್ಲಿಕಾರ್ಜುನ ನಿಲೂರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.