ಸಮತೋಲಿತ ಆಹಾರ ಸೇವನೆ, ಯೋಗ, ಧ್ಯಾನ ದೈಹಿಕ ವ್ಯಾಯಾಮಗಳನ್ನೊಳಗೊಂಡ ಜೀವನ ಶೈಲಿ ಆರೋಗ್ಯವಂತ ಬದುಕಿಗೆ ಸಹಕಾರಿಃ ಜಯರಾವi ಲಮಾಣಿ

ವಿಜಯಪುರ, ಎ.2-ಸಮತೋಲಿತ ಆಹಾರ ಸೇವನೆ, ಯೋಗ, ಧ್ಯಾನ ಸೇರಿದಂತೆ ದೈಹಿಕ ವ್ಯಾಯಾಮಗಳನ್ನೊಳಗೊಂಡ ಜೀವನ ಶೈಲಿ ಆರೋಗ್ಯವಂತ ಬದುಕಿಗೆ ಸಹಕಾರಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜಯರಾವi ಲಮಾಣಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಆರೋಗ್ಯ ಇಲಾಖೆ ಮತ್ತು ನೆಹರು ಯುವ ಕೇಂದ್ರ ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕಸ್ತೂರಿ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಪೋಷಣ ಪಖ್ವಾಡ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ದೇಶದಲ್ಲೇ ರಾಜ್ಯ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ತರಲು ಇಲಾಖೆಯ ಎಲ್ಲಾ ಸಿಬ್ಬಂದಿ ಇನ್ನಷ್ಟು ಉತ್ಸುಕರಾಗಿ ದುಡಿಯಬೇಕು ಎಂದು ಮನವಿ ಮಾಡಿದರು. ಬಹು ಮುಖ್ಯವಾಗಿ ಅಂಗನವಾಡಿ ಕಾರ್ಯಕತೆರ್Àಯರು, ತಳಮಟ್ಟದ ಜನ ಸಮುದಾಯವನ್ನು ತಲುಪಬೇಕು. ಇದಕ್ಕಾಗಿ ಅವರು ಮನೆ ಮನೆಗೆ ಭೇಟಿ ನೀಡಿ ಪೋಷಣ ಪಖ್ವಾಡ ಕಾರ್ಯಕ್ರಮದ ಕುರಿತು ಮಾಹಿತಿ ನೀಡಬೇಕು. ಕುಟುಂಬದ ಸದಸ್ಯರಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಕಂಡು ಬಂದರೆ ಕೊಡಲೇ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿಬೇಕು ಎಂದರು. ಅಂಗನವಾಡಿ ಕೇಂದ್ರ, ಶಾಲೆಗಳ ಮೈದಾನ, ಮನೆ ಮುಂದೆ ಅಥವ ತಾರಸಿಯಲ್ಲಿ ದೈನಂದಿನ ಅಡುಗೆಗೆ ಬಳಸುವ ಮತ್ತು ಔಷಧೀಯ ಗುಣಗಳ್ಳುಳ್ಳ ಸಸಿಗಳನ್ನು ನೆಟ್ಟು ಕೈತೋಟ ನಿರ್ಮಾಣ ಮಾಡುವ ಮೂಲಕ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ನಗರದ ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ಬಾಲಕೃಷ್ಣ, ಈಗಲೂ ಸಹ ಶೇಕಡ 70ರಷ್ಟು ಹೆಣ್ಣು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಪೋಷಣ ಅಭಿಯಾನದ ಕಾರ್ಯಕ್ರಮವನ್ನು ಈ ಸಮುದಾಯಕ್ಕೆ ತಲುಪಿಸುವುದರಿಂದ ಸುಧಾರಣೆ ಕಾಣಬೇಕಿದೆ ಎಂದು ತಿಳಿಸಿದರು. ರಕ್ತಹೀನತೆಯನ್ನು ಹೋಗಲಾಡಿಸಲು ಕಬ್ಬಿಣ ಅಂಶವುಳ್ಳ ಮಾತ್ರೆ ಮತ್ತು ಆಹಾರ ಸೇವನೆ ಮಾಡಬೇಕು ಎಂದು ತಿಳಿಸಿದರು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ನಾವು ತಿನ್ನುವ ಆಹಾರದ ಒಟ್ಟು ಪ್ರಮಾಣದಲ್ಲಿ ಮುಕ್ಕಾಲು ಪಾಲು ತರಕಾರಿ ಮತ್ತು ಹಣ್ಣುಗಳಿಂದ ಕೂಡಿರಬೇಕು, ಮೂಳೆಗಳ ಬೆಳವಣಿಗೆಗೆ ಕ್ಯಾಲ್ಶಿಯಮ್ ಯುಕ್ತ ಆಹಾರ ಸೇವಿಸಬೇಕು ಎಂದರು. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಪ್ರತಿಯೂಬ್ಬರಿಗೂ ಕೋವಿಡ್ ಲಸಿಕೆಯನ್ನು ಸರಕಾರಿ ದವಾಖಾನೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ, ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಲಸಿಕೆಗೆ 250 ರೂಪಾಯಿ ತೆರÀಬೇಕಾಗುತ್ತದೆ ಎಂದು ತಿಳಿಸಿದರು.
ಲಸಿಕೆ ಪಡೆಯುವುದರಿಂದ ಅಡ್ಡ ಪರಿಣಾಮವುಂಟಾಗುವುದಿಲ್ಲ ಎಂದು ಆಶ್ವಾಸನೆ ನೀಡಿದರು. ಒಂದು ವೇಳೆ ಲಸಿಕೆ ತೆಗೆದುಕೊಂಡ ಮೇಲೆ ಕೋವಿಡ್ ಕಾಣಿಸಿಕೊಂಡರೂ ಅದು ಗಂಢಾಂತರಕಾರಿಯಾಗಿರುವುದಿಲ್ಲ, ಸುಲಭ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.
ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಸಿ ಕೆ ಸುರೇಶ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಆಧಿಕಾರಿಗಳಾದ ರಾಹುಲ್ ಡೋಂಗ್ರೆ, ಅಂಗನವಾಡಿ ಮೇಲ್ವಿಚಾರಕಿ ಶ್ರೀದೇವಿ ಪೂಜಾರಿ, ರತ್ನ ಪೂಜಾರ, ಹೈದರ ನಧಾಫ್, ಇಸ್ಮಾಯಿಲ್ ಉಕ್ಕಲಿ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಆಶ್ವಿನಿ ಸನದಿ ಸ್ವಾಗತಿಸಿದರು. ರಬಿಯಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.