ಸಮತೋಲನ ಆಹಾರ ಸೇವನೆ ಯಿಂದ ಹಿರಿಯ ವಯಸ್ಸಿನಲ್ಲಿಯೂ ಆರೋಗ್ಯವಾಗಿ ಇರಲು ಸಾದ್ಯಃ ಕಾಶಿಬಾಯಿ ಖ್ಯಾಡಗಿ

ವಿಜಯಪುರ, ಅ.10-ರೋಟರಿ ಪೆÇ್ರೀಬಸ್ ಕ್ಲಬ್ ವಿಜಯಪುರ (ಹಿರಿಯ ನಾಗರಿಕರ ವೇದಿಕೆ) ವತಿಯಿಂದ 4ನೇ ಮಾಸಿಕ ಅಖಿಲ ಭಾರತ ವೀರಶೈವ ಮಹಾಸಭೆಯ ಸಭಾ ಭವನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಡಾಕ್ಟರ್ ಕಾಶಿಬಾಯಿ ಖ್ಯಾಡಗಿ ಪ್ರಾಧ್ಯಾಪಕರು ಕ್ರಷಿ ಮಹಾವಿದ್ಯಾಲಯ ವಿಜಯಪುರ ಇವರು ಭಾಗವಹಿಸಿ ಹಿರಿಯ ನಾಗರಿಕರ ಉತ್ತಮ ಆರೋಗ್ಯಕ್ಕೆ ಆಹಾರ ಪೆÇೀಷಕಾಂಶಗಳ ಮಹತ್ವ ಕುರಿತು ಆಹಾರದ 6 ಮುಖ್ಯ ಘಟಕಗಳಾದ ಕಾರ್ಬೋಹೈಡ್ರೇಟ್ಸ್, ಪೆÇ್ರಟೀನ್, ಕೊಬ್ಬು, ಲವಣಾಂಶಗಳು, ವಿಟಮಿನ್ ಹಾಗೂ ನೀರಿನ ಸಮತೋಲನ ಆಹಾರ ಸೇವನೆ ಯಿಂದ ಹಿರಿಯ ವಯಸ್ಸಿನಲ್ಲಿಯೂ ಆರೋಗ್ಯವಾಗಿ ಇರಲು ಸಾದ್ಯ ಎಂದು ಹಿರಿಯನಾಗರಿಕರಿಗೆ ತಿಳಿ ಹೇಳಿದರು.
ನಮ್ಮ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರವು ಎಲ್ಲ ಪೆÇೀಷಕಾಂಶಗಳನ್ನು ಹೊಂದಿದೆ, ಆದರೆ ನಾವು ಆಧುನಿಕ ಬದುಕಿನ ಶೈಲಿ ಯಿಂದ ಮೈದಾ ಹಿಟ್ಟು, ಸಕ್ಕರೆ, ಹೆಚ್ಚಿನ ಮಸಾಲೆ ಪದಾರ್ಥಗಳನ್ನು ಸೇವನೆ ಮಾಡಿ ಬೇಗನೇ ಹೃದಯ ಹಾಗೂ ಸಕ್ಕರೆ ಸಂಬಂಧಿಸಿದ ಕಾಯಿಲೆಗಳನ್ನು ಆಹ್ವಾನಿಸುತ್ತಿದ್ದೇವೆ. ಅಲ್ಲದೆ ಜೀರ್ಣಕ್ರಿಯೆ ಕ್ಷೀಣಿಸುತ್ತಿದೆ ಹಾಗೂ ಜೀವಕೋಶಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಸಮತೋಲನ ಆಹಾರ ಸೇವನೆ ಅವಶ್ಯ ಅದರಂತೆ ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ ಆರೋಗ್ಯ ಹೊಂದಲು ನಿಯಮಿತ ವ್ಯಾಯಾಮ, ಯೋಗ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು
ವಿಠಲ ತೇಲಿಯವರು ಅಧ್ಯಕ್ಷತೆ ವಹಿಸಿ ಎಲ್ಲಾ ಹಿರಿಯರು ಆರೋಗ್ಯಕರ ಜೀವನ ಕ್ರಮ ಅಳವಡಿಸಿಕೊಂಡು ಎಲ್ಲಾ ರೊಡನೆ ಹೊಂದಿ ಕೊಂಡು ಬಾಳಲು ಸಲಹೆ ಇತ್ತರು.
ಮಹಾದೇವ ಹಾಲಳ್ಳಿ ಕಾರ್ಯದರ್ಶಿಗಳು ಎಲ್ಲರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಎಸ್ ಜಿ ನಾಡಗೌಡರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಆಯೋಜಿಸಲು ಜಂಟಿ ಕಾರ್ಯದರ್ಶಿ ಪರಸುರಾಮ ಪೆÇೀಳ ಹಾಗೂ ಖಜಾಂಚಿ ಜಗದೀಶ್ ಮೋಟಗಿ ಸಹಕರಿಸಿದರು.ಸುಮಾರು 60 ಜನ ಹಿರಿಯ ನಾಗರಿಕರು ಹಾಗೂ ಮಹಿಳೆಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.