ಸಮಗ್ರ ವೀರಾಗ್ರಣಿ ಪ್ರಶಸ್ತಿ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಸೆ7: ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಸತತ 13 ನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಲಭಿಸಿದೆ. ಮುರಗೋಡದಲ್ಲಿ ಜರುಗಿದ ಪದವಿಪೂರ್ವ ಮಹಾವಿದ್ಯಾಲಯಗಳ ಸವದತ್ತಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಈ ಸಾಧನೆ ಮಾಡಿದ್ದು ಒಟ್ಟು 65 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ಆಟಗಳಲ್ಲಿ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಟೆನಿಕ್ವಾಯಿಟ್ ದ್ವಿತೀಯ, ಜಂಪ್‍ರೋಪ್ ಪ್ರಥಮ, ಚದರಂಗ ದ್ವಿತೀಯ, ಥ್ರೋಬಾಲ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ವಾಲಿಬಾಲ ಪ್ರಥಮ, ಥ್ರೋಬಾಲ್ ಪ್ರಥಮ, ಟೆನಿಕ್ವಾಯಿಟ್ ಪ್ರಥಮ, ಯೋಗಾಸನ ಪ್ರಥಮ, ಜಂಪ್ ರೋಪ್ ಪ್ರಥಮ, ವೈಯಕ್ತಿಕ ಆಟಗಳಲ್ಲಿ 100 ಮೇ ಓಟ ಪ್ರಥಮ, 3000 ನಡಿಗೆ ಪ್ರಥಮ ಹಾಗೂ ದ್ವಿತೀಯ, ಗುಂಡು ಎಸೆತ, ಹ್ಯಾಮರ್ ಥ್ರೋ, ತ್ರಿವಿದ ಜಿಗಿತ, ಜಾವಲಿನ್ ಥ್ರೋ, ಗುಡ್ಡುಗಾಡು ಓಟ, 400 ಮೀ. ರಿಲೆಯಲ್ಲಿ ಪ್ರಥಮ, 100 ಮೀ ರೀಲೆ, 300 ಮೀ, 1500 ಮೀ, 800 ಮೀ ಓಟಗಳಲ್ಲಿ ದ್ವಿತೀಯ, ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಊರಿನ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.