ಸಮಗ್ರ ಕೃಷಿ ವ್ಯವಸ್ಥೆ ಅಳವಡಿಕೆ ಇಂದಿನ ಅಗತ್ಯ

ಬೀದರ್ :ನ.4: ಬೆಳೆ ನಷ್ಟವಷ್ಟೇ ಅಲ್ಲದೆ ಇತರೆ ಕಾರಣಗಳಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಮಗ್ರ ಕೃಷಿ ವ್ಯವಸ್ಥೆ (ಇಂಟಿಗ್ರೇಟೆಡ್ ಫಾಮಿರ್ಂಗ್ ಸಿಸ್ಟಮ್) ಕೃಷಿ ಅಳವಡಿಕೆ ಮಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ತಡೋಳಾ-ಮೇಹಕರ್ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ನುಡಿದರು.
ಬುಧವಾರ ತಾಲೂಕಿನ ಚಿಟ್ಟಾ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಸ್ವಾಮಿಯವರ ಹೋಲದಲ್ಲಿ ರಿಲಾಯನ್ಸ್ ಫೌಂಡೇಷನ್, ಪ್ರವರ್ದಾ ಮತ್ತು ಔಟ್ರಿಚ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರೈತರಿಗೆ ಹವಮಾನಕ್ಕೇ ಅನುಗುಣವಾಗಿ ವೈಜ್ಞಾನಿಕ ಕೃಷಿ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಸಂಪನ್ಮೂಲ ಹೆಚ್ಚಿಸಲು, ಹವಾಮಾನ ವೈಪರಿತ್ಯ ಎದುರಿಸಲು, ಜೀವ ವೈವಿಧ್ಯ ವೃದ್ಧಿಗೆ ಹಾಗೂ ಕಡಿಮೆ ದರದಲ್ಲಿ ಕೃಷಿ ಸಂಪನ್ಮೂಲ ಮರು ಬಳಕೆ ಮಾಡಲು ಇಂದು ಸಮಗ್ರ ಕೃಷಿ ವ್ಯವಸ್ಥೆ ಅಗತ್ಯವಾಗಿದೆ . ರಾಜ್ಯದಲ್ಲಿ ಶೇ. 70ರಷ್ಟು ಒಣ ಭೂಮಿ ಹಾಗೂ ಕೇವಲ ಶೇ. 30 ರಷ್ಟು ಭಾಗ ನೀರಿದ್ದರೂ, ಅದನ್ನು ದುರುಪಯೋಗ ಮಾಡಲಾಗುತ್ತಿದೆ. ಕಡಿಮೆ ನೀರಿನಿಂದ ಹೆಚ್ಚು ಬೆಳೆಯುವ ಕೃಷಿ ಪದ್ಧತಿಯನ್ನು ನಮ್ಮ ರೈತರು ರೂಢಿಸಿಕೊಳ್ಳಬೇಕಿದೆ . ನೂತನ ತಂತ್ರಜ್ಞಾನಗಳನ್ನು ಆವಿಷ್ಕಾರಗೊಳಿಸಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೆರವಾಗಬೇಕಿದೆ. ನಿರುದ್ಯೋಗಿ ರೈತರ ಕೈಗೆ ಕೆಲಸ ನೀಡಬೇಕು. ಪ್ರಮುಖವಾಗಿ ಮಣ್ಣಿನ ಗುಣಮಟ್ಟ ವೃದ್ಧಿಸಬೇಕು. ಮಿಶ್ರ ಬೇಸಾಯ ಹಾಗೂ ಹಂದಿ, ಕುರಿ, ಕೋಳಿ, ಮೊಲ, ಮೀನು ಸಾಕುವುದು, ತರಕಾರಿಗಳನ್ನು ಬೆಳೆಯಲು ಮುಂದಾಗಬೇಕು ಎಂದರು.
ಕೆವಿಕೆ ಜನವಾಡಾ ಮುಖ್ಯಸ್ಥ ಡಾ. ಸುನೀಲ್‍ಕುಮಾರ್ ಎ.ಎನ್ ಎಂ ಮಾತನಾಡಿ, ರೈತರು ತಮ್ಮ ಜಿಲ್ಲೆಯ ವಾತವರಣದ ಮಾಹಿತಿಯನ್ನು ಪಡೆದು , ವಾತವರಣಕ್ಕೆ ತಕ್ಕ ಬೆಳೆಗಳನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯಬೇಕು. ಕಡ್ಡಾಯವಾಗಿ ಎಲ್ಲರು ಮಣ್ಣನ್ನು ಪರೀಕ್ಷೆ ಮಾಡಿಸಬೇಕು. ಇದರಿಂದ ತಮ್ಮ ಭೂಮಿಗೆ ಯಾವ ಪೋಷಕಾಂಶ ಕೊರತೆಯಿದೆ ಅನ್ನುವ ನಿಖರ ಮಾಹಿತಿ ದೊರಕಲಿದೆ. ರೈತರು ಬೂಮಿಯಲ್ಲಿ ಕಡಿಮೆ ಬೀಜ ಬಿತ್ತನೆ ಮಾಡಿ ಆಧುನಿಕ ಪದ್ದತಿಯ ವ್ಯವಸಾಯ ಅಳವಡಿಸಿಕೊಂಡರೇ ಉತ್ತಮ ಸಮೃದ್ಧಿ ದೊರಕಲಿದೆ ಎಂದರು.
ಪಶು ಪಾಲನಾ ಇಲಾಖೆ ಹಾಗು ಪಶು ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ನರಸಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು ಕೃಷಿಯೊಂದಿಗೆ ಇನ್ನಿತರ ಸಾಕು ಪ್ರಾಣಿಗಳನ್ನು ಸಾಕಬೇಕು. ಹವಾಮಾನ ಎರುಪೇರಿನಿಂದ ಬೆಳೆ ಬೆಳೆಯದ ಆಪತ್ ಕಾಲಿತ ಸಮಯದಲ್ಲಿ ಜಾನುವಾರುಗಳಿಂದ ಬರುವ ಆದಾಯದಿಂದ ಸಂಸಾರ ಸಾಗಿಸಲು ಸಹಕಾರಿಯಾಗಲಿದೆ ಎಂದರು.
ಒಂದು ದಿನದ ಕಾರ್ಯಗಾರದಲ್ಲಿ ಬೀದರ್, ಔರಾದ್, ಬಸವಕಲ್ಯಾಣ, ಕಮಲನಗರ, ಹುಮನಾಬಾದ್, ಹುಲಸೂರು,ಭಾಲ್ಕಿ ತಾಲೂಕಿನ 700ಕ್ಕೂ ಹೆಚ್ಚಿನ ರೈತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಸಂವಾದ ಕಾರ್ಯಕ್ರಮದಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ನೂರಿತ ವಿಷಯ ತಜ್ಞ ವಿಜ್ಞಾನಿಗಳು ಉತ್ತರ ನೀಡಿದರು. ನಂತರ ಪ್ರಗತಿಪರ ರೈತ ಕಾಶಿಲಿಂಗ ಸ್ವಾಮಿಯವರ ಹೋಲದಲ್ಲಿನ ಹಲವಾರು ರೀತಿಯ ಆಧುನಿಕ ಕೃಷಿ ಪದ್ದತಿಯ ವಿವಿಧ ವಿಧಾನಗಳನ್ನು ನೋಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ರೈತರಿಗೆ ಹಾಗು ಅಧಿಕಾರಿಗಳಿಗೆ ಔರಾದ್ ತಾಲೂಕಿನ ನಾಗುರ(ಎಂ) ಗ್ರಾಮದ ಅನೀಲ್ ಗೌಡಾ ಅವರು ತಂiÀiರಿಸಿದ ಖಾಧ್ಯ ಅನ್ನ, ಹುಗ್ಗಿ, ಸಾಂಬಾರುವಿನ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಡಾ. ಆರ್ ಎಲ್ ಜಾಧವ್ , ಡಾ,. ಅಕ್ಷಯ್ ಕುಮಾರ್ ಡಾ. ನರಸಪ್ಪ, ಕಾಶಿಲಿಂಗ ಸ್ವಾಮಿ, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳ್, ಡಾ. ಪ್ರವೀಣ, ಡಾ. ಅಶೋಕ ಸೂರ್ಯವಂಶಿ, ರಾಜೇಂದ್ರ ಮಾಳಿ, ಸುನೀಲ್, ಮಚಿಂದ್ರ ಸುತಾರ್ ಇತರರಿದ್ದರು.ಸಂಪನ್ಮೂಲವ್ಯಕ್ತಿ ಮಧುಕರ್ ನಿರೂಪಣೆ ಮಾಡಿದರು.