ಸಮಗ್ರ ಕೃಷಿ ಪದ್ಧತಿಯ ಮೂಲಕ ನೈಸರ್ಗಿಕ ಸಮತೋಲನ : ಶ್ಯಾಮಬಿಹಾರಿ ಗುಪ್ತಾ

ಧಾರವಾಡ ಡಿ.19-ಯುವಕರು ಭಾರತೀಯಕೃಷಿಯ ಸುಧಾರಣೆಗೆಕೇಂದ್ರಬಿಂದು. ಜಾನುವಾರು ಮತ್ತು ಪಕ್ಷಿಗಳನ್ನೊಳಗೊಂಡ ಸಮಗ್ರ ಕೃಷಿ ಪದ್ಧತಿಯು ಸಾವಯುವಕೃಷಿಯ ಮೂಲಕ ಜೈವಿಕ ವೈವಿಧ್ಯತೆಯನ್ನುಕಾಪಾಡುವಲ್ಲಿ ಮಹತ್ವ ಪೂರ್ಣವಾಗಿದೆಎಂದು ಸದಸ್ಯ, ಕೃಷಿ ಸಮೃದ್ಧಿ ಆಯೋಗ, ಶ್ಯಾಮಬಿಹಾರಿ ಗುಪ್ತಾ ಕೃವಿವಿಯಲ್ಲಿ ವಿಶ್ವಬ್ಯಾಂಕ ನೆರವಿನೊಂದಿಗೆ ಸಾಂಸ್ಥಿಕ ಅಭಿವೃದ್ಧಿಯೋಜನೆಯಡಿಯಲ್ಲಿ ಆಯೋಜಿಸಿದ ಎರಡು ದಿನಗಳ ಸಾವಯವ ಪ್ರಮಾಣೀಕರಣಆನ್‍ಲೈನ್‍ಕೋರ್ಸ, ಉದ್ಘಾಟಿಸುವ ಮೂಲಕ ರಾಸಾಯನಿಕ ಮುಕ್ತ ಕೃಷಿ, ಶೂನ್ಯ ಬಂಡವಾಳ ಕೃಷಿ, ಸಮಗ್ರ ಕೃಷಿ ಪದ್ದತಿ ಹಾಗೂ ಆತ್ಮ ನಿರ್ಭರತೆಯ ಕೃಷಿ ಅಳವಡಿಕೆಗಳ ಬಗ್ಗೆ ವಿವರಿಸಿದರು. ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಮೇವು ಮತ್ತು ಮಸಾಲೆಗಳನ್ನು ಒಳಗೊಂಡ ಐದು ವೈವಿದ್ಯತೆಗಳು(ಜಿiveಟಚಿಥಿeಡಿeಜ) ನೈಸರ್ಗಿಕಕೃಷಿಯುರೈತರಆದಾಯವನ್ನು ದ್ವಿಗುಣಗೊಳಿಸುವುದಲ್ಲದೆ ರೈತರು ಹಾಗೂ ಗ್ರಾಹಕರಉತ್ತಮಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವಪೂರ್ಣವಾಗಿದೆ.

ಕುಲಪತಿಡಾ. ಮಹಾದೇವ ಬ. ಚೆಟ್ಟಿಕಾರ್ಯಕ್ರಮದಆರಂಭದಲ್ಲಿ ಭಾರತವು ಸುಸ್ಥಿರ ಉತ್ಪಾದಕತೆಯನ್ನುತಲುಪಿದ್ದು ಪ್ರಸ್ತುತ ಮಾನವನಆರೋಗ್ಯದಕ್ಷೇಮಕ್ಕಾಗಿಗುಣಮಟ್ಟದಆಹಾರಉತ್ಪಾದನೆಗೆಒತ್ತು ನೀಡಬೇಕಾಗಿದೆಎಂದರು. ‘ಉನ್ನತ ಭಾರತಅಭಿಯಾನ’ಯೋಜನೆಕುರಿತು ಮಾತನಾಡಿದಅವರು ಭಾರತದ ಪ್ರತಿಯೊಂದು ಹಳ್ಳಿಯಲ್ಲಿ ಜೈವಿಕ ಅನಿಲ ಘಟಕ ಸ್ಥಾಪನೆ ಹಾಗೂ ಪ್ರಮಾಣೀಕೃತ ಸಾವಯವ ಕೃಷಿ ಪದ್ದತಿಯನ್ನುಉತ್ತೇಜಿಸುವುದು ಮುಖ್ಯವಾಗಿದೆ. ಮುಂದುವರೆದುಕೊಲ್ಹಾಪುರದ”ಲಖಪತಿಖೇತಿ” ಕೃಷಿ ಮಾದರಿಯನ್ನು ಉಲ್ಲೇಖಿಸಿ ನೈಸರ್ಗಿಕಕೃಷಿಯ ಮಹತ್ವವನ್ನುವಿವರಿಸಿದರು.
ಉಪನಿರ್ದೇಶಕ, ಕರ್ನಾಟಕರಾಜ್ಯ ಬೀಜ ಸಾವಯವ ಪ್ರಮಾಣೀಕರಣ ಸಂಸ್ಥೆ(ಕೆಎಸ್‍ಎಸ್‍ಒಸಿಎ), ಬೆಂಗಳೂರು, ಶ್ರೀ ಪರಶಿವಮೂರ್ತಿ ಎಸ್. ಎಸ್. ಇವರು ಕೆಎಸ್‍ಎಸ್‍ಒಸಿಎಯ ಕಾರ್ಯಾಚರಣೆಯರಚನೆ, ನೀತಿಗಳು ಹಾಗೂ ಪ್ರಸ್ತುತ ಯೋಜನೆಗಳ ಬಗ್ಗೆ ತಿಳಿಸಿದರಲ್ಲದೆ ಸಾವಯವ ಉತ್ಪನ್ನಗಳು ಹಾಗೂ ಪ್ರಮಾಣೀಕೃತ ಕೃಷಿ ಉತ್ಪಾದಕತೆಯ ಮಹತ್ವವನ್ನು ವಿವರಿಸಿದರು. ಅಧ್ಯಕ್ಷ,ಕಂಟ್ರೋಲ್‍ಯುನಿಯನ್ ಪ್ರಮಾಣೀಕರಣ ಸಂಸ್ಥೆ, ಮುಂಬೈ,ಡಾ. ಬಿನಯ್‍ಕುಮಾರಚೌದರಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಸಾವಯವಕೃಷಿಯಲ್ಲಿ ಸುಸ್ಥಿರ ಪ್ರಮಾಣಿಕರಣ,ಅಂತರಾಷ್ಟ್ರೀಯ ಮಾನದಂಡಗಳು ಹಾಗೂ ಪ್ರಮಾಣೀಕರಣ ಪಾತ್ರವನ್ನು ವಿವರಿಸಿದರು. ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಹೈಟೆಕ್‍ಅಗ್ರಿಕುಲಮ್ ಪ್ರೈವೇಟ್ ಲಿಮಿಟೆಡ್‍ಡಾ. ನಾಗರಾಜ ಹೆಗಡೆ ಸಾವಯವಗೊಬ್ಬರವನ್ನುತ್ವರಿತವಾಗಿತಯಾರಿಸುವ ಭೂಸಿರಿ ಯಂತ್ರ ಮತ್ತುಭೂಮಿತ್ರ ಮಣ್ಣುವಿಶ್ಲೆಷಣಾ ಯಂತ್ರಗಳು ಮತ್ತುಅದರಅನ್ವಯವನ್ನು ವಿವರವಾಗಿ ತಿಳಿಸಿದರು. ನಿರ್ದೇಶಕ, ಎಡಿಐಟಿಐ, ಆರ್ಗ್ಯಾನಿಕ್ ಸರ್ಟಿಫಿಕೇಶನ್, ಬೆಂಗಳೂರು ಡಾ. ನಾರಾಯಣಯು. ಸಾವÀಯವ ಬೆಳೆಗಳ ರಫ್ತಿಗೆ ಸಂಬಂಧಿಸಿದ ಕಾರ್ಯವಿಧಾನಗಳು ಮತ್ತು ಮಾನದಂಡಗಳ ಕುರಿತು ಮಾತನಾಡಿದರು.ಸಾವಯವ ಪ್ರಮಾಣೀಕರಣಅಧಿಕಾರಿ, ಕೆಎಸ್‍ಒಸಿಎ, ಬೆಂಗಳೂರು, ಶ್ರೀ ಎಲ್.ಬಿ. ನಾಗರಾಜಕಾಡು ಸಂಗ್ರಹಣೆ ಮತ್ತು ಪ್ರಾಮಾಣೀಕರಣಅನುಮೋದನೆಗೆ ಬೇಕಾಗುವ ದಾಖಲಾತಿಗಳ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ 175ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಹ್ವಾನಿತರು ಭಾಗವಹಿಸಿದ್ದರು. ಸಹಸಂಯೋಜಕರಾದಡಾ.ಕೆ.ವಿಆಶಲತ ಅಥಿತಿಗಳನ್ನು ಹಾಗೂ ಭಾಗವಹಿಸಿದವರನ್ನು ಸ್ವಾಗತಿಸಿದರು. ಡಾ. ಶ್ಯಾಮರಾವ್‍ಜಹಗೀರದಾರ, ಡಾ. ಬಿ.ಕೆ ನಾಯಕ, ಡಾ. ಜ್ಯೋತಿ ವಸ್ತ್ರದ, ಡಾ. ಕಾಂಬ್ರೇಕರ್ ಹಾಗೂ ಡಾ. ಗುರುದತ್ತ ಹೆಗಡೆಕಾರ್ಯಕ್ರಮವನ್ನು ಆಯೋಜಿಸಿದರು.