ಸಮಗ್ರ ಕೃಷಿ ನೀತಿಗೆ ಡಾ.ಸ್ವಾಮಿನಾಥನ ವರದಿ ಜಾರಿಗೊಳಿಸಿ : ಮಾಜಿ ಶಾಸಕ ಡೊಂಗರಗಾಂವ

ಅಥಣಿ:ಫೆ.28:ತೆಲಸಂಗ ಗ್ರಾಮದ ವಿಶ್ವ ಚೇತನ್ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಸಮಾರಂಭದಲ್ಲಿ ಮಾಜಿ ಶಾಸಕರಾದ ಶ್ರೀ ಶಹಾಜಹಾನ್ ಡೊಂಗರಗಾಂವ ಅವರು ಭಾಗವಹಿಸಿ ದೀಪ ಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಭಾರತ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ವಿದ್ಯಾವಂತರು ಕೃಷಿ ಕಡೆಗೆ ಒಲವುಲವು ತೋರಿಸಬೇಕಾದರೆ ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಕೃಷಿಯ ಬಗ್ಗೆ ಒಂದು ವಿಷಯ ಇರಬೇಕು ಹಾಗೂ ಡಾ. ಸ್ವಾಮಿನಾಥನ ವರದಿಯ ಪ್ರಕಾರ ಸಮಗ್ರ ಕೃಷಿ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು, ಹಾಗೂ ಈ ಸಂಸ್ಥೆಯ ಅಭಿವೃದ್ಧಿಯ ಕುರಿತು ಹರ್ಷ ವ್ಯಕ್ತ ಪಡಿಸಿದರು .

ಈ ವೇಳೆ ಬಾಬುರಾವ ಮಹಾರಾಜರು, ಗಜಾನನ ಮಂಗಸೂಳಿ, ಬಸವರಾಜ ಬಿಸನಕೊಪ್ಪ, ಸೇರಿದಂತೆ ಶಿಕ್ಷಕರು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.