ಸಮಗ್ರ ಕೃಷಿಗೆ ಒತ್ತು ನೀಡಲು ಕರೆ-ದೇಸಾಯಿ

ರಾಯಚೂರು,ಜು.೨೧-ಕೃಷಿಯಲ್ಲಿ ಹೇಗೆ ನಿರಂತರ ಬದಲಾವಣೆ ತರಬೇಕು ಎಂಬುದು ಇವತ್ತಿನ ಚಿಂತನೆಯ ವಿಷಯವಾಗಿದೆ. ಕೃಷಿಯೂ ಹಸಿವನ್ನು ನೀಗಿಸುವದರಿಂದ ಆರಂಭವಾಗಿ ಇಂದು ಐದನೆ ಹಂತದಲ್ಲಿ ಕೃಷಿಯಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆಯ ಹಂತದಲ್ಲಿ ಇದ್ದು, ಸಮಗ್ರ ಕೃಷಿಗೆ ಒತ್ತು ನೀಡಬೇಕೆಂದು ಡಾ.ಬಿ.ಕೆ ದೇಸಾಯಿ ಸಂಶೋಧನಾ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ ರಾಯಚೂರುರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ರೈತರಿಗೆ ತಿಳಿಸಿದರು.
ಪಬ್ಲಿಕ್ ಅಫೇರ್ಸ ಫೌಂಡೇಶನ್ ಬೆಂಗಳೂರು ಸಂಸ್ಥೆಯು ನಬಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಮೊಬೈಲ್ ಆಧಾರಿತ ಅಪ್ಲಿಕೇಶನ್‌ಗಳು, ನಾವೀನ್ಯತೆಗಳು, ಸ್ಮಾರ್ಟ್ ಕೃಷಿ ಪದ್ಧತಿ ಮತ್ತು ಅಸ್ತಿತ್ವದಲ್ಲಿರುವ ಪರಿವರ್ತಕ ಕೃಷಿ ತಂತ್ರಜ್ಞಾನ, ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ರೈತರಿಗೆ ಐಸಿಎಅರ್ ಕೃಷಿ ವಿಜ್ಞಾನ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಅವರಣ ರಾಯಚೂರಿನಲ್ಲಿ ದಿ.೨೦ ರಂದು ಹಮ್ಮಿಕೊಳ್ಳಲಾಗಿತ್ತು.
ದೇವಿಕ ಜಂಟಿ ನಿರ್ದೇಶಕರು ಕೃಷಿ ಇಲಾಖೆ ರಾಯಚೂರು, ಇವರು ಮಾತನಾಡುತ್ತ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಲ್ಲಿ ಏಫ್‌ಪಿಓ ಗಳ ಬಲವರ್ಧನೆಗೆ ಪ್ರಾಮುಖ್ಯತೆ ನೀಡಿದ್ದು, ಇಲಾಖೆಯು ಜಿಲ್ಲೆಯಲ್ಲಿ ೯ ಏಫ್‌ಪಿಓಗಳನ್ನು ಆರಂಭಿಸಿದೆ, ಅದರ ಜೊತೆಯಲ್ಲಿ ನಬಾರ್ಡ್ ಸಂಸ್ಥೆಯು ೨೦ಕ್ಕೂಹೆಚ್ಚು ಏಫ್‌ಪಿಓಗಳ ಜೊತೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ (ಔಆಔP)ಯಲ್ಲಿ ಜಿಲ್ಲೆಗೆ ಮೆಣಸಿನಕಾಯಿ ಉತ್ಪನ್ನ ನಿಗದಿಯಾಗಿದೆ ಎಂದರು. ಜೊತೆಗೆ ಕೆಲವು ಬೆಳೆಗಳನ್ನು ಉತ್ತೇಜಿಸಲು ಪ್ರೋತ್ಸಾಹಧನವನ್ನು ಇಲಾಖೆಯಲ್ಲಿ ನೀಡಲಾಗುತ್ತಿದೆ ಅದರ ಲಾಭವನ್ನು ಕೃಷಿಕರು ಪಡೆಯಬೇಕು ಎಂದು ತಿಳಿಸಿದರು. ಅದೆ ರೀತಿಯಾಗಿ ಕ್ರಾಪ್ ಸರ್ವೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು ದೇಶಕ್ಕೆ ಮಾದರಿಯಾಗಿದೆ ಎಂದರು.
ಕಲಾವತಿ ಎನ್ ಡಿಡಿಎಂ ನಬಾರ್ಡ್ ರಾಯಚೂರುರವರು ಮಾತನಾಡುತ್ತ, ಈ ತರಬೇತಿಯಲ್ಲಿ ತಂತ್ರಙ್ನಾನವನ್ನು ಕೃಷಿಯಲ್ಲಿ ಹೇಗೆ ಅಳವಡಿಸಬೇಕು ಎಂಬುದು ಚರ್ಚೆಯಾಗಲಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ತಿಳಿಸಿದರು.
ಶ್ರೀನಿವಾಸರವರು, ಮತ್ತು ಆರ್.ಕೆ ಬಾಲಚಂದರ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನಡೆಸಿಕೊಟ್ಟರು. ತರಬೇತಿಯಲ್ಲಿ ಸದ್ಯದಲ್ಲಿರುವ ಆನೇಕ ಮೊಬೈಲ್ ಯಾಪ್‌ಗಳನ್ನು ಪರಿಚಯ, ಉತ್ತಮ ಕೃಷಿಕನಾಗಳು ನಿರ್ವಹಿಸಬೇಕಾದ ಜವಾಬ್ದಾರಿಗಳು, ಬ್ಯಾಂಕ್‌ಗಳ ಜೊತೆಗೆ ವ್ಯವಹರಿಸುವಾಗ ಇರುವ ಸವಾಲುಗಳು ಮತ್ತು ಅನುಸರಿಸಬೇಕಾದ ನಿಯಮಗಳ ಕುರಿತಾಗಿ, ಹಾಗೂ ಮಿಶ್ರಬೇಸಾಯದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಲಾಯಿತು. ರಾಯಚೂರು ಜಿಲ್ಲೆಯ ನಾನಾ ಭಾಗಗಳಿಂದ ಭಾಗವಹಿಸಿದ ರೈತರು ತಮ್ಮ ಅನುಭವದ ಆಧಾರದ ಮೇಲೆ ಅನೇಕ ಪ್ರಶ್ನೆಗಳನ್ನು ಕೇಳಿ ಚರ್ಚೆಯಲ್ಲಿ ಭಾಗವಸಿದರು.
ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿಲಾಯಿತು. ಡಾ. ಅನ್ನಪೂರ್ಣ ರವಿಚಂದರ್ ನಿರ್ದೇಶಕರು ಪಬ್ಲಿಕ್ ಅಫೇರ್ಸ ಫೌಂಡೇಶನ್ ಬೆಂಗಳೂರು ಸಂಸ್ಥೆಯ ಪರಿಚಯ ಮಾಡಿಕೊಟ್ಟರು, ಆಶ್ವಿನಿರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ತರಬೇತಿಯಲ್ಲಿ ೩೩ ರೈತರು ಭಾಗವಹಿಸಿದ್ದು, ಇಂದಿರಾ ಪಿಚುಮಣಿರವರು ಕಾರ್ಯಕ್ರಮವನ್ನು ನಿರ್ವಹಿಸಿದರು.