ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

ದಾವಣಗೆರೆ.ನ.೮ :  ನಗರದ ಪ್ರವಾಸಿ ಮಂದಿರದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅವಿನಾಶ್ ವಿ ಅವರ ಅಧ್ಯಕ್ಷತೆಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯನ್ನು ಅಸಿತ್ವಕ್ಕೆ ತರಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಮೇಯರ್ ಹಾಲಿ ಪಾಲಿಕೆ ಸದಸ್ಯರಾದ ಎಸ್.ಟಿ.ವೀರೇಶ್‌ರವರು, ಒಂದು ಸಂಘಟನೆ ಸ್ಥಾಪನೆ ಮಾಡುವುದು ಸುಲಭದ ವಿಚಾರ ಆದರೆ, ಸಂಘಟನೆಯನ್ನು ಬಲ ಪಡಿಸುವುದು ಹಾಗೂ ಸಂಘಟನೆ ಬಲ ಹೆಚ್ಚಿಸುವ ಕಾರ್ಯ ವಿಶೇಷವಾದದ್ದು, ಆದರೆ, ಹಲವು ವರ್ಷಗಳ ಅನುಭವವುಳ್ಳ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅವಿನಾಶ್‌ರವರು ಹಾಗೂ ಬಳಗದವರು ಇದನ್ನು ಸಹಜವಾಗಿಯೇ ತೆಗೆದುಕೊಂಡಿರುವುದು ವಿಶೇಷವಾದ ಸಂಗತಿ ಎಂದರು. ಸಮಾರಂಭದಲ್ಲಿ ಪಾಲ್ಗೊಂಡಂತಹ ರಾಜ್ಯ, ಜಿಲ್ಲಾ, ಗ್ರಾಮ, ವಾರ್ಡ್ ಘಟಕಗಳ ಕನ್ನಡ ಸೇನಾನಿಗಳಿಗೆ ನೇಮಕಾತಿ ಆದೇಶ ಪತ್ರ ಹಾಗೂ ಗುರುತಿನ ಚೀಟಿಯನ್ನು ವ್ಯವಸ್ಥಿತವಾಗಿ ವಿತರಣೆ ಮಾಡಿದ್ದನ್ನು ಕಂಡು ವೀರೇಶ್  ಶ್ಲಾಘನೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾದ್ಯಂತ ಹೆಸರು ಮಾಡಿ, ಉನ್ನತ ಮಟ್ಟಕ್ಕೆ ಸಾಗಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವಿನಾಶ್ ವಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಾಲಾನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್., ರಾಜ್ಯ ಉಪಾಧ್ಯಕ್ಷರು ಎಂ. ಜಾಕೀರ್, ರೆಹಮಾನ್ ಖಾನ್, ಜಿಲ್ಲಾಧ್ಯಕ್ಷರಾದ ಬಿ.ಹೆಚ್. ಮಂಜುನಾಥ್, ಉಪಾಧ್ಯಕ್ಷರಾದ ಆನಂದ್ ಇಟ್ಟಿಗುಡಿ, ಎನ್.ಎಸ್. ಈರಣ್ಣ, ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಫಯಾಜ್ ಬೇತೂರು, ಅಯೂಬ್ ಖಾನ್, ಭೋಜರಾಜ, ರಾಜು ಆನೆಕೊಂಡ, ಬಸವರಾಜ್ ಹೆಚ್.ಆರ್., ಆವರಗೆರೆ ನಾಗರಾಜ್, ನಿಂಗರಾಜ್ ಬಸಾಪುರ, ಹನುಮಂತಪ ಬಸಾಪುರ, ಶಾಂತಮ್ಮ, ಮುಬೀನ, ರಾಧ ಸೇರಿದಂತೆ ಇನ್ನಿತರೆ ಕಾರ್ಯಕರ್ತರು ಭಾಗವಹಿಸಿದ್ದರು.